ಮುಂಬೈ: ಪ್ರಸಕ್ತ ವರ್ಷದಲ್ಲಿ ಏಕದಿನ ವಿಶ್ವಕಪ್ ಹಾಗೂ ಏಷ್ಯಾಕಪ್‌ಗೂ ಮುನ್ನ ಟೀಂ ಇಂಡಿಯಾ (Team India) ಐರ್ಲೆಂಡ್ ವಿರುದ್ಧ 3 ಪಂದ್ಯಗಳ T20 ಸರಣಿಯನ್ನಾಡಲಿದ್ದು, ಪಂದ್ಯಗಳಿಗೆ BCCI ದಿನಾಂಕ ನಿಗದಿಪಡಿಸಿದೆ.
Advertisement
ಈಗಾಗಲೇ ಭಾರತ, ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಗೆ ವೇಳಾಪಟ್ಟಿ ನಿಗದಿಮಾಡಿದೆ. ಆಗಸ್ಟ್ 3 ರಿಂದ ಆಗಸ್ಟ್ 13ರ ವರೆಗೆ 5 ಪಂದ್ಯಗಳ T20 ಸರಣಿ ಮುಗಿದ ನಂತರ ಭಾರತ ತಂಡ ಐರ್ಲೆಂಡ್ (Ireland) ಜೊತೆಗೆ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ವಿಶ್ವಕಪ್ ವೇಳಾಪಟ್ಟಿ ಹೊರಬಿದ್ದ ಬೆನ್ನಲ್ಲೇ ಭಾರತಕ್ಕೆ ಬರಲು ಪಾಕ್ ಆಕ್ಷೇಪ
Advertisement
Advertisement
ಆಗಸ್ಟ್ 18 ರಿಂದ 23ರ ವರೆಗೆ ಡಬ್ಲಿನ್ ಹೊರವಲಯದಲ್ಲಿರುವ ಮಲಾಹೈಡ್ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಸರಣಿ ನಡೆಯಲಿದೆ. ಕಳೆದ ವರ್ಷ ಜೂನ್‌ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲೇ ಎರಡು ಪಂದ್ಯಗಳ ಟಿ20 ಸರಣಿಯನ್ನಾಡಿದ್ದ ಭಾರತ ಟ್ರೋಫಿ ಗೆದ್ದಿತ್ತು. ಪುನಃ ಒಂದು ವರ್ಷಗಳ ಬಳಿಕ ಸರಣಿಯನ್ನಾಡುತ್ತಿದ್ದು, ಗೆಲ್ಲುವ ವಿಶ್ವಾಸ ಹೊಂದಿದೆ. ಐರ್ಲೆಂಡ್ ತಂಡದ ಸಿಇಒ ವಾರೆನ್ ಸಹ ಭಾರತ ತಂಡವನ್ನ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ICC ODI World Cup 2023: ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ
Advertisement
ಸದ್ಯ ಬಿಸಿಸಿಐ ಟಿ20 ಸರಣಿಗೆ ದಿನಾಂಕ ನಿಗದಿಪಡಿಸಿದ್ದು, ಸೂಕ್ತ ಆಟಗಾರರನ್ನೊಳಗೊಂಡ ತಂಡವನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ತಿಳಿಸಿದೆ. ಹಾರ್ದಿಕ್ ಪಾಂಡ್ಯ ಅವರಿಗೇ ಟಿ20 ನಾಯಕತ್ವದ ಹೊಣೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಐರ್ಲೆಂಡ್ ವಿರುದ್ಧ ಟಿ20 ಸರಣಿ ಯಾವಾಗ..?
(ಮಲಾಹೈಡ್ ಕ್ರೀಡಾಂಗಣ – ಸಮಯ ಪ್ರತಿದಿನ ಮಧ್ಯಾಹ್ನ 3 ಗಂಟೆ)
* ಆಗಸ್ಟ್-18: ಮೊದಲ T20
* ಆಗಸ್ಟ್-20: 2ನೇ T20
* ಆಗಸ್ಟ್ 23: 3ನೇ T20I