ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಮನವೊಲಿಕೆ ಬಳಿಕ ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಮಲಿಂಗಾರೆಡ್ಡಿ (Ramalinga Reddy) ಅವರು ವಾಪಸ್ ಪಡೆದುಕೊಂಡಿದ್ದಾರೆ.
ರಾಜೀನಾಮೆ ವಾಪಸ್ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಿನ್ನೆ ಸಿಎಂ ಜೊತೆ ಎಲ್ಲಾ ಮಾತನಾಡಿದ್ದೇನೆ. ಅವರು ರಾಜೀನಾಮೆ accept ಮಾಡಲ್ಲ ಅಂದಿದ್ದಾರೆ. Accept ಇಲ್ಲ ಅಂದ್ರೆ ವಾಪಸ್ ಅಂತಾನೆ ಅರ್ಥ. ಸದ್ಯಕ್ಕೆ ಯಾವ ಗೊಂದಲವೂ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರಾಮಲಿಂಗಾರೆಡ್ಡಿ ಮನವೊಲಿಸುವಲ್ಲಿ ಸಫಲ, ಸಚಿವ ಸ್ಥಾನಕ್ಕೆ ಕೊಟ್ಟ ರಾಜೀನಾಮೆ ವಾಪಸ್: ಸುರ್ಜೇವಾಲ
ನಾನಾಗಿ ಯಾವ ಖಾತೆಯನ್ನೂ ಕೇಳಿಲ್ಲ. ನೋಡೋಣ ಯಾವ ಖಾತೆ ಕೊಡ್ತಾರೆ ಅಂತ. ಮುಂದೆ ಅವಕಾಶ ಮಾಡಿಕೊಡ್ತೇವೆ ಅಂದಿದ್ದಾರೆ. ಮುಂದೆ ಏನಾಗುತ್ತೆ ನೋಡೋಣ ಎಂದು ಹೇಳಿದರು.
ಸುರ್ಜೇವಾಲ ಸಭೆ
ಖಾಸಗಿ ಹೋಟೆಲ್‌ನಲ್ಲಿ ಸಿಎಂ ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ, ಬಿ.ಕೆ.ಹರಿಪ್ರಸಾದ್ ಜೊತೆ ರಣದೀಪ್ ಸುರ್ಜೇವಾಲ ಇಂದು ಸಭೆ ನಡೆಸಿದರು. ಬೆಂಗಳೂರು ಅಭಿವೃದ್ಧಿ ಖಾತೆ ಕೊಡಲು ಸಾಧ್ಯವಿಲ್ಲ. ಇರುವ ಖಾತೆ ಜೊತೆಗೆ ಮತ್ತೊಂದು ಖಾತೆ ನೀಡಲಾಗುವುದು ಎಂದು ರೆಡ್ಡಿಗೆ ಭರವಸೆ ನೀಡಿದರು. ಇದನ್ನೂ ಓದಿ: ರಾಮಲಿಂಗಾ ರೆಡ್ಡಿ ಬೆಂಗಳೂರು ನಗರದ ಪಿಲ್ಲರ್ ಆಗಿ ಅಜಾತಶತ್ರು ಎನಿಸಿಕೊಂಡಿದ್ದಾರೆ: ಬಿಕೆ ಹರಿಪ್ರಸಾದ್
ನೀವು ಸಚಿವ ಸ್ಥಾನಕ್ಕೆ ನೀಡಿದ ರಾಜೀನಾಮೆ ವಾಪಾಸ್ ಪಡೆಯಿರಿ. ಈ ವಿಚಾರ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿ ನಿಮಗೆ ತಿಳಿಸುತ್ತೇನೆ. ಹೈಕಮಾಂಡ್ ಹೇಳುವ ಖಾತೆಯಲ್ಲಿ ನೀವು ಮುಂದುವರಿಯಬೇಕಾಗುತ್ತದೆ ಎಂದು ತಿಳಿಸಿದರು. ಸುರ್ಜೇವಾಲ ಸೂಚನೆ ಮೇರೆಗೆ ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆದಿದ್ದಾರೆ.
