ಬೆಂಗಳೂರು: ರಾಮಲಿಂಗಾ ರೆಡ್ಡಿ (Ramalinga Reddy) ಬೆಂಗಳೂರು (Bengaluru) ನಗರದ ಪಿಲ್ಲರ್ ಅಗಿ ಅಜಾತಶತ್ರು ಎಂದೆನಿಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ (BK Hariprasad) ಹೇಳಿದ್ದಾರೆ.
ರಾಮಲಿಂಗಾ ರೆಡ್ಡಿ ರಾಜೀನಾಮೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಂಭೀರವಾದ ಸಮಸ್ಯೆ ಏನಿಲ್ಲ. ಸಂವಹನದ ಕೊರತೆಯಾಗಿದೆ. ಸಿಎಂ, ನಾನು ಇಬ್ಬರೂ ಮಾತನಾಡಿದ್ದೇವೆ. ರಾಜೀನಾಮೆ ಅಂಗೀಕಾರ ಆಗಲ್ಲ. ರಾಜೀನಾಮೆ ವಾಪಸ್ ಪಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದರು. ವಚನಭ್ರಷ್ಟತೆ ವಿಚಾರವಾಗಿ ಪ್ರತಿಕ್ರಿಯಿಸಿ, ಕೆಲವೊಂದು ಸಂಧರ್ಭದಲ್ಲಿ ಹೀಗೆ ಆಗುತ್ತದೆ. ಸಮಸ್ಯೆ ಎಲ್ಲವೂ ಬಗೆಹರಿಸುತ್ತಾರೆ ಎಂದು ನುಡಿದರು. ಇದನ್ನೂ ಓದಿ: ರಾಜ್ಯಸಭೆ ಟಿಕೆಟ್‌ಗೆ ಸುಮಲತಾ ಅಂಬರೀಶ್ ಕಸರತ್ತು
ಪರಿಷತ್‌ಗೆ ಐದನೇ ಅಭ್ಯರ್ಥಿ ಹಾಕಿರುವ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷ ಅದಕ್ಕೆ ಅಗತ್ಯ ಪ್ಲಾನ್ ಮಾಡಿಕೊಂಡಿದೆ. ನಮ್ಮವರೇ ಗೆಲ್ಲುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕರಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್
