ಬೆಂಗಳೂರು: ಚೆನ್ನಮ್ಮ ಅವರು ಶಿವೈಕ್ಯರಾಗುವ ಮೂರು ದಿನಗಳಿಗೂ ಮುನ್ನ ಪತಿ ಹೆಚ್.ಡಿ.ದೇವೇಗೌಡರ (H.D.Deve Gowda) ಜೊತೆ ಕಳೆದ ಅವಿಸ್ಮರಣೀಯ ಕ್ಷಣಗಳ ವೀಡಿಯೋ ರಿವೀಲ್ ಆಗಿದೆ.
ಆಸ್ಪತ್ರೆಗೆ ದಾಖಲಾಗುವ ಮುನ್ನ ಚೆನ್ನಮ್ಮ (Chennamma) ಅವರು ಪತಿ ದೊಡ್ಡಗೌಡರ ಜೊತೆ ಕೆಲವು ಕ್ಷಣಗಳನ್ನು ಕಳೆದಿದ್ದರು. ದೇವೇಗೌಡರು ಪತ್ನಿಗೆ ಬಾಳೆಹಣ್ಣು ತಿನ್ನಿಸಿ, ಭುಜ ತಟ್ಟಿ ಧೈರ್ಯ ಹೇಳಿದ್ದಾರೆ. ಇದನ್ನೂ ಓದಿ: ನನಗಾಗಿ ಅವರು ಆ್ಯಸಿಡ್ ಹಾಕಿಸಿಕೊಂಡಿದ್ರು, ನನ್ನ ದೇವತೆಯನ್ನೇ ಕಳೆದುಕೊಂಡೆ: ಬಿಕ್ಕಿ ಬಿಕ್ಕಿ ಅತ್ತ ಹೆಚ್.ಡಿ.ರೇವಣ್ಣ
ಬಳಿಕ ಚೆನ್ನಮ್ಮ ಅವರು ಪತಿಯ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ಭಾವಪೂರ್ಣ ಕ್ಷಣಗಳನ್ನು ವೀಡಿಯೋದಲ್ಲಿ ಸೆರೆಹಿಡಿಯಲಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಚೆನ್ನಮ್ಮ ಅವರು 1954ರ ಮೇ 25 ರಂದು ವಿವಾಹವಾದರು. ಈ ದಂಪತಿ 72 ವರ್ಷಗಳ ಸುದೀರ್ಘ ಹಾಗೂ ಆದರ್ಶಪ್ರಾಯವಾದ ದಾಂಪತ್ಯ ಜೀವನವನ್ನು ನಡೆಸಿದ್ದಾರೆ.
ದಂಪತಿಗೆ ಹೆಚ್.ಡಿ.ಬಾಲಕೃಷ್ಣ ಗೌಡ, ಹೆಚ್.ಡಿ.ರೇವಣ್ಣ, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರಮೇಶ್ ಎಂಬ ನಾಲ್ಕು ಗಂಡುಮಕ್ಕಳು ಹಾಗೂ ಅನಸೂಯ ಮತ್ತು ಶೈಲಜಾ ಎಂಬ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಇದನ್ನೂ ಓದಿ: ಗೌಡರಿಗಾಗಿ ಊಟ ಮಾಡದೇ ಕಾಯುತ್ತಿದ್ರು – ಅತ್ತೆ ನೆನೆದು ಡಾ.ಮಂಜುನಾಥ್ ಭಾವುಕ
ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಚಿಕಿತ್ಸೆ ಫಲಿಸದೇ ಶನಿವಾರ ಆಸ್ಪತ್ರೆಯಲ್ಲಿ ನಿಧನರಾದರು. ಚೆನ್ನಮ್ಮ ಅವರ ಅಂತ್ಯಕ್ರಿಯೆ ಸೋಮವಾರ ದೇವೇಗೌಡರ ಹುಟ್ಟೂರಿನಲ್ಲಿ ನಡೆಯಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
