ಹುಬ್ಬಳ್ಳಿ: ವಿಮಾನ ಟಿಕೆಟ್ ಬುಕಿಂಗ್ ವೇಳೆ ಗ್ರಾಹಕರನ್ನು ದಾರಿ ತಪ್ಪಿಸುವ ರೀತಿಯ ‘ಡಾರ್ಕ್ ಪ್ಯಾಟರ್ನ್’ ಬಳಕೆ ಮಾಡಿದ್ದ ಆರೋಪದ ಮೇಲೆ ಸ್ಪೈಸ್‌ಜೆಟ್ (Spicejet) ಏರ್‌ಲೈನ್ಸ್ ಸಂಸ್ಥೆಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) 1 ಲಕ್ಷ ರೂ. ದಂಡ ವಿಧಿಸಿದೆ.
ವಿಮಾನ ಟಿಕೆಟ್ ಬುಕ್ (Flight Ticket Booking) ಮಾಡುವ ವೇಳೆ ಗ್ರಾಹಕರ ಸ್ಪಷ್ಟ ಒಪ್ಪಿಗೆ ಪಡೆಯದೇ, ಪೂರ್ವನಿಯೋಜಿತ ಸಮ್ಮತಿ (Default Consent) ಹಾಗೂ ಪ್ರಚಾರಾತ್ಮಕ ಸಂದೇಶಗಳನ್ನು ಸ್ವಯಂಚಾಲಿತವಾಗಿ ಆಯ್ಕೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ರೈತರು ಯಾವ್ದೇ ಕಾರಣಕ್ಕೂ ಕೃಷಿಗೆ ನೀರು ಬಳಕೆ ಮಾಡಬಾರದು: ಸಿಎಂ ಡಿಕೆಶಿ ಮತ್ತೆ ವಾರ್ನಿಂಗ್

ಈ ವಿಚಾರ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರ ಗಮನಕ್ಕೆ ಬಂದ ಬಳಿಕ, ಪ್ರಕರಣದ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.
ಸಚಿವರ ನಿರ್ದೇಶನದಂತೆ ತನಿಖೆ ನಡೆಸಿದ CCPA, ಸ್ಪೈಸ್‌ಜೆಟ್ ತನ್ನ ಆನ್‌ಲೈನ್ ವೇದಿಕೆಯಲ್ಲಿ ಗ್ರಾಹಕರ ನಿರ್ಧಾರವನ್ನು ಪ್ರಭಾವಿಸುವ ಹಾಗೂ ದಾರಿ ತಪ್ಪಿಸುವ ಇಂಟರ್‌ಫೇಸ್ ಬಳಸಿರುವುದನ್ನ ಪತ್ತೆಹಚ್ಚಿದೆ. ಇದನ್ನೂ ಓದಿ: ಕೊಡಗಿನಲ್ಲಿ ಕೋಬಾಲ್ಟ್, ನಿಕಲ್ ಖನಿಜಗಳ ನಿಕ್ಷೇಪ ಪತ್ತೆ..? – ಕೃಷಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ಗ್ರಾಮಸ್ಥರು
ಈ ಹಿನ್ನೆಲೆಯಲ್ಲಿ ಸಂಸ್ಥೆಗೆ 1 ಲಕ್ಷ ರೂ. ದಂಡ ವಿಧಿಸುವುದರ ಜೊತೆಗೆ, ಡೀಫಾಲ್ಟ್ ಸಮ್ಮತಿ (Default Consent) ಪದ್ಧತಿಯನ್ನು ತಕ್ಷಣ ಮತ್ತು ಶಾಶ್ವತವಾಗಿ ನಿಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ. ಇನ್ಮುಂದೆ ಆನ್‌ಲೈನ್ ಟಿಕೆಟ್ ಬುಕಿಂಗ್ ವೇಳೆ ಗ್ರಾಹಕರ ಒಪ್ಪಿಗೆ ಸ್ಪಷ್ಟ, ಮಾಹಿತಿಯುಕ್ತ ಮತ್ತು ಸ್ವಯಂಪ್ರೇರಿತವಾಗಿರಬೇಕು ಎಂದು CCPA ಸೂಚಿಸಿದೆ.
