– ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬಾಸ್ ಸಿನಿಮಾ (Boss Movie) ರಿಲೀಸ್ ಮಾಡಬೇಡಿ ಎಂದು ಕೋರಿ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಆ ಮೂಲಕ ಸಿನಿಮಾ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಸೆನ್ಸಾರ್ ಮಂಡಳಿಯ ಸೂಚನೆಯಂತೆ ಚಿತ್ರ ಬಿಡುಗಡೆ ಮಾಡಲು ಹೈಕೋರ್ಟ್ ಸೂಚನೆ ನೀಡಿದೆ. ʼಇದೊಂದು ಕಾಲ್ಪನಿಕ ಚಲನಚಿತ್ರ.. ಯಾರ ಜೀವನಾಧಾರಿತ ಅಲ್ಲʼ ಎಂದು ಪ್ರಕಟಿಸಬೇಕು. ಚಲನಚಿತ್ರ ಪ್ರಸಾರಕ್ಕೂ ಮುನ್ನ ಪ್ರಕಟಿಸಬೇಕೆಂದು ಕೋರ್ಟ್ ತಿಳಿಸಿದೆ. ಇದನ್ನೂ ಓದಿ: ಆಷಾಢ ಶುಕ್ರವಾರ | ಚಾಮುಂಡಿ ತಾಯಿ ದರ್ಶನ ಪಡೆದ ದರ್ಶನ್ ಪತ್ನಿ
ಸೆನ್ಸಾರ್ ಮಂಡಳಿಯ ಸೂಚನೆ ಪಾಲಿಸಲು ಹೈಕೋರ್ಟ್ ಆದೇಶಿಸಿದೆ. ಈಗಾಗಲೇ ಬಾಸ್ ಚಲನಚಿತ್ರ ಸೆನ್ಸಾರ್‌ಗೊಂಡಿತ್ತು. ಸೆನ್ಸಾರ್ ಬಳಿಕ ಚಿತ್ರ ಬಿಡುಗಡೆಗೆ ತಯಾರಿ ಆಗಿತ್ತು. ಆಗ ಹೈಕೋರ್ಟ್ ತಡೆ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ಆಗಿರಲಿಲ್ಲ.
