ಬೆಂಗಳೂರು: ನಿರ್ಮಾಪಕರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ (Defamation Case) ಸಂಬಂಧಿಸಿದಂತೆ ಇಂದು ನಟ ಸುದೀಪ್ ಎಸಿಜೆಎಂ ಕೋರ್ಟ್‌ಗೆ (ACJM) ಹಾಜರಾಗಲಿದ್ದಾರೆ.
ಸಿನಿಮಾ ಕಾಲ್‌ಶೀಟ್ ಕೊಡೋದಾಗಿ ಹೇಳಿ ನಟ ಸುದೀಪ್ (Actor Sudeep) 9 ಕೋಟಿ ರೂ. ಪಡೆದಿದ್ದರು ಎಂದು ನಿರ್ಮಾಪಕರು ಆರೋಪಿಸಿದ್ದರು. ಈ ಸಂಬಂಧ 2023ರಲ್ಲಿ 7ನೇ ಎಸಿಜೆಎಂ ನ್ಯಾಯಾಲಯದಲ್ಲಿ ನಿರ್ಮಾಪಕರಾದ ಎಂ.ಎನ್ ಕುಮಾರ್ ಮತ್ತು ಎಂ.ಎನ್ ಸುರೇಶ್ ಅವರ ವಿರುದ್ಧ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದನ್ನೂ ಓದಿ: ಕೋರ್ಟ್ ಕಟಕಟೆಯಲ್ಲಿ ಎಂ.ಎನ್ ಕುಮಾರ್ ವಿರುದ್ಧ ಹೇಳಿಕೆ ನೀಡಿದ ಕಿಚ್ಚ ಸುದೀಪ್
ಈ ಸಂಬಂಧ ಇಂದು ನಿರ್ಮಾಪಕರ ಪರ ವಕೀಲರು ನಟ ಸುದೀಪ್ ಅವರ ಕ್ರಾಸ್ ಎಕ್ಸಾಮಿನೇಷನ್ ನಡೆಸಲಿದ್ದಾರೆ. ಇದಕ್ಕೂ ಮುನ್ನ ವಿಚಾರಣೆ ನಡೆದಾಗ ಸುದೀಪ್ ಹಾಜರಾಗಿದ್ದರು. ಸದ್ಯ ಪ್ರಕರಣ ಎವಿಡೆನ್ಸ್ ಹಂತದಲ್ಲಿದೆ.
