ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (viral video) ವೈರಲ್ ಆಗಿದ್ದು, ಗುರುತೇ ಸಿಗದಂತಿರುವ ಬಾಯಿಜಾನ್‌ನನ್ನು ನೋಡಿ ಅವರಿಗೆ ಆರೋಗ್ಯ ಸಮಸ್ಯೆಯೇನಾದರೂ ಇದೆಯಾ ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸಲ್ಲು ಭಾಯ್ ಅವರ ಇತ್ತೀಚಿನ ವಿಡಿಯೋ ನೋಡಿದ ಹಲವರು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಮುಂಬೈನ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ (SRA) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗವಹಿಸಿದ್ದರು. ಈ ವೇಳೆ ಅವರು ಹೊಸ ಡೇಟಾ ಸಂಗ್ರಹಣೆ ಮತ್ತು ಪರಿಶೀಲನಾ ಕೇಂದ್ರವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳಲ್ಲಿ ಚರ್ಚೆ ಶುರುವಾಯಿತು. ‘ಸಲ್ಮಾನ್ ಯಾಕೆ ಇಷ್ಟು ವಯಸ್ಸಾದಂತೆ ಕಾಣುತ್ತಿದ್ದಾರೆ?, ಭಾಯ್‌ಗೆ ಏನಾಯಿತು?, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರಾ?, ನಮ್ಮ ಹೀರೋಗೆ ವಯಸ್ಸಾಗುತ್ತಿದೆ, ದೇವರು ಅವರಿಗೆ ಉತ್ತಮ ಆರೋಗ್ಯ ಕೊಡಲಿ’ ಎಂಬ ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.ಇದನ್ನೂ ಓದಿ: ಕಾಂಜೀವರಂ ಸೀರೆಯಲ್ಲಿ ಮಿಂಚಿದ ಸಾಯಿ ಪಲ್ಲವಿ; ಸಿಂಪಲ್ ಲುಕ್‌ಗೆ ಫಿದಾ ಆದ ಫ್ಯಾನ್ಸ್
ನಿಜವಾಗಿಯೂ ಸಲ್ಮಾನ್ ಖಾನ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಯಿದೆಯೇ? ಅಥವಾ ಅವರು ಸಹಜವಾಗಿಯೇ ತೂಕ ಇಳಿಸಿಕೊಂಡಿರುವುದರಿಂದ ಹೀಗೆ ಕಾಣಿಸುತ್ತಿದ್ದಾರೆಯೇ? ಎಂಬುದರ ಬಗ್ಗೆ ಅವರು ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಏನೇ ಆಗಲಿ, ಸಲ್ಮಾನ್ ಖಾನ್ ಆರೋಗ್ಯವಾಗಿರಲಿ ಎಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.ಇದನ್ನೂ ಓದಿ: ಚೆನ್ನಮ್ಮ ಅಂತಿಮ ದರ್ಶನ ಪಡೆದ ದುನಿಯಾ ವಿಜಯ್, ದೊಡ್ಡಣ್ಣ, ಡಾಲಿ
