ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಪ್ರಚಾರಕ್ಕೆ ಚಾಲನೆ ಸಿಕ್ಕಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ (Sai Pallavi)ತಮ್ಮ ಟ್ರೆಡಿಷನಲ್ ಲುಕ್‌ನಿಂದ ಎಲ್ಲರ ಗಮನ ಸೆಳೆದರು.
ಗುಲಾಬಿ-ಗೋಲ್ಡ್ ಬಣ್ಣದ ಕಾಂಜೀವರಂ ಸೀರೆ, ಟೆಂಪಲ್ ಡಿಸೈನ್ ಆಭರಣ ಧರಿಸಿ ಸಾಯಿ ಪಲ್ಲವಿ ಎಲಿಗೆಂಟ್ ಲುಕ್‌ನಲ್ಲಿ ಕಣ್ಮನ ಸೆಳೆದರು.
ಅವರು ಧರಿಸಿದ್ದ ಕಾಂಜೀವರಂ ಸೀರೆ, ಗೋಲ್ಡ್ ಟೆಂಪಲ್ ಜ್ಯುವೆಲ್ಲರಿ, ಗುಲಾಬಿ ಬಣ್ಣದ ಬ್ಲೌಸ್, ಕೆಂಪು ಬಿಂದಿ, ಜುಮ್ಕಾ, ಕೈಯಲ್ಲಿ ಬಳೆಗಳು ಹಾಗೂ ನ್ಯಾಚುರಲ್ ಮೇಕಪ್ ಅವರ ಲುಕ್‌ಗೆ ಮತ್ತಷ್ಟು ಮೆರುಗು ನೀಡಿತು. ಸಹಜವಾದ ಕರ್ಲಿ ಹೇರ್‌ಸ್ಟೈಲ್ ಕೂಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಸೀತೆ ಪಾತ್ರದ ಬಗ್ಗೆ ಸಾಯಿ ಪಲ್ಲವಿ ಮಾತು
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ಸೀತೆ ಪಾತ್ರವನ್ನು ನಾನು ಹುಡುಕಿಕೊಂಡು ಹೋಗಿಲ್ಲ. ಆ ಪಾತ್ರವೇ ನನ್ನನ್ನು ಹುಡುಕಿಕೊಂಡು ಬಂದಿದೆ. ಇದು ನನಗೆ ಸಿಕ್ಕ ಆಶೀರ್ವಾದ, ಪುಣ್ಯ ಎಂದು ಹೇಳಿದರು.
ಸೀತೆ ಪಾತ್ರ ಮಾಡುವುದು ಸುಲಭವಲ್ಲ. ಅದಕ್ಕೆ ಇಡೀ ತಂಡದ ಸಮರ್ಪಣೆ ಬೇಕು. ಶೂಟಿಂಗ್ ವೇಳೆ ಪ್ರತಿದಿನ ‘ಸೀತಾ ಮಾ… ನನ್ನ ಮೂಲಕ ನೀವೇ ಅಭಿನಯಿಸಿ’ ಎಂದು ಮನಸಾರೆ ಪ್ರಾರ್ಥಿಸುತ್ತಿದ್ದೆ. ಈ ಪಾತ್ರಕ್ಕಾಗಿ ನನ್ನ ಆಲೋಚನೆಗಳಲ್ಲೂ ಶುದ್ಧತೆ ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದೆ. ಪರದೆಯ ಮೇಲೆ ಸೀತೆಯ ಅತ್ಯುತ್ತಮ ರೂಪವನ್ನು ತೋರಿಸಬೇಕು ಎನ್ನುವುದೇ ನನ್ನ ಉದ್ದೇಶವಾಗಿತ್ತು ಎಂದು ಅವರು ಹೇಳಿದರು. ಇದನ್ನೂ ಓದಿ: ಹೊಳೆನರಸೀಪುರಕ್ಕೆ ಅಂತಿಮ ಯಾತ್ರೆ ಹೊರಟ ಚೆನ್ನಮ್ಮ ಪಾರ್ಥಿವ ಶರೀರ
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ 1’ ಸಿನಿಮಾ ಸುಮಾರು 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದು, 2026ರ ನವೆಂಬರ್ 8ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಕನ್ನಡ ನಟ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಇದನ್ನೂ ಓದಿ: ಹೋಂಸ್ಟೇ ನೋಂದಣಿ ಕಡ್ಡಾಯ – ಇದುವರೆಗೂ 500ಕ್ಕೂ ಅಧಿಕ ಹೋಂಸ್ಟೇಗಳ ನೋಂದಣಿಗೆ ಅರ್ಜಿ
