ಬೆಂಗಳೂರು: ಯಲಹಂಕ ಓಲ್ಡ್ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿ 11 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಡ್ರಗ್ಸ್ಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಇಮ್ರಾನ್ ಸಿದ್ದಿಕ್ ಮತ್ತು ಆಯಿಷಾ ಬಂಧಿತ ಆರೋಪಿಗಳು. ಆರೋಪಿಗಳು ದೆಹಲಿಯಿಂದ ಬೆಂಗಳೂರಿಗೆ (Bengaluru) ಡ್ರಗ್ಸ್ ತರುತ್ತಿದ್ದರು. ಬಳಿಕ ಯಲಹಂಕ ಉಪನಗರದ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ: ಪಾಕಿಸ್ತಾನದ ಹ್ಯಾಂಡ್ಲರ್ ಶಹಜಾದ್ ಭಟ್ಟಿ ಜಾಲದ ಸಂಪರ್ಕ ಶಂಕೆ – ಮೀರತ್ನಲ್ಲಿ ಉಜೈದ್ ಬಂಧನ
ಬಂಧಿತರಿಂದ 5 ಕೆಜಿಗೂ ಹೆಚ್ಚಿನ ತೂಕದ MDMA ಮತ್ತು ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಠಾಣೆಯಲ್ಲೇ ಐವರು ಪೊಲೀಸರಿಗೆ ಚಾಕು ಇರಿದು ಪರಾರಿ, ಬಂಧನದ ವೇಳೆ ಮತ್ತೆ ನಾಲ್ವರಿಗೆ ಇರಿತ – ದುಷ್ಕರ್ಮಿ ಕಾಲಿಗೆ 6 ಗುಂಡೇಟು!
