ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (H.D.Deve Gowda) ಪತ್ನಿ ಚೆನ್ನಮ್ಮ ಅವರ ಅಂತಿಮ ಯಾತ್ರೆ ಆರಂಭವಾಗಿದೆ. ಚೆನ್ನಮ್ಮ (Chennamma) ಅವರ ಪಾರ್ಥಿವ ಶರೀರ ಹೊತ್ತ ವಾಹನ ಬೆಂಗಳೂರಿನಿಂದ ಹಾಸನ ಕಡೆಗೆ ಹೊರಟಿದೆ.
ಅಂತಿಮ ಯಾತ್ರೆಗೂ ಮುನ್ನ ಚೆನ್ನಮ್ಮ ಅವರಿಗೆ ಕುಟುಂಬಸ್ಥರು ಕೊನೆಯ ಪೂಜೆ ಸಲ್ಲಿಸಿದರು. ಚೆನ್ನಮ್ಮ ಪಾರ್ಥಿವ ಶರೀರಕ್ಕೆ ದೇವೇಗೌಡರು ಮೊದಲ ಪೂಜೆ ಮಾಡಿದರು. ಪತ್ನಿ ಹಣೆಗೆ ಗೌಡರು ಕುಂಕುಮ ಇಟ್ಟು, ತಲೆಗೆ ಹೂವು ಮುಡಿಸಿದರು. ಬಳಿಕ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಪೂಜೆ ಸಲ್ಲಿಸಿದರು. ಚೆನ್ನಮ್ಮರಿಗೆ ಭಾರತದ ಬಾವುಟ ಹೊದಿಸಿ ಗೌರವ ಸಲ್ಲಿಸಲಾಯಿತು. ಇದನ್ನೂ ಓದಿ: ಪತ್ನಿಗೆ ಬಾಳೆಹಣ್ಣು ತಿನ್ನಿಸಿದ ಹೆಚ್‌ಡಿಡಿ – ಚೆನ್ನಮ್ಮ ಸಾವಿಗೂ ಮುನ್ನ ಪತಿ ಜೊತೆಗಿನ ಅವಿಸ್ಮರಣೀಯ ಕ್ಷಣಗಳು..
ಅಂತಿಮ ಯಾತ್ರೆ ಹೊರಟ ವಾಹನದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಮೊಮ್ಮಕ್ಕಳು ಕುಳಿದಿದ್ದಾರೆ. ಹಾಸನ ಕಡೆಗೆ ಹೊರಟ ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರು, ಅಭಿಮಾನಿಗಳು ಕಣ್ಣೀರ ವಿದಾಯ ಹೇಳಿದ್ದಾರೆ.
ಅಂತಿಮ ಯಾತ್ರೆ ಸಾಗುವ ಮಾರ್ಗ
*ನೆಲಮಂಗಲ ಕ್ರಾಸ್
*ಸೋಲೂರು ಕ್ರಾಸ್
*ಮರೂರು ಹ್ಯಾಂಡ್ ಪೋಸ್ಟ್
*ಕುಣಿಗಲ್ ಕ್ರಾಸ್
*ಬೆಳ್ಳೂರು ಕ್ರಾಸ್
*ಕದಬಳ್ಳಿ ಕ್ರಾಸ್
*ಹಿರಿಸಾವೆ ಕ್ರಾಸ್
*ಚನ್ನರಾಯಪಟ್ಟಣ
*ಎಲೆಯೂರು (ಉದಯಪುರ)
*ಶಾಂತಿಗ್ರಾಮ
*ಬೂವನಹಳ್ಳಿ ಕ್ರಾಸ್
*ಹಾಸನ ಡೈರಿ ಸರ್ಕಲ್
*ಎನ್ ಆರ್ ಸರ್ಕಲ್
*ಮೊಸಳೆ ಹೊಸಹಳ್ಳಿ
ರಾತ್ರಿ: ಹೊಳೆನರಸೀಪುರದಲ್ಲಿರುವ ಹೆಚ್.ಡಿ.ರೇವಣ್ಣ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ. ಮತ್ತೆ ಮಾರನೇ ದಿನ (ಜು.20) ಬೆಳಗ್ಗೆ 7:00 ರಿಂದ 9:30 ಗಂಟೆಯವರೆಗೆ ಅಂತಿಮ ದರ್ಶನ. ಇದನ್ನೂ ಓದಿ: ನನಗಾಗಿ ಅವರು ಆ್ಯಸಿಡ್ ಹಾಕಿಸಿಕೊಂಡಿದ್ರು, ನನ್ನ ದೇವತೆಯನ್ನೇ ಕಳೆದುಕೊಂಡೆ: ಬಿಕ್ಕಿ ಬಿಕ್ಕಿ ಅತ್ತ ಹೆಚ್.ಡಿ.ರೇವಣ್ಣ
ಬೆಳಗ್ಗೆ 10 ಗಂಟೆಗೆ ಹೊಳೆನರಸೀಪುರದಿಂದ ನಿರ್ಗಮಿಸಿ, ಬೆಳಗ್ಗೆ 11:30ಕ್ಕೆ ಮಾವಿನಕೆರೆ ಶ್ರೀರಂಗನಾಥಸ್ವಾಮಿ ಬೆಟ್ಟದ ತಪ್ಪಲು ಕ್ಯಾತನಹಳ್ಳಿಯಲ್ಲಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಲಿದೆ. ಮಧ್ಯಾಹ್ನ 2 ರಿಂದ ಸಂಜೆ 4:15 ಗಂಟೆವರೆಗೆ ಅಂತ್ಯಕ್ರಿಯೆ ವಿಧಿವಿಧಾನಗಳು ನಡೆಯಲಿವೆ.
