ಬೆಂಗಳೂರು: ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿಗೆ (Teachers Recruitment) ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದಾಗಿ ಸಿಎಂ ಡಿಕೆ ಶಿವಕುಮಾರ್ (DK Sivakumar) ತಿಳಿಸಿದರು.
ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹತ್ವದ ನಿರ್ಧಾರಗಳನ್ನೂ ಪ್ರಕಟಿಸಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿಗೆ ಅನುಮೋದನೆ ನೀಡಿರುವುದಾಗಿ ಮಾಹಿತಿ ನೀಡಿದರು. ಇದನ್ನೂ ಓದಿ: ಬರ ಪರಿಸ್ಥಿತಿ ಪರಿಶೀಲನೆಗೆ ತಂಡ ಕಳಿಸಿಕೊಡಲು ಮೋದಿಗೆ ಮನವಿ ಮಾಡಿದ್ದೇವೆ: ಸಿಎಂ ಡಿಕೆಶಿ

ಜೊತೆಗೆ ಹಾಸ್ಟೆಲ್ ಗಳ ಬೆಡ್‌ಕಾಟ್ ಖರೀದಿಗೆ 30 ಕೋಟಿ ಕೊಡುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಅಲೆಮಾರಿ ಜನಾಂಗಕ್ಕೆ ಮನೆ ಕಟ್ಟಲು 10 ಲಕ್ಷ ರೂ. ಹಣ ಕೊಡಲಾಗಿದೆ. ಮೊದಲ ಬಾರಿಗೆ ರಾಯಚೂರಿನಲ್ಲಿ 11 ಕೋಟಿ ಹಣದಲ್ಲಿ ಎಐ ತಂತ್ರಜ್ಞಾನದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಿಸಲು ಅನುಮತಿ ಕೊಡಲಾಗಿದೆ. ಗುಲ್ಬರ್ಗದಲ್ಲಿ ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ ಅನುಮತಿ ಕೊಡಲಾಗಿದೆ ಎಂದು ತಿಳಿಸಿದ್ರು.
ಅಲ್ಲದೇ, ಲೋಕಭವನದಲ್ಲಿ 27 ಕೋಟಿ ಭವನಕ್ಕೆ ಅನುಮೂದನೆ ಕೊಡಲಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ನಗರದ ಕಪಿಲಾ ನದಿಗೆ 70 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮಕ್ಕೆ ಹಾಗೂ ಕೆಪಿಎಸ್ಸಿ ಅಧ್ಯಕ್ಷರ ಅಮಾನತ್ತಿಗೆ ಅನುಮೋದನೆ ನೀಡಲಾಗಿದೆ. ಹಿರಿಯೂರು ತಾಲೂಕಿನಲ್ಲಿ 116 ಕೆರೆಗಳ ಕಾಮಾಗಾರಿ 244 ಕೋಟಿ ರೂ. ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದ್ರು. ಇದನ್ನೂ ಓದಿ: ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ – ಕ್ಷೇತ್ರ ಪುನರ್ ವಿಂಗಡಣೆ, ಒಂದು ರಾಷ್ಟ್ರ ಒಂದು ಚುನಾವಣೆ ಬಿಲ್ ಪಾಸ್‌ಗೆ ಕೇಂದ್ರ ರಣತಂತ್ರ
ಇನ್ನೂ ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ವಿಚಾರ ಕುರಿತು ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಫಲಾನುಭವಿಗಳಿಗೆ ಹೋಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಯಾರನ್ನೂ ಯೋಜನೆಯಿಂದ ತೆಗೆಯೋದಿಲ್ಲ. ವೈಯಕ್ತಿಕವಾಗಿ ಬಿಟ್ಟರೆ ಬಿಡಲಿ ಎಂದು ಹೇಳಿದರು.
