ಮ್ಯಾಂಗೋ ಪಚ್ಚ (Mango Pachcha) ಸಿನಿಮಾದ ಮೂಲಕ ಸುದೀಪ್ (Actor Sudeep) ಅವರ ಸಹೋದರಿ ಪುತ್ರ ಸಂಚೀತ್ ಸಂಜೀವ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಈ ವಾರ ಬಿಡುಗಡೆ ಆಗಿರುವ ಮ್ಯಾಂಗೋ ಪಚ್ಚ ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ನಟ ಸುದೀಪ್ ಖಡಕ್ ಮಾತುಗಳನ್ನೇ ಆಡಿದ್ದಾರೆ. ಅದರಲ್ಲೂ ನೆಪೋಟಿಸಂ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಡಾ.ರಾಜ್ ಕುಮಾರ್ ಮತ್ತು ಅಂಬಾನಿ ಕುಟುಂಬವನ್ನು ಎಳೆತಂದರು.
ನೆಪೋಟಿಸಂ ಕುರಿತಾಗಿ ಡಾ.ರಾಜ್ ಕುಮಾರ್ ಮಕ್ಕಳನ್ನು ಯಾಕೆ ಕೇಳಲಲ್ಲ? ಶಿವಣ್ಣಗೆ ಈ ಪ್ರಶ್ನೆ ಕೇಳಿದ್ದೀರಾ? ಅಂಬಾನಿನ ಕೇಳ್ಬೇಕಿತ್ತು ಅಂತೆಲ್ಲ ಕಿಡಿಕಾರಿದ್ದಾರೆ. ಯಾರಿಗೆಲ್ಲ ಯೋಗ್ಯತೆ ಇದೆಯೋ ಅವರಿಗೆ ಕೆಲಸ ಸಿಗುತ್ತದೆ. ಯಾವುದೋ ಸಿನಿಮಾ ಇಂಡಸ್ಟ್ರಿಯದ್ದನ್ನು ಇಲ್ಲಿಗೆ ತರಬೇಡಿ ಅಂತ ಮಾರ್ಮಿಕವಾಗಿ ಮಾತಾಡಿದರು. ಇದನ್ನೂ ಓದಿ: ನಿರ್ಮಾಪಕರ ವಿರುದ್ಧ ಮಾನನಷ್ಟ ಮೊಕದ್ದಮೆ – ಇಂದು ಕೋರ್ಟ್‌ಗೆ ಹಾಜರಾಗಲಿರುವ ನಟ ಸುದೀಪ್
ಡಾ.ರಾಜ್ ಕುಮಾರ್ ಅವರ ಎಲ್ಲ ಮಕ್ಕಳಿಗೂ ಅರ್ಹತೆ ಇತ್ತು. ಹಾಗಾಗಿ ಅವರೆಲ್ಲ ಬಂದರು. ನಾವೆಲ್ಲ ಶಿವಣ್ಣನನ್ನು ನೋಡಿಕೊಂಡು ಬೆಳೆದವರು. ಪುನೀತ್ ರಾಜ್ ಕುಮಾರ್ ಅವರು ಹಲವರಿಗೆ ಸ್ಫೂರ್ತಿ ಆಗಿದ್ದಾರೆ. ನನ್ನ ಕುಟುಂಬದಲ್ಲಿ ಇನ್ನೂ ಹಲವರು ಸದಸ್ಯರು ಇದ್ದಾರೆ. ಯಾರೂ ಸಿನಿಮಾ ರಂಗಕ್ಕೆ ಬಂದಿಲ್ಲ. ಸಂಚಿತ್‌ಗೆ ಸಿನಿಮಾ ಬಗ್ಗೆ ಒಲವಿತ್ತು. ಹಾಗಾಗಿ ಸಿನಿಮಾ ರಂಗಕ್ಕೆ ಬಂದ. ಅರ್ಹತೆ ಇದ್ದವರು ಯಾರು ಬೇಕಾದರೂ ಬರಬಹುದು ಅಂದಿದ್ದಾರೆ ಸುದೀಪ್.
ಸುದೀಪ್ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಕೇವಲ ತಮ್ಮ ಕುಟುಂಬದವರನ್ನು ಮಾತ್ರ ಸುದೀಪ್ ಬೆಳೆಸುತ್ತಾರೆ ಅಂತ ಹಲವರು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಸುದೀಪ್ ಅವರು ಯಾರಿಗೆಲ್ಲ ಸಪೋರ್ಟ್ ಮಾಡಿದ್ದಾರೆ ಅನ್ನುವ ಕುರಿತು ಕಾಮೆಂಟ್ ಮಾಡಿದ್ದಾರೆ.ಇದನ್ನೂ ಓದಿ: ನಟಿ ಶುಭಾ ಪೂಂಜಾ ವೈವಾಹಿಕ ಜೀವನದಲ್ಲಿ ಬಿರುಗಾಳಿ – ವಿಚ್ಛೇದನಕ್ಕೆ ಮೊರೆ ಹೋದ ದಂಪತಿ
