ಉಡುಪಿ: ಜಿಲ್ಲೆಯ ಪ್ರಸಿದ್ಧ ಅಂಬಲಪಾಡಿ ಶ್ರೀ ಜನಾರ್ಧನ–ಮಹಾಕಾಳಿ ದೇವಸ್ಥಾನದಲ್ಲಿ (Ambalpady Temple) ಆಷಾಢ ಮಾಸದ ಪ್ರಯುಕ್ತ ವಿಶೇಷ ಪುಷ್ಪಾಲಂಕಾರ ನೆರವೇರಿತು.
ಚಿಕ್ಕಬಳ್ಳಾಪುರದ ಭಕ್ತರು ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬಗೆಯ ಹೂವುಗಳಿಂದ ದೇವಾಲಯ ಕಂಗೊಳಿಸಿತು. ದೇವಾಲಯದ ಗೋಪುರ, ಪ್ರವೇಶ ದ್ವಾರ, ಕಂಬಗಳು ಹಾಗೂ ಗರ್ಭಗುಡಿ ಸುತ್ತಮುತ್ತ ಬಣ್ಣಬಣ್ಣದ ಹೂಗಳಿಂದ ಅಲಂಕಾರಗೊಂಡಿತ್ತು. ಇದನ್ನೂ ಓದಿ: ಆಷಾಢ ಮಾಸದ ಮೊದಲ ಶುಕ್ರವಾರ – ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ, ನಾಗಲಕ್ಷ್ಮೀಯಾದ ತಾಯಿ

ಶ್ರೀ ಜನಾರ್ಧನ ಸ್ವಾಮಿ ಹಾಗೂ ಶ್ರೀ ಮಹಾಕಾಳಿಗೆ ವಿಶೇಷ ಪೂಜೆ ನಡೆದಿದ್ದು, ಸಾವಿರಾರು ಭಕ್ತರು ದರ್ಶನ ಪಡೆದು ಪುಷ್ಪಾಲಂಕಾರದ ವೈಭವವನ್ನು ಕಣ್ತುಂಬಿಕೊಂಡರು. ಹಲವು ವರ್ಷಗಳಿಂದ ಚಿಕ್ಕಬಳ್ಳಾಪುರದ ಭಕ್ತರು ಭಕ್ತಿಭಾವದಿಂದ ಈ ಸೇವೆ ಸಲ್ಲಿಸುತ್ತಿದ್ದು, ದೇವಿಯ ಅನುಗ್ರಹಕ್ಕೆ ಕೃತಜ್ಞತೆಯ ಸಂಕೇತವಾಗಿ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
