ಪಂಚಾಂಗ
ಸಂವತ್ಸರ: ಪರಾಭವನಾಮ, ಅಯನ: ದಕ್ಷಿಣಾಯಣ
ಋತು: ಗ್ರೀಷ್ಮ, ಮಾಸ: ಆಷಾಢ
ಪಕ್ಷ: ಶುಕ್ಲ, ತಿಥಿ: ಚತುರ್ಥಿ/ಪಂಚಮಿ
ನಕ್ಷತ್ರ: ಪೂರ್ವ ಫಾಲ್ಗುಣಿ
ರಾಹುಕಾಲ: 9:17 – 10:53
ಗುಳಿಕಕಾಲ: 6:06 – 7:41
ಯಮಗಂಡಕಾಲ: 02:05 – 3:41
ಮೇಷ: ಕೃಷಿ ಕಾರ್ಯಗಳಲ್ಲಿ ಶುಭ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಶ್ರಮವಹಿಸಬೇಕು, ತೊಂದರೆಗಳೇನಿದ್ದರೂ ತಾತ್ಕಾಲಿಕ.
ವೃಷಭ: ವ್ಯವಹಾರದಲ್ಲಿ ಎಚ್ಚರ, ಹಿರಿಯರಿಂದ ಮಾರ್ಗದರ್ಶನ ಲಭ್ಯ, ದಿನಸಿ ವ್ಯಾಪಾರಿಗಳಿಗೆ ಲಾಭ.
ಮಿಥುನ: ಹಣಕಾಸಿನ ವ್ಯವಹಾರದಲ್ಲಿ ಲಾಭ, ಮಾನಸಿಕ ತೊಳಲಾಟ, ಸಾಲದ ಚಿಂತೆ.
ಕಟಕ: ವಿದೇಶಿ ಸಂಸ್ಥೆ ಹೂಡಿಕೆದಾರರಿಗೆ ಲಾಭ, ಶೀತ ಸಂಬಂಧ ರೋಗ, ಅನಗತ್ಯ ವಿಚಾರಗಳಿಂದ ದೂರವಿರಿ.
ಸಿಂಹ: ಡ್ರೈವಿಂಗ್ ಕೆಲಸಗಾರರಿಗೆ ಲಾಭದಾಯಕ, ಕುಟುಂಬದಿಂದ ವಿರೋಧ, ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ.
ಕನ್ಯಾ: ಆರ್ಥಿಕ ಹಿನ್ನಡೆಗಳು, ವ್ಯಾಪಾರ ವ್ಯವಹಾರದಲ್ಲಿ ಲಾಭದ ನಿರೀಕ್ಷೆ, ಪ್ರಯಾಣದಲ್ಲಿ ಸಮಸ್ಯೆ.
ತುಲಾ: ಹೈನುಗಾರಿಕೆ ಕೋರ್ಸ್ ಕಲಿಕೆಯಲ್ಲಿ ಶುಭ, ವ್ಯವಹಾರಗಳಲ್ಲಿ ಎಚ್ಚರವಿರಲಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ವೃಶ್ಚಿಕ: ಬಂಧುಗಳಿಂದ ವ್ಯಂಗ್ಯ ಮಾತುಗಳು, ರಾಜಕೀಯ ವ್ಯಕ್ತಿಗಳಿಂದ ಭರವಸೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಧನಸ್ಸು: ಸಹಾಯ ಮಾಡಿದವರನ್ನು ಅವಮಾನಿಸಬೇಡಿ, ಅನಿವಾರ್ಯ ಕಾರಣಗಳಿಂದ ಖರ್ಚು, ಆತ್ಮವಿಶ್ವಾಸದಿಂದ ಜಯ.
ಮಕರ: ವಿದೇಶಿ ವ್ಯಾಪಾರದಲ್ಲಿ ಹೆಚ್ಚುಆದಾಯ, ಸರ್ಕಾರಿ ಕೆಲಸಗಳು ವಿಳಂಬ, ಮಕ್ಕಳ ಅಗತ್ಯಕ್ಕೆ ಖರ್ಚು.
ಕುಂಭ: ಗಣಿಗಾರಿಕೆಯಲ್ಲಿ ಆದಾಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಿತ್ರರಿಂದ ಕೆಡಕು.
ಮೀನ: ಸಂಗಾತಿಯು ಸಂಸಾರಕ್ಕಾಗಿ ಶ್ರಮಿಸುವರು, ಗೊಂದಲಮಯ ವಾತಾವರಣ, ನಿಮ್ಮ ಸಾಧನೆಯನ್ನು ಕೊಂಡಾಡುವರು.
