ಬೆಂಗಳೂರು: ಪತ್ನಿ ಚೆನ್ನಮ್ಮ (Chennamma) ಅವರಿಗೆ ಬೇರೆ ಯಾವ ತೊಂದರೆಯೂ ಇಲ್ಲ, ಉಸಿರಾಟದ ಸಮಸ್ಯೆ ಇದೆ. ಅದೊಂದು ಬಗೆಹರಿಯಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (H.D Devegowda) ಹೇಳಿದ್ದಾರೆ. ಇದನ್ನೂ ಓದಿ: ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯ ಸ್ಥಿರವಾಗಿದೆ: ಆರ್. ಅಶೋಕ್
ಪತ್ನಿ ಆರೋಗ್ಯದ ಬಗ್ಗೆ ಮಾಧ್ಯಮಗಳಿಗೆ ಅವರು ಮಾಹಿತಿ ನೀಡಿದರು. ಈ ವೇಳೆ, ಉಸಿರಾಟದ ಸಮಸ್ಯೆ ಇದೆ ಎಂದು ಬುಧವಾರ (ಜು.15) ಆಸ್ಪತ್ರೆಗೆ ದಾಖಲಿಸಿದ್ದೆವು. ಮೊನ್ನೆ ನಿನ್ನೆ ಇವತ್ತು ಅವರನ್ನು ವಿಚಾರಿಸಿದ್ದೇನೆ.

ಅವರ ಹಾರ್ಟ್, ಕಿಡ್ನಿ ಎಲ್ಲಾ ಸರಿಯಾಗಿದೆ. ಲಂಗ್ಸ್ ಸಮಸ್ಯೆ ಇದೆ. ಉಸಿರಟಾದ ಸಮಸ್ಯೆ ಒಂದು ಬಗೆಹರಿಯಬೇಕು. ಬೇರೆ ಯಾವುದೇ ತೊಂದರೆ ಇಲ್ಲ. ತಜ್ಞರು ಚಿಕಿತ್ಸೆ ಕೊಡುತ್ತಿದ್ದಾರೆ. ತಕ್ಷಣ ಉಸಿರಾಟ ಸಮಸ್ಯೆ ಬಗೆ ಹರಿಯಲ್ಲಎಂದು ವೈದ್ಯರು ಹೇಳಿದ್ದಾರೆ.
ನಿಧಾನವಾಗಿ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ. ವೈದ್ಯರು ಕೈ ಮೀರಿ ಕೆಲಸ ಮಾಡ್ತಿದ್ದಾರೆ. ನಮ್ಮ ಜೊತೆ ಅಭಿಮಾನಿಗಳು, ಕುಟುಂಬದವರು, ವೈದ್ಯರು ಎಲ್ಲರೂ ಇದ್ದಾರೆ. Mostly She may Recover ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯ ಸ್ಥಿತಿ ಗಂಭೀರ
