ಚಂಡೀಗಢ: ಕ್ಯಾಪ್ಟನ್ ಶುಭಮನ್ ಗಿಲ್ (Shubman Gill) ಮತ್ತು ಕೆ.ಎಲ್.ರಾಹುಲ್ (K.L.Rahul) ಶತಕದಾಟದ ನೆರವಿನಿಂದ ಮುಲ್ಲನ್‌ಪುರದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ (Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ (India) ತಂಡ ಮೇಲುಗೈ ಸಾಧಿಸಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 85 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 368 ರನ್ ಗಳಿಸಿದೆ. ಶುಭಮನ್ ಗಿಲ್ ಶತಕ ಮತ್ತು ರಿಷಭ್ ಪಂತ್ ಅರ್ಧಶತಕ ಗಳಿಸಿ ಕ್ರೀಸ್‌ನಲ್ಲಿದ್ದು, 2ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: PublicTV Explainer | ಕಾಂಟ್ರ್ಯಾಕ್ಟ್‌ನಿಂದಲೇ ಹೊರದಬ್ಬಿದ ಅಯ್ಯರ್‌ಗೆ ಇಂದು ಟೀಂ ಇಂಡಿಯಾ ನಾಯಕನ ಪಟ್ಟ!
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಹುಲ್, 3ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸಾಯಿ ಸುಧರ್ಸನ್ ಅವರೊಂದಿಗೆ 139 ರನ್‌ಗಳ ಜೊತೆಯಾಟವಾಡಿದರು. ಸುಧರ್ಸನ್ ತಮ್ಮ ಶತಕವನ್ನು ಸ್ವಲ್ಪದರಲ್ಲೇ ಮಿಸ್ ಮಾಡಿಕೊಂಡು 81 ರನ್‌ಗಳಿಗೆ ಔಟಾದರು. ರಾಹುಲ್ ತಮ್ಮ 12ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು.
ರಾಹುಲ್ ನಿರ್ಗಮನದ ನಂತರ ಗಿಲ್ ಮತ್ತು ರಿಷಭ್ ಪಂತ್ ತಮ್ಮ ವೇಗವನ್ನು ಹೆಚ್ಚಿಸಿಕೊಂಡರು. ದಿನದ ಅಂತ್ಯದ ವೇಳೆಗೆ ಇಬ್ಬರೂ ಅಜೇಯರಾಗಿ ಉಳಿದರು. ಗಿಲ್ 103 ಮತ್ತು ಪಂತ್ 50 ರನ್ ಗಳಿಸಿದರು.
ಅಫ್ಘಾನಿಸ್ತಾನ ಪರ ಸಲೀಂ ಸಫಿ 2, ಜಿಯಾವುರ್ ರೆಹಮಾನ್ 1 ವಿಕೆಟ್ ಪಡೆದರು. ಇದನ್ನೂ ಓದಿ: ಟಿ20 ವಿಶ್ವಕಪ್ ತಂದುಕೊಟ್ಟ ನಾಯಕ ಸೂರ್ಯಕುಮಾರ್ ತಂಡದಿಂದಲೇ ಔಟ್ – ಕಾರಣ ಬಿಚ್ಚಿಟ್ಟ BCCI
