ಮುಂಬೈ: ಮೂರು ತಿಂಗಳ ಹಿಂದಷ್ಟೇ ಭಾರತ ತಂಡಕ್ಕೆ (Team India) ಐತಿಹಾಸಿಕ ಮೂರನೇ ಟಿ20 ವಿಶ್ವಕಪ್ (T20 World Cup) ತಂದುಕೊಟ್ಟಿದ್ದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ತಂಡದಿಂದಲೇ ಕೈಬಿಡಲಾಗಿದೆ. ಈ ನಿರ್ಧಾರದ ಹಿಂದಿನ ಕಾರಣದ ಬಗ್ಗೆ ಇದೀಗ ಬಿಸಿಸಿಐ (BCCI) ಮೌನಮುರಿದಿದೆ.
ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ಸರಣಿ ಹಾಗೂ ಏಷ್ಯನ್ ಗೇಮ್ಸ್‌ಗೆ ಪ್ರಕಟಿಸಲಾದ ಟಿ20 ತಂಡದಲ್ಲಿ ಸೂರ್ಯಕುಮಾರ್‌ಗೆ ಸ್ಥಾನ ಸಿಕ್ಕಿಲ್ಲ. ಅವರ ಬದಲಿಗೆ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ಟಿ20 ತಂಡದ ನೂತನ ನಾಯಕನನ್ನಾಗಿ ಬಿಸಿಸಿಐ ಘೋಷಿಸಿದೆ. ಇದನ್ನೂ ಓದಿ:ಟೀಂ ಇಂಡಿಯಾಗೆ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ – ವೈಭವ್ ಸೂರ್ಯವಂಶಿ ಎಂಟ್ರಿ
Presenting #TeamIndia‘s newest T20I captain 🇮🇳
Congratulations to Shreyas Iyer as he takes the helm in the shortest format of the game 👏@ShreyasIyer15 pic.twitter.com/frfAXAOkTA
— BCCI (@BCCI) June 6, 2026
ಈ ಬಗ್ಗೆ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮಾತನಾಡಿ, ಕಠಿಣ ದಾರಿಯ ಮೂಲಕ ಬಂದು ವಿಶ್ವಕಪ್ ತಂದುಕೊಟ್ಟಿರುವುದು ನಿಜ. ವಿಶ್ವಕಪ್ ಗೆದ್ದ ತಕ್ಷಣ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸುಲಭದ ಮಾತಲ್ಲ. ಆದರೆ ಪ್ರತಿಯೊಂದು ವಿಶ್ವಕಪ್ ಮುಗಿದ ನಂತರ ನಾವು ಮುಂದಿನ ಹಾದಿಯ ಬಗ್ಗೆ ಯೋಚಿಸಬೇಕಾಗುತ್ತದೆ. ಸೂರ್ಯ ಅವರ ಇತ್ತೀಚಿನ ಫಾರ್ಮ್ ಹಾಗೂ ಮುಂದಿನ ಎರಡು ವರ್ಷಗಳ ಟಿ20 ಸರಣಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕಠಿಣ ನಿರ್ಧಾರಕ್ಕೆ ಬಂದಿದ್ದೇವೆ. ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಅರ್ಹರಾಗಿದ್ದಾರೆ. ತಂಡದ ಹಿತದೃಷ್ಟಿಯಿಂದ ಸೂರ್ಯಕುಮಾರ್ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿಯೇ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
A sterling example in leadership 👏
It was a truly memorable tenure for Surya Kumar Yadav as #TeamIndia‘s T20I captain that culminated into a historic ICC Men’s T20 World Cup victory 🫡 pic.twitter.com/iT1pbGm2Jr
— BCCI (@BCCI) June 6, 2026
ನಾಯಕತ್ವ ವಹಿಸಿಕೊಂಡ ನಂತರ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರದರ್ಶನ ತೀವ್ರವಾಗಿ ಕುಸಿದಿದೆ. ನಾಯಕತ್ವಕ್ಕೂ ಮುನ್ನ 4 ಬಾರಿ ಶತಕ ಹಾಗೂ 20 ಬಾರಿ ಅರ್ಧಶತಕದೊಂದಿಗೆ ಅವರ ಸರಾಸರಿ 43.60ರಷ್ಟಿತ್ತು. ಆದರೆ ನಾಯಕತ್ವದ ನಂತರ ಅಂದರೆ 2024ರ ಜುಲೈನಿಂದ 6 ಬಾರಿ ಅರ್ಧಶತಕ ಹಾಗೂ 4 ಬಾರಿ ಶೂನ್ಯಕ್ಕೆ ಔಟ್ ಆಗುವದರ ಮೂಲಕ ಸರಾಸರಿ 25.88ಕ್ಕೆ ಕುಸಿದಿತ್ತು.
Presenting #TeamIndia‘s T20I squads for the tours of England & Ireland 2026 🇮🇳#ENGvIND | #IREvIND pic.twitter.com/f84kSSAIDf
— BCCI (@BCCI) June 6, 2026
ಇನ್ನೂ 2025 ರಿಂದ 2026ರ ಮಾಚ್‌ವರೆಗೆ 35 ಪಂದ್ಯಗಳಲ್ಲಿ ಕೇವಲ 702 ರನ್ ಗಳಿಸುವ ಸರಾಸರಿ 26 ಆಗಿತ್ತು. ಜೊತೆಗೆ 2026ರ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ವಿರುದ್ಧ ಅಜೇಯ 84 ರನ್‌ಗಳಿಸಿದ್ದನ್ನು ಬಿಟ್ಟರೆ, ಉಳಿದ ಪಂದ್ಯಗಳಲ್ಲಿ ಸೂರ್ಯ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಐಪಿಎಲ್‌ನಲ್ಲೂ ಅವರ ಬ್ಯಾಟಿಂಗ್ ಫಾರ್ಮ್ ಹೇಳಿಕೊಳ್ಳುವ ಹಾಗಿರಲಿಲ್ಲ.
A maiden #TeamIndia call-up at the age of 1️⃣5️⃣ 🌟
Congratulations to Vaibhav Sooryavanshi on setting a remarkable record 👏 pic.twitter.com/htOt9kci4p
— BCCI (@BCCI) June 6, 2026
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ 2025ರ ಏಷ್ಯಾ ಕಪ್ ಹಾಗೂ 2026ರ ಟಿ20 ವಿಶ್ವಕಪ್ ಗೆದ್ದು ಬೀಗಿತ್ತು. ಆದರೆ ಸದ್ಯ ಕಳಪೆ ಫಾರ್ಮ್ ಕಾರಣದಿಂದಾಗಿ ಬಿಸಿಸಿಐ ಯುವ ಆಟಗಾರರಿಗೆ ಮಣೆ ಹಾಕಲು ನಿರ್ಧರಿಸಿ, ಶ್ರೇಯಸ್ ಅಯ್ಯರ್ ಹೆಗಲಿಗೆ ನಾಯಕತ್ವದ ಜವಾಬ್ದಾರಿ ನೀಡಿದೆ. ಉಪನಾಯಕನಾಗಿ ತಿಲಕ್ ವರ್ಮಾ ಕಾಣಿಸಿಕೊಳ್ಳಲಿದ್ದಾರೆ.ಇದನ್ನೂ ಓದಿ: Maharaja Trophy Auction – ಹರಾಜಿನಲ್ಲಿ ಬಿಕರಿಯಾಗದ ಕೆ.ಎಲ್ ರಾಹುಲ್
