ಮುಂಬೈ : ಕನ್ನಡ ಚಿತ್ರರಂಗದ ಖ್ಯಾತ ನಟ ಯಶ್ (Yash) ಮತ್ತು ಅವರ ಪತ್ನಿ ರಾಧಿಕಾ ಪಂಡಿತ್ (Radhika Pandit) ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ 24 ಕೋಟಿ ರೂ. ಮೌಲ್ಯದ ಸಮುದ್ರ ತೀರದ ಬಳಿ ಜಮೀನನ್ನು ಖರೀದಿಸಿದ್ದಾರೆ.
ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಅಲಿಬಾಗ್(Alibag) ತಾಲ್ಲೂಕಿನ ಕಾಮತ್ ಗ್ರಾಮದಲ್ಲಿರುವ ಎರಡು ಕೃಷಿ ಜಮೀನುಗಳನ್ನು ಈ ದಂಪತಿ ಖರೀದಿಸಿದ್ದಾರೆ. ಒಟ್ಟು 5,289 ಚದರ ಮೀಟರ್ ಪ್ರದೇಶದ ಈ ಜಮೀನು ಸಮುದ್ರ ತೀರದ ಸಮೀಪದಲ್ಲಿದೆ.
ಈ ಆಸ್ತಿ ಖರೀದಿ ಪ್ರಕ್ರಿಯೆ ಮೇ 18 ರಂದು ಅಲಿಬಾಗ್ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿದೆ. ಜಮೀನು ಖರೀದಿಗೆ 24 ಕೋಟಿ ರೂ. ಪಾವತಿಸಿರುವ ಯಶ್ ಮತ್ತು ರಾಧಿಕಾ ಪಂಡಿತ್, 1.44 ಕೋಟಿ ರೂ. ಸ್ಟಾಂಪ್ ಡ್ಯೂಟಿ ಹಾಗೂ ಇತರೆ ನೋಂದಣಿ ಶುಲ್ಕಗಳನ್ನೂ ಪಾವತಿಸಿದ್ದಾರೆ. ಇದನ್ನೂ ಓದಿ: ನಟಿ ಶುಭಾ ಪೂಂಜಾ ವೈವಾಹಿಕ ಜೀವನದಲ್ಲಿ ಬಿರುಗಾಳಿ – ವಿಚ್ಛೇದನಕ್ಕೆ ಮೊರೆ ಹೋದ ದಂಪತಿ

ಕಳೆದ ಕೆಲವು ವರ್ಷಗಳಿಂದ ಅಲಿಬಾಗ್ ಸೆಲೆಬ್ರಿಟಿಗಳು, ಉದ್ಯಮಿಗಳು ಮತ್ತು ಹೂಡಿಕೆದಾರರ ನೆಚ್ಚಿನ ತಾಣವಾಗಿ ಬೆಳೆಯುತ್ತಿದೆ. ಮುಂಬೈಗೆ ಸಮೀಪದಲ್ಲಿರುವುದು ಮತ್ತು ಸುಂದರ ಸಮುದ್ರ ತೀರ ಹೊಂದಿರುವ ಕಾರಣ ಇಲ್ಲಿ ಐಷಾರಾಮಿ ಮನೆಗಳು ಹಾಗೂ ಜಮೀನುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದನ್ನೂ ಓದಿ: ಜು.5ರಂದು ಪ್ರೇಯಸಿ ಗೌರಿ ಜೊತೆ ಆಮೀರ್ ಖಾನ್ 3ನೇ ಮದುವೆ
ಈ ಹೊಸ ಆಸ್ತಿ ಖರೀದಿಯೊಂದಿಗೆ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಅಲಿಬಾಗ್‌ನಲ್ಲಿ ಹೂಡಿಕೆ ಮಾಡಿದ ಗಣ್ಯರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.













