ಬೀದರ್: ಕೋರ್ಟ್ ವಿಚಾರಣೆಗೆ ಗೈರಾದ ಹಿನ್ನೆಲೆ ಬಸವಕಲ್ಯಾಣ ಬಿಜೆಪಿಯ ಶಾಸಕ ಶರಣು ಸಲಗಾರ್‌ಗೆ (Sharanu Salagar) ಜಾಮೀನು ರಹಿತ ವಾರಂಟ್ (Non Bailable Warrant) ಜಾರಿಯಾಗಿದೆ.
2023ರ ಜುಲೈ 1ರಂದು ಬಕ್ರೀದ್ ಹಬ್ಬದ ವೇಳೆ ಗೋಹತ್ಯೆ ಬಗ್ಗೆ ಪ್ರಶ್ನಿಸಿ ಗಲಾಟೆ ಮಾಡಿದ್ದ ಆರೋಪ ಕೇಸ್‌ನಲ್ಲಿ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್‌ನಿಂದ ವಾರಂಟ್ ಜಾರಿಯಾಗಿದೆ. ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗಾರ್‌ಗೆ ಕಾನೂನು ಸಂಕಷ್ಟ ಎದುರಾಗಿದ್ದು, ಅಕ್ರಮವಾಗಿ ಗೋಹತ್ಯೆ ಮಾಡಿದ್ದಾರೆಂದು ಶಾಸಕ ಶರಣು ಸಲಗಾರ್ ಗಲಾಟೆ ಮಾಡಿದ್ದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಸ್ ಪಡೆದ ರಾಮಲಿಂಗಾರೆಡ್ಡಿ
ಮುಸ್ಲಿಂ ಸಮುದಾಯದ ಮನೆಯೊಂದಕ್ಕೆ ಹೋಗಿ ಗೋಹತ್ಯೆ ತಡೆದಾಗ ಗಲಾಟೆ ಆಗಿತ್ತು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಈಗಾಗಲೇ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸಾಕ್ಷ್ಯ ವಿಚಾರಣೆಗೆ ಶಾಸಕ ಸಲಗಾರ್ ಗೈರಾಗಿದ್ದರಿಂದ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ನೆಪೋಟಿಸಂ ಬಗ್ಗೆ ಸುದೀಪ್ ಮಾತು ಖಡಕ್
ಕೋರ್ಟ್ ಆದೇಶದ ಬೆನ್ನಲ್ಲೇ ಶಾಸಕ ಶರಣು ಸಲಗರ್ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಸಿಪಿಐ ಅಲಿಸಾಬ್, ಪಿಎಸ್‌ಐ ಚಂದ್ರಶೇಖರ್ ಪೊಲೀಸ್ ಜೀಪ್ ಸಮೇತ ಶಾಸಕರ ನಿವಾಸಕ್ಕೆ ಬಂದಿದ್ದಾರೆ. ಮನೆಯಲ್ಲಿ ಶಾಸಕರು ಇಲ್ಲದ ಕಾರಣ ಪೊಲೀಸರು ವಾಪಸ್ ತೆರಳಿದ್ದಾರೆ. ಕೋರ್ಟ್ ವಾರೆಂಟ್ ಬಳಿಕ ಶಾಸಕರಿಗಾಗಿ ಪೊಲೀಸರು ತಲಾಷ್ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಂಪುಟ ಖಾತೆ ಕ್ಯಾತೆ ನಡುವೆ ಸಚಿವರ 2ನೇ ಪಟ್ಟಿಗೆ ತಯಾರಿ – ಯಾರಿಗೆ ಲಕ್?
