– ತ್ರಿಷಾ ಸೆಲ್ಯೂಟ್ ವೈರಲ್
ಚೆನ್ನೈ: ಆ. 15ರಂದು ಫೋರ್ಟ್ ಸೇಂಟ್ ಜಾರ್ಜ್ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಟಿ ತ್ರಿಷಾ ಕೃಷ್ಣನ್ (Trisha Krishnan) ಅವರು ವಿಜಯ್ (CM Vijay) ಅವರ ಕುಟುಂಬದ ಜೊತೆ ಮೊದಲ ಸಾಲಿನಲ್ಲಿ ಕುಳಿತಿದ್ದನ್ನು ಡಿಎಂಕೆ (DMK) ಪ್ರಶ್ನಿಸಿದೆ.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಮೊದಲ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತ್ರಿಷಾ ಸಿಎಂಗೆ ಸೆಲ್ಯೋಟ್ ಮಾಡಿರುವ ರೀತಿಯನ್ನು ಡಿಎಂಕೆ ಟೀಕಿಸಿದೆ.
ಡಿಎಂಕೆಯ ಅಧಿಕೃತ ದಿನಪತ್ರಿಕೆ ‘ಮುರಸೋಲಿ’ಯಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ, ಸರ್ಕಾರಿ ಕಾರ್ಯಕ್ರಮದಲ್ಲಿ ತ್ರಿಷಾಗೆ ಮೊದಲ ಸಾಲಿನ ಸೀಟು ನೀಡಿದ್ದೇಕೆ ಎಂದು ಪ್ರಶ್ನಿಸಲಾಗಿದೆ. ಕಾರ್ಯಕ್ರಮದ ವೇಳೆ ವಿಜಯ್ ಹಾಗೂ ತ್ರಿಷಾ ಪರಸ್ಪರ ಸೆಲ್ಯೂಟ್ ಮಾಡಿರುವ ದೃಶ್ಯವೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರವನ್ನೂ ಡಿಎಂಕೆ ಟೀಕಿಸಿದೆ.
ಆಗಸ್ಟ್ 15ರಂದು ನಡೆದ ಕಾರ್ಯಕ್ರಮದಲ್ಲಿ ತ್ರಿಷಾ ಹಳದಿ ಬಣ್ಣದ ಸೀರೆ ಧರಿಸಿ, ವಿಜಯ್ ಅವರ ತಂದೆ-ತಾಯಿ ಎಸ್.ಎ. ಚಂದ್ರಶೇಖರ್ ಮತ್ತು ಶೋಭಾ ಚಂದ್ರಶೇಖರ್ ಅವರ ಪಕ್ಕದಲ್ಲಿ ಮೊದಲ ಸಾಲಿನಲ್ಲಿ ಕುಳಿತಿದ್ದರು. ತ್ರಿಷಾ ಅವರ ತಾಯಿ ಉಮಾ ಕೃಷ್ಣನ್ ಕೂಡ ಕಾರ್ಯಕ್ರಮದಲ್ಲಿ ಇದ್ದರು.
ಕಾರ್ಯಕ್ರಮದ ವೇಳೆ ವಿಜಯ್ ಅಧಿಕೃತ ಕರ್ತವ್ಯದಲ್ಲಿದ್ದಾಗ ತ್ರಿಷಾ ಅವರಿಗೆ ಸೆಲ್ಯೂಟ್ ಮಾಡಿದ್ದು, ಬಳಿಕ ತ್ರಿಷಾ ಕೂಡ ಪ್ರತಿಕ್ರಿಯಿಸಿರುವುದು ಗಮನ ಸೆಳೆದಿದೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿವೆ. ಇದನ್ನೂ ಓದಿ: ಹಳೆಯ ಫ್ಯಾಷನ್ ಮತ್ತೆ ಟ್ರೆಂಡ್; Gen Z ಯುವಜನರ ಮನ ಗೆದ್ದ ‘ರೆಟ್ರೋ’ ಸ್ಟೈಲ್!
ಡಿಎಂಕೆ ತನ್ನ ಸಂಪಾದಕೀಯದಲ್ಲಿ, ಸರ್ಕಾರಿ ಕಾರ್ಯಕ್ರಮದಲ್ಲಿ ನಟಿಯೊಬ್ಬರಿಗೆ ಇಷ್ಟು ಪ್ರಮುಖ ಸ್ಥಾನ ನೀಡಿರುವುದು ಸರಿಯೇ? ಎಂದು ಪ್ರಶ್ನಿಸಿದೆ. ಅಲ್ಲದೆ, ವಿಜಯ್ ಅವರ ಪಕ್ಷವಾದ ಟಿವಿಕೆಯ ಕೆಲವು ಬೆಂಬಲಿಗರೂ ಈ ದೃಶ್ಯದಿಂದ ಅಸಮಾಧಾನಗೊಂಡಿದ್ದಾರೆ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ. ಆದರೆ, ಈ ಟೀಕೆಗಳಿಗೆ ಟಿವಿಕೆ ಕಡೆಯಿಂದ ಇದುವರೆಗೆ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ವಿಜಯ್ ಮತ್ತು ತ್ರಿಷಾ ನಡುವಿನ ಸ್ನೇಹದ ಬಗ್ಗೆ ಈ ಹಿಂದಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಮೇ ತಿಂಗಳಲ್ಲಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕಾರ್ಯಕ್ರಮಕ್ಕೂ ತ್ರಿಷಾ ಆಗಮಿಸಿದ್ದರು. ಅಂದು ವಿಜಯ್ ಅವರ ತಾಯಿ ಶೋಭಾ ಅವರನ್ನು ತ್ರಿಷಾ ಆತ್ಮೀಯವಾಗಿ ಭೇಟಿಯಾಗಿದ್ದ ದೃಶ್ಯವೂ ಗಮನ ಸೆಳೆದಿತ್ತು.
ಹೀಗಾಗಿ, ಸ್ವಾತಂತ್ರ್ಯ ದಿನಾಚರಣೆಯ ಒಂದು ಕಾರ್ಯಕ್ರಮದಲ್ಲಿ ತ್ರಿಷಾ ಅವರ ಉಪಸ್ಥಿತಿ ಇದೀಗ ಸಿನಿಮಾ ಸುದ್ದಿಯನ್ನು ಮೀರಿ ತಮಿಳುನಾಡಿನ ರಾಜಕೀಯ ಚರ್ಚೆಯಲ್ಲೂ ಸ್ಥಾನ ಪಡೆದಿದೆ. ಇದನ್ನೂ ಓದಿ: ನ.10ಕ್ಕೆ ಅನಿರುದ್ಧ್-ಕಾವ್ಯಾ ಮಾರನ್ ಮದುವೆ?

