ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಪುತ್ರಿ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಕಾವ್ಯಾ ಮಾರನ್ (Kavya Maran) ಹಾಗೂ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ (Anirudh Ravichander) ಮದುವೆ ವದಂತಿಯು ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಇದೇ ನವೆಂಬರ್ 10ರಂದು ಇವರಿಬ್ಬರ ವಿವಾಹ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 10ರಂದು ಗ್ರೀಸ್‌ನಲ್ಲಿ ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ರವಿಚಂದರ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಕುರಿತು ಅನಿರುದ್ಧ್ ಅಥವಾ ಕಾವ್ಯಾ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಇದನ್ನೂ ಓದಿ: ಹಳ್ಳಿ ಲೈಫ್‌ಗೆ ಗುಡ್‌ಬೈ ಹೇಳಿದ ಇಬ್ಬರು ಪ್ಯಾಟೆ ಹುಡ್ಗೀರು

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅನಿರುದ್ಧ್ ಅವರ ಚಿಕ್ಕಪ್ಪ, ಹಿರಿಯ ನಟ ವೈ.ಜಿ. ಮಹೇಂದ್ರನ್ ಅವರು, ಆ ಹುಡುಗ ಬಹಳ ಮೃದು ಸ್ವಭಾವದವನು. ನನಗೆ ದೊರೆತಿರುವ ಮಾಹಿತಿಯ ಪ್ರಕಾರ ಅವನು ಮದುವೆಗೆ ಸಜ್ಜಾಗುತ್ತಿದ್ದಾರೆ. ಶೀಘ್ರದಲ್ಲೇ ಅನಿರುದ್ಧ ಮದುವೆಯಾಗಲಿದ್ದಾರೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಊಹಾಪೋಹಗಳು ಮತ್ತಷ್ಟು ಹೆಚ್ಚಾಗಿವೆ.
ಕಳೆದ ಒಂದು ವರ್ಷದಿಂದ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಪರಸ್ಪರ ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಲೇ ಇದ್ದವು. ಇವರಿಬ್ಬರು ವಿದೇಶದ ಲಾಸ್ ವೇಗಾಸ್‌ನಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದರು ಮತ್ತು ಅಲ್ಲಿ ಡಿನ್ನರ್ ಡೇಟ್ ಎಂಜಾಯ್ ಮಾಡುತ್ತಿದ್ದರಂತೆ, ಅಲ್ಲದೇ ಇಬ್ಬರ ಸಂಬಂಧಕ್ಕೆ ಕುಟುಂಬದವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗ್ತಿದೆ.

ಕಾವ್ಯಾ ಮಾರನ್‌ಗೆ ಈಗ 33 ವರ್ಷ ಮತ್ತು ಅನಿರುದ್ಧ್ಗೆ 35 ವರ್ಷ ವಯಸ್ಸು ಮತ್ತು ಸ್ಟೇಟಸ್‌ಗೆ ಈ ಜೋಡಿ ಸಖತ್ ಮ್ಯಾಚ್ ಆಗುತ್ತದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಒಟ್ಟಿನಲ್ಲಿ, ಐಪಿಎಲ್ ಮೈದಾನದಲ್ಲಿ ಟೆನ್ಶನ್‌ನಲ್ಲಿ ಕಾಣಿಸಿಕೊಳ್ಳುವ ಕಾವ್ಯಾ ಮತ್ತು ಸ್ಟೇಜ್ ಮೇಲೆ ಬೆಂಕಿ ಹಚ್ಚುವ ಅನಿರುದ್ಧ್ ನಿಜಕ್ಕೂ ಒಂದಾಗುತ್ತಾರಾ? ಅನ್ನೋ ರಹಸ್ಯಕ್ಕೆ ಶೀಘ್ರದಲ್ಲೇ ಉತ್ತರ ಸಿಗುವ ಸಾಧ್ಯತೆಯಿದೆ.ಇದನ್ನೂ ಓದಿ: ಗಮನ ಸೆಳೆದ ‘ನೀ ನಂಗೆ ಅಲ್ಲವಾ’ ಸಿನಿಮಾದ ಫಸ್ಟ್ ಸಾಂಗ್

