– ಈ ಬಾರಿಯೂ ಸಿದ್ದರಾಮಯ್ಯ ತಂಡದ್ದೇ ಮೇಲುಗೈಯಾ?
ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಸರ್ಕಾರದಲ್ಲಿ ಮೊದಲ ಹಂತದ ಸಂಪುಟ (Cabinet) ಕ್ಯಾತೆ ಸರ್ಕಸ್ ನಡುವೆಯೇ ಎರಡನೇ ಹಂತದ ಕ್ಯಾಬಿನೆಟ್ ರಚನೆಗೆ ಸಿದ್ಧತೆ ಶುರುವಾಗಿದೆ. ಎರಡನೇ ಹಂತಕ್ಕೆ ಸಚಿವರ ಪಟ್ಟಿ ತಯಾರಾಗುತ್ತಿದ್ದು, ಸಿದ್ದು ಟೀಂನಲ್ಲೆಷ್ಟು, ಡಿಕೆಶಿ ಟೀಂ ಎಷ್ಟು? ಹೈಕಮಾಂಡ್ ಕೋಟಾ ಎಷ್ಟು ಎಂಬ ಚರ್ಚೆ ಶುರುವಾಗಿದೆ.
ಸಿಎಂ ಡಿಕೆ ಶಿವಕುಮಾರ್ ಸರ್ಕಾರದ ಎರಡನೇ ಹಂತದ ಕ್ಯಾಬಿನೆಟ್ ರಚನೆಗೆ ಸಿದ್ಧತೆಗಳು ಶುರುವಾಗಿದೆ. 20 ಸಚಿವ ಸ್ಥಾನಗಳು ಬಾಕಿ ಇದ್ದು, ಯಾರಿಗೆ ಅದೃಷ್ಟ ಒಲಿಯುತ್ತೆ ಎಂಬ ಲೆಕ್ಕಾಚಾರ ಜೋರಾಗಿದೆ. ಮೊದಲ ಹಂತದಲ್ಲಿ ಹಿರಿತನ, ಜಾತಿ ಲೆಕ್ಕಾಚಾರದಲ್ಲಿ ಬ್ಯಾಲೆನ್ಸ್ ಸಂಪುಟ ಮಾಡಿದ್ದ ಹೈಕಮಾಂಡ್ ಎರಡನೇ ಹಂತದಲ್ಲಿ ಏನು ಮಾಡುತ್ತೆ ಎಂಬ ಕುತೂಹಲ ದಟ್ಟವಾಗಿದೆ. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎಬೋಲಾ ಭೀತಿ – ಮೂವರು ಆಫ್ರಿಕಾ ಪ್ರಜೆಗಳಿಗೆ 21 ದಿನ ಕ್ವಾರಂಟೈನ್
ಇನ್ನು ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ತಂಡ ಮೇಲುಗೈ ಸಾಧಿಸಿದ್ದರು. ಎರಡನೇ ಪಟ್ಟಿಯಲ್ಲಿ ಡಿಕೆಶಿ ಪಟ್ಟಿ ಮೇಲುಗೈ ಸಾದಿಸುತ್ತಾ ಎಂಬ ಚರ್ಚೆ ಜೋರಾಗಿದೆ. ಇದನ್ನೂ ಓದಿ: ರಾಜ್ಯಕ್ಕೆ ಮುಂಗಾರು ಎಂಟ್ರಿ – ಆನೇಕಲ್ ಸುತ್ತಮುತ್ತ ಜೋರು ಮಳೆ
2ನೇ ಪಟ್ಟಿಯಲ್ಲಿ ಯಾರಿಗೆ ಲಕ್?
– ಖಾತೆ ಕ್ಯಾತೆ ನಡುವೆ ಸಚಿವರ ಎರಡನೇ ಪಟ್ಟಿಗೆ ತಯಾರಿ.
– 2ನೇ ಹಂತದಲ್ಲಿ ಉಳಿದ 20 ಸಚಿವ ಸ್ಥಾನ ಭರ್ತಿ.
– ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ, ಹೈಕಮಾಂಡ್ ಆಯ್ಕೆ ಮೇಲುಗೈ.
– ಎರಡನೇ ಪಟ್ಟಿಯಲ್ಲಿ ಇರಲಿದ್ಯಾ ಡಿಕೆಶಿ ಬಣ ಪಾರುಪತ್ಯ?
– 2ನೇ ಹಂತದ ಸೇರ್ಪಡೆಯಲ್ಲಿ ಸಿದ್ದು ಪಟ್ಟಿಯ ಕೆಲವರಿಗಷ್ಟೇ ಆದ್ಯತೆ.
– ಜಮೀರ್ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ.
ದಾವಣಗೆರೆ ಉಪ ಚುನಾವಣೆಯಲ್ಲಿ ಪಕ್ಷ ವಿರೋಧ ಹಣೆಪಟ್ಟಿ ಕಟ್ಟಿಕೊಂಡಿರೋ ಜಮೀರ್‌ಗೆ ಸ್ಥಾನ ಸಿಗುತ್ತಾ ಎಂಬ ಚರ್ಚೆಯೂ ಶುರುವಾಗಿದೆ. ಹೈಕಮಾಂಡ್ ಕೃಪಾಕಟಾಕ್ಷ ಸಿಕ್ಕಿದ್ರೆ ಮಾತ್ರ ಜಮೀರ್‌ಗೆ ಸ್ಥಾನ ಸಿಗಲಿದೆ. ಇಲ್ಲದೆ ಹೋದರೆ ಸಂಪುಟದಿಂದ ಜಮೀರ್ ಅವರನ್ನು ಕೈಬಿಡಬಹುದು. ಇದನ್ನೂ ಓದಿ: ರಾಮಲಿಂಗಾರೆಡ್ಡಿ ಮನವೊಲಿಸುವಲ್ಲಿ ಸಫಲ, ಸಚಿವ ಸ್ಥಾನಕ್ಕೆ ಕೊಟ್ಟ ರಾಜೀನಾಮೆ ವಾಪಸ್: ಸುರ್ಜೇವಾಲ
ಜಮೀರ್ ಸಂಪುಟ ಸೇರ್ಪಡೆಗೆ ಹೆಚ್ಚಿದ ಒತ್ತಡ:
ಇನ್ನು ಮಾಜಿ ಸಚಿವ ಜಮೀರ್‌ಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಬೆಂಗಳೂರಿನ ಮೈಸೂರು ರಸ್ತೆಯ ಸಿರ್ಸಿ ಸರ್ಕಲ್ ನಲ್ಲಿ ಪ್ರತಿಭಟನೆ ಮಢಲಾಯ್ತು. ಜಮೀರ್ ಅಹ್ಮದ್‌ಗೆ ಅನ್ಯಾಯ ಆಗಿದೆ. ನ್ಯಾಯ ಸಿಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದರು. ಈ ವೇಳೆ ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡರು. ಇದನ್ನೂ ಓದಿ: ಟಿ20 ವಿಶ್ವಕಪ್ ತಂದುಕೊಟ್ಟ ನಾಯಕ ಸೂರ್ಯಕುಮಾರ್ ತಂಡದಿಂದಲೇ ಔಟ್ – ಕಾರಣ ಬಿಚ್ಚಿಟ್ಟ BCCI
ಅತ್ತ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಮುಸ್ಲಿಂ ಸಮಾಜದವರು ಹೋರಾಟ ನಡೆಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೆ ಮುಸ್ಲಿಂ ಸಮುದಾಯ ದೊಡ್ಡ ಕೊಡುಗೆ ನೀಡಿದೆ. ಸರ್ಕಾರ ಬಂದಾಗಿನಿAದ ಮುಸ್ಲಿಂ ಸಮುದಾಯಕ್ಕೆ ಸರಿಯಾದ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಮುಸ್ಲಿಂಮರ ಮೇಲೆ ಸಣ್ಣಪುಟ್ಟ ಅನುಮಾನಗಳಿಂದ ಪಕ್ಷದ ಮುಖಂಡರ ಮೇಲೆ ಕ್ರಮ ಜರುಗಿಸಲಾಗುತ್ತಿದೆ. ಜಮೀರ್ ವಿರುದ್ಧ ಆಡಿಯೋ ಒಂದು ಷಡ್ಯಂತ್ರ. ಡಿಕೆ ಸಂಪುಟದಲ್ಲಿ ಜಮೀರ್‌ಗೆ ಸ್ಥಾನ ನೀಡಬೇಕೆಂದು ಹೋರಾಟ ನಡೆಸಿದರು. ಇನ್ನು ಚಿತ್ರದುರ್ಗದಲ್ಲಿ ಜಮೀರ್ ಅಭಿಮಾನಿ ಬಳಗ ಸಹ ಪ್ರತಿಭಟನೆ ನಡೆಸಿತು. ಓಬವ್ವ ವೃತ್ತದಲ್ಲಿ ಜಮೀರ್ ಅಭಿಮಾನಿಗಳು ಧರಣಿ ಮಾಡಿದರು. ಇದನ್ನೂ ಓದಿ: ರಾಮಲಿಂಗಾ ರೆಡ್ಡಿ ಬೆಂಗಳೂರು ನಗರದ ಪಿಲ್ಲರ್ ಆಗಿ ಅಜಾತಶತ್ರು ಎನಿಸಿಕೊಂಡಿದ್ದಾರೆ: ಬಿಕೆ ಹರಿಪ್ರಸಾದ್
ಎರಡನೇ ಪಟ್ಟಿಯಲ್ಲಿ ಡಿಕೆಶಿ ಸಂಪುಟ ಸೇರಲು ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್ ಕಸರತ್ತು ನಡೆಸುತ್ತಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಇಬ್ಬರು ನಾಯಕರಿಂದಲೂ ಲಾಬಿ ಮಾಡಲಾಗುತ್ತಿದೆ. ಕಿತ್ತೂರು ಕರ್ನಾಟಕದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಲಕ್ಷ್ಮಣ ಸವದಿ ಒಂದೆಡೆ ಲಾಬಿ ಮಾಡುತ್ತಿದ್ದರೆ, ಮತ್ತೊಂದೆಡೆ ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹೆಬ್ಬಾಳ್ಕರ್ ಹೈಕಮಾಂಡ್ ಮಟ್ಟದಲ್ಲಿ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರಾಜ್ಯಸಭೆ ಟಿಕೆಟ್‌ಗೆ ಸುಮಲತಾ ಅಂಬರೀಶ್ ಕಸರತ್ತು
20 ಸಚಿವ ಸ್ಥಾನಕ್ಕೆ 40ಕ್ಕೂ ಹೆಚ್ಚು ಶಾಸಕರು ಲಾಬಿ ಶುರು ಮಾಡಿದ್ದಾರೆ. ಹೈಕಮಾಂಡ್ ನಾಯಕರು, ಸಿದ್ದರಾಮಯ್ಯ, ಸಿಎಂ ಡಿಕೆ ಶಿವಕುಮಾರ್ ಭೇಟಿ ಸಂಪುಟಕ್ಕೆ ಸೇರಲು ಸರ್ಕಸ್ ಮಾಡ್ತಾ ಇದ್ದಾರೆ. ಕಾಂಗ್ರೆಸ್ ವಲಯದಲ್ಲಿ ಎರಡನೇ ಪಟ್ಟಿ ರಾಹುಲ್ ಗಾಂಧಿ ಆಯ್ಕೆಯೆ ಅಂತಿಮ ಅಂತಲೂ ಚರ್ಚೆ ಆಗ್ತಿದೆ. ಹೈಕಮಾಂಡ್ ಯಾರಿಗೆ ಎರಡನೇ ಹಂತದಲ್ಲಿ ವರ ಕೊಡುತ್ತೆ ಕಾದು ನೋಡಬೇಕು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಮಲಿಂಗಾರೆಡ್ಡಿ ರಾಜೀನಾಮೆ ಅಂಗೀಕರಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್
