– ಬರ ಚಟುವಟಿಕೆ ಅಧ್ಯಯನಕ್ಕೆ ಆಗ್ರಹ
ವಿಜಯಪುರ: ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಬಿಡಾರ ಹೂಡಿರುವವರನ್ನ ಕಾಂಗ್ರೆಸ್ ಹೈಕಮಾಂಡ್ ಮರಳಿ ರಾಜ್ಯಕ್ಕೆ ಕಳುಹಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಒತ್ತಾಯಿಸಿದ್ದಾರೆ.
ವಿಜಯಪುರದಲ್ಲಿ (Vijayapura) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರದ ಬಗ್ಗೆ ಯಾವುದೇ ನಿರ್ಣಯ ತಗೆದುಕೊಳ್ಳದೇ, ಇವತ್ತು ಸಚಿವ ಸಂಪುಟಕ್ಕೋಸ್ಕರ ದೆಹಲಿಯಲ್ಲಿ ಹೋಗಿ ಕುಳಿತಿದ್ದಾರೆ. ಕನಿಷ್ಠ ಅಲ್ಲಿರುವವರಿಗಾದ್ರೂ ಜ್ಞಾನ ಬೇಕು ಎಂದು ಕುಟುಕಿದ್ದಾರೆ.
ಒಂದು ಸರ್ಕಾರದ ಮುಖ್ಯಮಂತ್ರಿ (Chief Minister), ಎಲ್ಲ ಮಂತ್ರಿಗಳು ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ. ಅವರೆಲ್ಲ ಮರಳಿ ರಾಜ್ಯಕ್ಕೆ ಬಂದು ಬರಗಾಲದ ಚಟುವಟಿಕೆಗಳಲ್ಲಿ ಭಾಗಿ ಆಗಬೇಕು. ಜಿಲ್ಲಾ ಉಸ್ತುವಾರಿಗಳು ವಾರಕ್ಕೊ ಮ್ಮೆಯಾದ್ರು ಬರಗಾಲ ಸಭೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೇವಲ ಕೇಂದ್ರದ ಮೇಲೆ ಟೀಕೆ ಮಾಡುವುದಲ್ಲ, ಕೇಂದ್ರ ಸರ್ಕಾರವೂ ಮಾಡಬೇಕು ಅದರದ್ದೂ ಜವಾಬ್ದಾರಿ ಇದೆ. ಸಂಘರ್ಷದ ಹಾದಿ ಹಿಡಯಲಾರದೇ, ನಿಜವಾದ ರೈತರಿಗೆ, ಬರಗಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ ಮಾನಸಿಕ ಸ್ಥೈರ್ಯ ತುಂಬುವಂತಹ ಕೆಲಸವನ್ನ ರಾಜ್ಯ ಸರ್ಕಾರ ಮಾಡಬೇಕಿತ್ತು ಎಂದು ಬೇಸರ ಹೊರಹಾಕಿದ್ದಾರೆ.
ಇದನ್ನ ಬಿಟ್ಟು ದೆಹಲಿಯಲ್ಲಿ ಏನ್ ಮಾಡ್ತಾ ಕುಳಿತಿದ್ದಾರೆ. ಅವರನ್ನ ಈ ಕೂಡಲೆ ಕಾಂಗ್ರೆಸ್ ಹೈಕಮಾಂಡ್ ಮರಳಿ ರಾಜ್ಯಕ್ಕೆ ಕಳಿಸಲು ಒತ್ತಾಯಿಸುತ್ತೇನೆ ಎಂದಿದ್ದಾರೆ.
