ಟಾಸ್ಕ್‌ವೊಂದರಲ್ಲಿ ಮಾಡರ್ನ್ ಮಹಾಕವಿ ಮಂಜನ (Modern Mahakavi Manja) ಮೇಲೆ ಕೈಮಾಡಿದ್ದಕ್ಕೆ ಸೌಂದರ್ಯ ಶೆಟ್ಟಿಗೆ (Soundarya Shetty) ಕಿಚ್ಚ ಸುದೀಪ್ ಶಿಕ್ಷೆ ನೀಡಿದ್ದಾರೆ. ಸೌಂದರ್ಯ ಬಿಗ್ ಬಾಸ್ (Bigg Boss) ಮನೆಗೆ ಜೈಲು ಪಾಲಾಗಿದ್ದಾರೆ.
ವಾರದ ಕಥೆಯಲ್ಲಿ ‘ಅಗ್ನಿ ಪರೀಕ್ಷೆ’ಯಲ್ಲಿ ಗೆದ್ದು ಬಂದಿದ್ದ ಗ್ಯಾಂಗ್‌ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ದೊಡ್ಮನೆಯಲ್ಲಿ ಮಂಜ, ಕಿರಣ್ ಶಾಸ್ತ್ರಿ, ಲಿಖಿತ್, ಧನುಶ್ ವರ್ತನೆಗೆ ಕಿಚ್ಚ ಗರಂ ಆದರು. ನಾಲ್ವರಿಗೂ ಹಿಗ್ಗಾಮುಗ್ಗ ಜಾಡಿಸಿದ ಬಳಿಕ ಸೌಂದರ್ಯ ಶೆಟ್ಟಿ ವಿಚಾರಕ್ಕೆ ಬಂದರು. ಟಾಸ್ಕ್ ಆಡುವಾಗ ಮಂಜನ ಮೇಲೆ ಸೌಂದರ್ಯ ಕೈ ಮಾಡಿದ್ದಕ್ಕೆ ಶಿಕ್ಷೆ ನೀಡಿದರು. ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಹೃದಯಾಘಾತ ಆಗಿದ್ದು ನಿಜಾನಾ? – ಬಿಗ್‌ಬಾಸ್ ಪ್ರೋಮೋ ತಂದ ಆತಂಕ!

ಸೌಂದರ್ಯ ಅವರೇ ನೀವು ಮಾಡಿದ್ದು ತಪ್ಪು ಎಂದು ಕಿಚ್ಚ ಮನವರಿಕೆ ಮಾಡಿದರು. ‘ಮನೆಯಲ್ಲೇ ಒಬ್ಬ ಹೆಣ್ಣಿನ ಮೇಲೆ ಈ ರೀತಿ ಯಾರಾದ್ರು ಕೈಮಾಡಿದ್ರೆ ಏನಾಗ್ತಿತ್ತು? ಮನೆ ಒಳಗಷ್ಟೇ ಅಲ್ಲ ಹೊರಗಡೆಯೂ ತಾಂಡವ ಆಗ್ತಿತ್ತು. ಸೌಂದರ್ಯ ಅವರೇ ನೀವು ಮಾಡಿದ ತಪ್ಪಿಗೆ ಮಿಡ್ ವೀಕ್‌ನಲ್ಲೇ ಎವಿಕ್ಟ್ ಆಗುತ್ತಿದ್ರಿ. ಆದರೆ, ಬಿಗ್ ಬಾಸ್ ಎಲ್ಲವನ್ನೂ ಕ್ಷಮಿಸಿ ನಿಮ್ಮನ್ನು ಮನೆಯಲ್ಲಿ ಉಳಿಸಿಕೊಂಡಿದ್ದಾರೆ. ಆದರೆ, ಶಿಕ್ಷೆ ಖಂಡಿತಾ ಆಗಬೇಕು. ನೀವು ಮುಂದಿನ ಆದೇಶ ಬರುವ ವರೆಗೂ ಜೈಲಿಗೆ ಹೋಗಬೇಕು’ ಎಂದು ಸೌಂದರ್ಯಗೆ ಖಡಕ್ ಆಗಿ ಸೂಚನೆ ಕೊಡುತ್ತಾರೆ.
‘ನಾನು ದೊಡ್ಡ ತಪ್ಪು ಮಾಡಿದ್ದೇನೆ. ಆ ಕ್ಷಣಕ್ಕೆ ಏನು ಶಿಕ್ಷೆ ಕೊಟ್ಟರೂ ಸ್ವೀಕರಿಸಲು ನಾನು ರೆಡಿ ಇದ್ದೆ. ನನ್ನನ್ನು ಕ್ಷಮಿಸಲಾರದ ತಪ್ಪು ಎಂಬ ಅರಿವು ಇದೆ’ ಎಂದು ಸೌಂದರ್ಯ ಶೆಟ್ಟಿ ಕ್ಷಮೆಯಾಚಿಸಿದರು. ಆದರೆ, ಕಿಚ್ಚ ಸುದೀಪ್ ಜೈಲು ಶಿಕ್ಷೆ ವಿಧಿಸಿದ್ದಾರೆ. ಆ ಮೂಲಕ ಈ ಸೀಸನ್‌ನಲ್ಲಿ ಜೈಲು ಸೇರಿದ ಮೊದಲ ಸ್ಪರ್ಧಿ ಸೌಂದರ್ಯ ಶೆಟ್ಟಿ ಆಗಿದ್ದಾರೆ. ಇದನ್ನೂ ಓದಿ: ಮಾಡರ್ನ್ ಮಹಾಕವಿ ಮಂಜ ಸೇರಿ ಮನೆಮಂದಿಗೆ ಚಳಿ ಬಿಡಿಸಿದ ಕಿಚ್ಚ

