ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಸಂದರ್ಶನವೊಂದರಲ್ಲಿ ತಮ್ಮ ಬ್ರೇಕಪ್ ಬಗ್ಗೆ ಬಿಚ್ಚಿಟ್ಟ ಬೆನ್ನಲ್ಲೇ ಎಕ್ಸ್-ಬಾಯ್‌ಫ್ರೆಂಡ್, ನಟ ಧ್ರುವ ವಿಕ್ರಮ್ ಪ್ರತಿಕ್ರಿಯೆ ನೀಡಿದ್ದಾರೆ.
‘ಬೈಸನ್ ಕಾಳಮಾದನ್’ (Bison Kaalamaadan) ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ಬಳಿಕ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇತ್ತೀಚಿಗೆ ನಟಿ ಅನುಪಮಾ ಪರಮೇಶ್ವರನ್ ಸಂದರ್ಶನವೊಂದರಲ್ಲಿ ಬ್ರೇಕಪ್ ವಿಚಾರವಾಗಿ ಮಾತನಾಡಿದ್ದರು. ಮಾಜಿ ಬಾಯ್‌ಫ್ರೆಂಡ್ ಜೊತೆಗೆ ನಡೆದ ಎರಡು ವರ್ಷಗಳ ಸಂಬಂಧದಲ್ಲಿ ‘ನಾರ್ಸಿಸಿಸಮ್’ (ಆತ್ಮಾಭಿಮಾನದ ಕೊರತೆ) ಅನುಭವಿಸಿದ್ದ ಬಗ್ಗೆ ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ‘ನಮ್ಮ ಮಧ್ಯೆ ಯಾವುದೇ ಮನಸ್ತಾಪ ಇಲ್ಲ’ – ದರ್ಶನ್ ಭೇಟಿ ಬಳಿಕ ಧನ್ವೀರ್ ಸ್ಪಷ್ಟನೆ

ಅನುಪಮಾ ಅವರ ಈ ಹೇಳಿಕೆಯು ಆನ್ಲೈನ್‌ನಲ್ಲಿ ಅವರು ಧ್ರುವ ವಿಕ್ರಮ್ ಅವರನ್ನೇ ಉದ್ದೇಶಿಸಿ ಮಾತನಾಡುತ್ತಿದ್ದಾರೆಂಬ ಊಹಾಪೋಹಗಳಿಗೆ ಕಾರಣವಾಗಿದ್ದು, ಇದೀಗ ವಿವಾದಕ್ಕೆ ಗುರಿಯಾಗಿರುವ ನಟ ಧ್ರುವ ವಿಕ್ರಮ್ ತಮ್ಮ ಮೇಲಿನ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪ್ರೀತಿಸುವಾಗ ವಾಸ್ತವದಲ್ಲಿರುವುದು. ಪ್ರೀತಿಸುವವರನ್ನು ರಕ್ಷಿಸುವುದು ಮುಖ್ಯ. ಇದೆಲ್ಲವೂ ನನ್ನ ಮೇಲೆ ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅನುಪಮಾ ಮಾತುಗಳೇನು?
ಬಾಯ್‌ಫ್ರೆಂಡ್ ವಿಚಾರವಾಗಿ ಮೊದಲ ಬಾರಿಗೆ ಓಪನ್ ಆಗಿ ಮಾತನಾಡಿರುವ ಅನುಪಮಾ, ಕಳೆದ ಎರಡು ವರ್ಷಗಳಿಂದ, ನಾನು ಎಲ್ಲವೂ ಸರಿಯಿದೆ ಎಂಬಂತೆ ನಟಿಸುತ್ತಾ ಬಂದಿದ್ದೇನೆ. ಈಗ ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯೂ ನಾನೇ.. ನಾನು ಎಲ್ಲೆಡೆ ಹೀಗೆಯೇ ಇರುತ್ತೇನೆ. ನಾನು ಯಾವುದೇ ಮುಖವಾಡ ಧರಿಸಿ ಮನೆಯಿಂದ ಹೊರಬರುವುದಿಲ್ಲ. ಕಳೆದ ಎರಡು ವರ್ಷಗಳಿಂದ ನಾನು ಚೆನ್ನಾಗಿದ್ದೇನೆ ಎಂದು ನಟಿಸುತ್ತಿದ್ದೆ, ಆದರೆ ಒಮ್ಮೆ `ಪರದಾ’ ಚಿತ್ರದ ಪ್ರಚಾರದ ಸುದ್ದಿಗೋಷ್ಠಿಯಲ್ಲಿ ನಾನು ಭಾವುಕರಾಗಿ ಕಣ್ಣೀರಿಟ್ಟೆ. ಆಗ ನಾನು ಕೆಂಪು ಬಣ್ಣದ ಚೂಡಿದಾರ್ ಧರಿಸಿದ್ದೆ, ಪತ್ರಕರ್ತರೊಬ್ಬರು ಪ್ರಶ್ನೆಯೊಂದನ್ನು ಕೇಳಿದಾಗ ನಾನು ಅಳಲು ಪ್ರಾರಂಭಿಸಿದೆ. ಪರಿಸ್ಥಿತಿ ಎಷ್ಟೇ ಕಷ್ಟಕರವಾಗಿದ್ದರೂ, ವೇದಿಕೆಯ ಮೇಲೆ ಅಳುವ ಸ್ವಭಾವ ನನ್ನದಲ್ಲ ಎಂದಿದ್ದಾರೆ. ಇದನ್ನೂ ಓದಿ: ತ್ರಿಷಾಗೆ ಮೊದಲ ಸಾಲಿನ ಸೀಟು ಕೊಟ್ಟಿದ್ಯಾಕೆ? ಸಿಎಂ ವಿಜಯ್‌ಗೆ ಡಿಎಂಕೆ ಟಾಂಗ್


