ನವದೆಹಲಿ: ಕೆಲಸಕ್ಕೆ ಮರಳಿದ ದಿನವೇ ನವವಿವಾಹಿತೆ (Newlywed) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೂ ಮುನ್ನ ಆಕೃತಿ ತನ್ನ ಸಹೋದ್ಯೋಗಿಗಳಿಗೆ ಸಣ್ಣ ಪಾರ್ಟಿಯೊಂದನ್ನು (Party) ಆಯೋಜಿಸಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಶನಿವಾರ ರಾತ್ರಿ ಲೋಧಿ ಕಾಲೋನಿಯ (Lodhi Colony) ಪಾಲಿಕಾ ಕುಂಜ್ ವಸತಿ ಸಮುಚ್ಚಯದ ಆವರಣದಲ್ಲಿ ಆಕೃತಿಯ ಮೃತದೇಹ ಪತ್ತೆಯಾಗಿದೆ. ಕಟ್ಟಡದಿಂದ ಕೆಳಗೆ ಬಿದ್ದ ಪರಿಣಾಮ ಆಕೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ನಿಖರ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮದುವೆಯಾಗಿ 2 ತಿಂಗಳಲ್ಲೇ ನವವಿವಾಹಿತೆ ಅನುಮಾನಾಸ್ಪದ ಸಾವು; ವರದಕ್ಷಿಣೆ ಕಿರುಕುಳ ಶಂಕೆ
ಆಕೃತಿ ಸುತಾರ್ ಖಾಸಗಿ ಸಂಸ್ಥೆಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ (Sales Executive) ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 24ರಂದು ಮದುವೆಯಾದ ಬಳಿಕ ರಜೆಯಲ್ಲಿದ್ದ ಆಕೃತಿ, ಜು.4ರಂದು ಮೊದಲ ಬಾರಿಗೆ ಕಚೇರಿಗೆ ಹಾಜರಾಗಿದ್ದರು. ಕೆಲಸಕ್ಕೆ ಮರಳಿದ ಸಂತಸದಲ್ಲಿ ಸಹೋದ್ಯೋಗಿಗಳಿಗಾಗಿ ಸಣ್ಣ ಪಾರ್ಟಿಯನ್ನೂ ಆಯೋಜಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನ ಜಿಲ್ಲೆಯ ವಿವಿಧೆ ಭಾರೀ ಗಾಳಿ ಸಹಿತ ಮಳೆ – ಮನೆ ಮೇಲೆ ಬಿದ್ದ ಬೃಹತ್ ಗಾತ್ರದ ಮರ
ಸಂಜೆ ಸುಮಾರು 6 ಗಂಟೆ ವೇಳೆಗೆ ಆಕೃತಿ ತನ್ನ ತಾಯಿಗೆ ಕರೆ ಮಾಡಿ ಮಾತನಾಡಿದ್ದರು. ಕಚೇರಿಯ ಪಾರ್ಟಿ ಯಶಸ್ವಿಯಾಗಿ ನಡೆದಿದ್ದು, ತಾನು ಮನೆಗೆ ಹಿಂದಿರುಗುತ್ತಿರುವುದಾಗಿ ತಿಳಿಸಿದ್ದರು. ಆ ವೇಳೆ ಆಕೆಯ ಧ್ವನಿಯಲ್ಲಿ ಯಾವುದೇ ಆತಂಕ ಅಥವಾ ಖಿನ್ನತೆಯ ಲಕ್ಷಣಗಳು ಕಂಡುಬಂದಿರಲಿಲ್ಲ ಎಂದು ಕುಟುಂಬ ಹೇಳಿದೆ. ಇದೇ ಕಾರಣಕ್ಕೆ ಆತ್ಮಹತ್ಯೆಯ ಸಾಧ್ಯತೆಯನ್ನು ಕುಟುಂಬ ಸಂಪೂರ್ಣವಾಗಿ ತಳ್ಳಿಹಾಕಿದೆ. ಇದನ್ನೂ ಓದಿ: ಎಲ್ ನಿನೋ ಎಫೆಕ್ಟ್ ಮಳೆಗಷ್ಟೇ ಅಲ್ಲ – ವಸ್ತುಗಳ ಮೇಲೂ ಬೀಳುತ್ತೆ.. ಜೇಬಿಗೆ ಕತ್ತರಿ ಹಾಕುತ್ತೆ ಯಾಕೆ?

ಆದರೆ ರಾತ್ರಿ ಸುಮಾರು 8 ಗಂಟೆಗೆ ಆಕೃತಿಯ ಪತಿ ಅರಸ್ತು ಸಿಕ್ಕಾ ಕುಟುಂಬಕ್ಕೆ ಕರೆ ಮಾಡಿ, ಆಕೃತಿ ಕಾಣೆಯಾಗಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ. ಇದಾದ ಸುಮಾರು 90 ನಿಮಿಷಗಳ ಬಳಿಕ, ಲೋಧಿ ಕಾಲೋನಿಯ ಪಾಲಿಕಾ ಕುಂಜ್ ನಿವಾಸಿ ಸಮುಚ್ಚಯದಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಕುಟುಂಬಕ್ಕೆ ತಿಳಿಸಿದ್ದಾರೆ. ಬಳಿಕ ಅದು ಆಕೃತಿಯ ಮೃತದೇಹ ಎಂಬುದು ದೃಢಪಟ್ಟಿದೆ. ಇದನ್ನೂ ಓದಿ: Women’s T20 World Cup | 7ನೇ ಬಾರಿಗೆ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ ಆಸೀಸ್ ವನಿತೆಯರು
ಆಕೃತಿ ಮನೆ ಪುಷ್ಪ ವಿಹಾರದಲ್ಲಿದ್ದು, ಮನೆಯಿಂದ ಸುಮಾರು 10 ಕಿ.ಮೀ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಆಕೃತಿ ಸಹೋದರ ಅಮಯ್ ಸುತಾರ್, ನನ್ನ ಅಕ್ಕ ಮಾನಸಿಕವಾಗಿ ತುಂಬಾ ದೃಢವಾಗಿದ್ದಳು. ಯಾವುದೇ ಸಂದರ್ಭದಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಆಕೆಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಮಹಾ ಮಳೆಗೆ ಕುಸಿದ 4 ಅಂತಸ್ತಿನ ಕಟ್ಟಡ – 6 ಮಂದಿ ದುರ್ಮರಣ
ಇನ್ನೊಂದೆಡೆ, ಮದುವೆಯಾದ ದಿನದಿಂದಲೇ ಪತಿ ಅರಸ್ತು ಸಿಕ್ಕಾ ಹಾಗೂ ಅವರ ಕುಟುಂಬದವರು 20 ಲಕ್ಷ ರೂ. ವರದಕ್ಷಿಣೆಗಾಗಿ ನಿರಂತರ ಒತ್ತಡ ಹೇರುತ್ತಿದ್ದರು ಎಂದು ಕುಟುಂಬ ಗಂಭೀರ ಆರೋಪ ಮಾಡಿದೆ. ಹಣ ತರುವಂತೆ ಆಗಾಗ ಕಿರುಕುಳ ನೀಡಲಾಗುತ್ತಿತ್ತು. ಅಲ್ಲದೇ ಹಲವು ಬಾರಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಕುಟುಂಬಸ್ಥರು ದೂರಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಎಲ್‌ಇಡಿ ಫ್ಲಡ್‌ಲೈಟ್ ವ್ಯವಸ್ಥೆಗೆ ಚಾಲನೆ!
ಸಾವಿಗೆ ಎರಡು ದಿನಗಳ ಮುನ್ನ ಪತಿ-ಪತ್ನಿಯ ನಡುವೆ ತೀವ್ರ ಜಗಳವೂ ನಡೆದಿತ್ತು ಎಂದು ಕುಟುಂಬ ತಿಳಿಸಿದೆ. ಎಂಟು ವರ್ಷಗಳ ಪ್ರೀತಿಯ ಬಳಿಕ ಇಬ್ಬರೂ ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವೇ ವಾರಗಳಲ್ಲಿ ವರದಕ್ಷಿಣೆ ವಿಚಾರವಾಗಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎಂದು ಕುಟುಂಬ ಆರೋಪಿಸಿದೆ. ಮೃತಳ ಪತಿ ಪ್ರಸ್ತುತ ನಿರುದ್ಯೋಗಿಯಾಗಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: SIR ವಿಷಯದಲ್ಲಿ ಅಧಿಕಾರಿಗಳ ದುರ್ಬಳಕೆಗೆ ಕೋರ್ ಕಮಿಟಿ ಸಭೆ ಆಕ್ಷೇಪ – ವಿಜಯೇಂದ್ರ
ಪ್ರಕರಣ ಸಂಬಂಧ ದೆಹಲಿ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಆರಂಭಿಸಿದ್ದು, ಆತ್ಮಹತ್ಯೆ, ಕೊಲೆ, ವರದಕ್ಷಿಣೆ ಕಿರುಕುಳ ಸೇರಿದಂತೆ ಪ್ರತಿಯೊಂದು ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯ ಬಳಿಕವೇ ಆಕೃತಿಯ ಸಾವಿನ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆಯಿದೆ. ಕುಟುಂಬದ ದೂರಿನ ಆಧಾರದ ಮೇಲೆ ಪತಿ ಹಾಗೂ ಅವರ ಕುಟುಂಬದವರ ಪಾತ್ರವನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಬದರಿನಾಥ ಧಾಮದಲ್ಲೂ ದೇಣಿಗೆ ದುರುಪಯೋಗ ಆರೋಪ – ತನಿಖೆಗೆ 4 ಸದಸ್ಯರ ಸಮಿತಿ ರಚನೆ
