ಮುಂಬೈ: ನಗರದ ಮನ್ಖುರ್ದ್ ಪ್ರದೇಶದಲ್ಲಿ ಭಾನುವಾರ (ಇಂದು) ರಾತ್ರಿ ಸುರಿದ ಭಾರೀ ಮಳೆಗೆ ನಾಲ್ಕು ಅಂತಸ್ತಿನ ಚಾಲ್ ಕಟ್ಟಡ ಕುಸಿದು 6 ಮಂದಿ ದುರ್ಮರಣಕ್ಕೀಡಾಗಿದ್ದದಾರೆ
ಮನ್ಖುರ್ದ್ ಪ್ರದೇಶದಲ್ಲಿರೋ ಹನುಮ ಮಂದಿರದ ಹಿಂದಿರುವ ಜನತಾ ನಗರದ ಚಾಲ್ ಸಂಖ್ಯೆ 5 ರಲ್ಲಿ ರಾತ್ರಿ 8.30ರ ಸುಮಾರಿಗೆ ದುರಂತ ಸಂಭವಿಸಿದೆ. ಚಾಲ್ ಅಂದ್ರೆ ಮುಂಬೈ ನಗರದಲ್ಲಿ ಕಂಡುಬರುವ ಒಂದು ವಿಶಿಷ್ಟವಾದ ವಸತಿ ಶೈಲಿಯಾಗಿದೆ.
ಅಧಿಕಾರಿಗಳ ಪ್ರಕಾರ, ನೆಲ ಮತ್ತು 3ನೇ ಅಂತಸ್ತಿನ ಕಟ್ಟಡದ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದು 6 ಜನ ಮೃತಪಟ್ಟಿದ್ದು, ಶವಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ. ಘಟನೆ ಬಳಿಕ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಕೈಗೊಂಡಿವೆ.

ಮುಂಬೈ ಅಗ್ನಿಶಾಮಕ ದಳ (MFB), ಮುಂಬೈ ಪೊಲೀಸರು, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ವಾರ್ಡ್ ಕಚೇರಿ ಮತ್ತು 108 ಆಂಬ್ಯುಲೆನ್ಸ್ ಸೇವೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಮುಂಬೈ ಶಾಲಾ ಕಾಲೇಜುಗಳಿಗೆ ಜು.6 ರಂದು ರಜೆ
ಇನ್ನೂ ದಕ್ಷಿಣ ಭಾರತದಲ್ಲಿ ಬರದ ಭೀತಿ ಆವರಿಸುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿ (Maharastra) ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. 4 ದಿನಗಳಿಂದ ಭಾರೀ ಮಳೆ (Rain) ಆಗಿದ್ದು, ಇವತ್ತು ಮಳೆ ಇನ್ನಷ್ಟು ಜೋರಾಗಿದೆ. ಮಳೆಗೆ ವಾಣಿಜ್ಯ ಮಹಾನಗರಿ ಮುಂಬೈ ನಲುಗಿ ಹೋಗಿದೆ. ರಸ್ತೆಗುಂಡಿಗಳು, ಮ್ಯಾನ್‌ಹೋಲ್‌ಗಳು, ಚರಂಡಿಗಳು ಉಕ್ಕಿ ಹರಿದಿವೆ. ಗಾಳಿ ಮಳೆಗೆ ಮರಗಳು ಎಲ್ಲೆಂದರಲ್ಲಿ ಬುಡ ಮೇಲಾಗಿವೆ. ನೀರಿನಲ್ಲಿ ಕಾರುಗಳು, ಬೈಕ್‌ಗಳು ಎಲ್ಲಾ ಮುಳುಗಿಹೋಗಿವೆ. ಜನ ರಬ್ಬರ್ ಬೋಟ್‌ಗಳಲ್ಲಿ ಓಡಾಡುವಂತಾಗಿದೆ. ಮರ ಬಿದ್ದು ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಮುಂಬೈ ಮಾತ್ರವಲ್ಲದೇ ಪುಣೆ, ಥಾಣೆಗಳಲ್ಲೂ ಭಾರೀ ಮಳೆಯಾಗುತ್ತಿದೆ. ಇದರ ನಡುವೆ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ ಮಾಡಲಾಗಿದೆ. ಮಳೆಯ ಅಬ್ಬರಕ್ಕೆ ಮುಂಬೈ ಶಾಲಾ ಕಾಲೇಜುಗಳಿಗೆ ಜು.6 ರಂದು ರಜೆ ಘೋಷಿಸಲಾಗಿದೆ.

