ವಾಷಿಂಗ್ಟನ್: ಅಮೆರಿಕದ (America) ಸಿಯಾಟಲ್‌ನಲ್ಲಿ ಆಹಾರ ಉತ್ಸವದ (Seattle Food Festival) ವೇಳೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.
ಸಿಯಾಟಲ್ ಕೇಂದ್ರದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನದ ಬಗ್ಗೆ ಪೊಲೀಸರಿಂದ ಮಾಹಿತಿ ಲಭ್ಯವಾಗಿಲ್ಲ. ಗುಂಡಿನ ದಾಳಿ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 114 ರಫೇಲ್ ಜೆಟ್ ಖರೀದಿಗೆ ಭಾರತ ವಿನಂತಿ – ಬಿಗ್ ಡೀಲ್‌ಗೆ ಆಗಸ್ಟ್‌ನಲ್ಲೇ ಫ್ರಾನ್ಸ್‌ನಿಂದ ಸಿಗುತ್ತಾ ಒಪ್ಪಿಗೆ?
ಸಿಯಾಟಲ್ ಸೆಂಟರ್‌ನಲ್ಲಿ ಬೈಟ್ ಆಫ್ ಸಿಯಾಟಲ್ ಉತ್ಸವ ನಡೆಯುತ್ತಿದೆ. ಸಂಜೆ 6 ಗಂಟೆ ಸುಮಾರಿಗೆ ಸ್ಥಳದಲ್ಲಿ ಗುಂಡಿನ ಚಕಮಕಿ ನಡೆದಿದೆ. ಸಿಯಾಟಲ್ ಟೈಮ್ಸ್ ವರದಿಯ ಪ್ರಕಾರ, ದಾಳಿಗೆ ಬಲಿಯಾದವರ ಮೃತದೇಹಗಳನ್ನು ಹಾರ್ಬರ್‌ವ್ಯೂ ವೈದ್ಯಕೀಯ ಕೇಂದ್ರಕ್ಕೆ ಸಾಗಿಸಲಾಗಿದೆ.
ದಾಳಿ ಘಟನೆಯ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಜನನಿಬಿಡ ಕ್ರೀಡಾಂಗಣದಲ್ಲಿ ಗುಂಡಿನ ಶಬ್ದ ಕೇಳಿದ ತಕ್ಷಣ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಸ್ಥಳದಲ್ಲಿ ಕನಿಷ್ಠ 7ರಿಂದ 8 ಗುಂಡಿನ ಶಬ್ದ ಕೇಳಿಬಂದಿದೆ. ಉತ್ಸವ ಆರಂಭದಲ್ಲೇ ತುಂಬಾ ಜನಜಂಗುಳಿಯಿಂದ ಕೂಡಿತ್ತು. ಜನರು ಆಹಾರಕ್ಕಾಗಿ ಕಿಕ್ಕಿರಿದಿದ್ದರು. ಈ ವೇಳೆ ದಾಳಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ 200 ಮತ್ತು 500 ರೂ. ಮುಖಬೆಲೆಯ ಭಾರತೀಯ ಕರೆನ್ಸಿಗಳಿಗೆ ಅನುಮತಿ
ವಾರ್ಷಿಕ ಉತ್ಸವವು 1982 ರಲ್ಲಿ ಪ್ರಾರಂಭವಾಯಿತು. ಮೂರು ದಿನಗಳ ವರೆಗೆ ಈ ಉತ್ಸವ ನಡೆಯುತ್ತದೆ. ಇಲ್ಲಿ ಸುಮಾರು 3,50,000 ಜನರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿತ್ತು.

