ಕಠ್ಮಂಡು: ನೇಪಾಳದಲ್ಲಿ (Nepal) 200 ಮತ್ತು 500 ರೂ. ಮುಖಬೆಲೆಯ ಭಾರತೀಯ ಕರೆನ್ಸಿ (Indian Currency) ನೋಟುಗಳನ್ನು ಅನುಮತಿಸಲಾಗಿದೆ.
2016 ರ ಭಾರತದ ನೋಟು ರದ್ದತಿಯ ನಂತರ ಸುಮಾರು ದಶಕದಿಂದ 100 ರೂ.ವರೆಗಿನ ನೋಟುಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿತ್ತು. ಈಗ ಆ ನಿಯಮವನ್ನು ಕೊನೆಗಾಣಿಸಲಾಗಿದೆ. ನೇಪಾಳವು ಭಾರತೀಯ ಮತ್ತು ನೇಪಾಳಿ ಪ್ರಜೆಗಳಿಗೆ 200 ಮತ್ತು 500 ರೂ. ಮುಖಬೆಲೆಯ ಭಾರತೀಯ ಕರೆನ್ಸಿ ನೋಟುಗಳನ್ನು ದೇಶಕ್ಕೆ ತರಲು ಅಥವಾ ಹೊರಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಿದೆ. ಇದನ್ನೂ ಓದಿ: ಹಾರಿ ಹೋಯ್ತು ಮಗುವಿನ ತೊಟ್ಟಿಲು; ಚೀನಾದಲ್ಲಿ ಭೀಕರ ಚಂಡಮಾರುತಕ್ಕೆ 10 ಬಲಿ
ನೇಪಾಳ ರಾಷ್ಟ್ರ ಬ್ಯಾಂಕ್ (NRB) ಗುರುವಾರ ಹೊರಡಿಸಿದ ನೋಟಿಸ್‌ನಲ್ಲಿ, ಭಾರತೀಯ ಮತ್ತು ನೇಪಾಳದ ಪ್ರಜೆಗಳು 200 ಮತ್ತು 500 ರೂ. ಮುಖಬೆಲೆಯ ಭಾರತೀಯ ಕರೆನ್ಸಿ ನೋಟುಗಳನ್ನು ಪ್ರತಿ ವ್ಯಕ್ತಿಗೆ 25,000 ರೂ. ಮಿತಿಯವರೆಗೆ ಹೊಂದಬಹುದು ಎಂದು ಹೇಳಿದೆ.
ನೇಪಾಳದ ಪ್ರಜೆಗಳು ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದಿಂದ ನೇಪಾಳಕ್ಕೆ ಭಾರತೀಯ ಕರೆನ್ಸಿಯನ್ನು ತರುವಂತಿಲ್ಲ. ಅದೇ ರೀತಿ, ಅವರು ನೇಪಾಳದಿಂದ ಭಾರತವನ್ನು ಹೊರತುಪಡಿಸಿ ಮೂರನೇ ದೇಶಕ್ಕೆ ಭಾರತೀಯ ಕರೆನ್ಸಿಯನ್ನು ಸಾಗಿಸುವಂತಿಲ್ಲ ಎಂದು ತಿಳಿಸಿದೆ.
ಪರಿಷ್ಕೃತ ನಿಬಂಧನೆಯು ನೇಪಾಳಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ, ಭಾರತದೊಂದಿಗೆ ವ್ಯಾಪಾರ ಮತ್ತು ವ್ಯವಹಾರದಲ್ಲಿ ತೊಡಗಿರುವ ನೇಪಾಳದ ಪ್ರಜೆಗಳಿಗೆ ಅನುಕೂಲವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಇರಾನ್ ಮೇಲಿನ ಏರ್‌ಸ್ಟ್ರೈಕ್‌ಗೆ ತಾತ್ಕಾಲಿಕ ತಡೆ – ರಾಜತಾಂತ್ರಿಕ ಮಾತುಕತೆಗೆ ಮುಂದಾದ ಟ್ರಂಪ್
ನೇಪಾಳದ ಪ್ರಜೆಗಳು ಮತ್ತು ವಿದೇಶಿ ಸಂದರ್ಶಕರು ಕಸ್ಟಮ್ಸ್ ಘೋಷಣೆ ಮಾಡದೆಯೇ 5,000 ಡಾಲರ್ ಅಥವಾ ಇತರ ವಿದೇಶಿ ಕರೆನ್ಸಿಗಳಲ್ಲಿ ಅದಕ್ಕೆ ಸಮಾನವಾದ ಹಣವನ್ನು ನೇಪಾಳಕ್ಕೆ ತರಬಹುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
