ವಾಷಿಂಗ್ಟನ್: ಇರಾನ್(Iran) ಮೇಲೆ ಸತತ 13 ದಿನಗಳಿಂದ ನಡೆಸುತ್ತಿದ್ದ ಏರ್‌ಸ್ಟ್ರೈಕ್‌ಗಳನ್ನು (Air Strike) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ.
ರಾಜತಾಂತ್ರಿಕ ಮಾತುಕತೆಗಳಿಗೆ ಅವಕಾಶ ನೀಡಲು ಮತ್ತು ಕದನ ವಿರಾಮ ಅಥವಾ ಒಪ್ಪಂದದ ಸಾಧ್ಯತೆಗಳನ್ನು ಪರಿಶೀಲಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಕಳೆದ ಎರಡು ವಾರಗಳಿಂದ ಪ್ರತಿದಿನ ಇರಾನ್ ಮೇಲಿನ ಅಮೆರಿಕದ ದಾಳಿ ನಡೆದಿತ್ತು. ಶುಕ್ರವಾರದಿಂದ ಹೊಸ ದಾಳಿಗಳನ್ನು ನಡೆಸದಂತೆ ಟ್ರಂಪ್ ಸೇನೆಗೆ ಸೂಚಿಸಿದ್ದಾರೆ. ಪೆಂಟಗನ್ (ಅಮೆರಿಕ ರಕ್ಷಣಾ ಇಲಾಖೆ) ವರದಿಗಳ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ದಾಳಿ ನಿರಂತರವಾಗಿ ನಡೆದಿದ್ದರಿಂದ ಅಮೆರಿಕ ಬಳಿ ಇರುವ ಕ್ಷಿಪಣಿ ನಿರೋಧಕ ವ್ಯವಸ್ಥೆಗಳ (ಪೇಟ್ರಿಯಾಟ್ ಇಂಟರ್‌ಸೆಪ್ಟರ್) ದಾಸ್ತಾನು ಗಣನೀಯವಾಗಿ ಕಡಿಮೆಯಾಗಿದೆ. ಇದು ಕೂಡ ದಾಳಿ ತಡೆಹಿಡಿಯಲು ಪ್ರಮುಖ ಕಾರಣ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಿ.ಟಿ ರವಿ ಮನೆ ಮುಂದೆ ಭಾರೀ ಹೈಡ್ರಾಮಾ – ಇನ್ಸ್‌ಪೆಕ್ಟರ್ ಅಂಟಿಸಿದ ನೋಟಿಸ್ ಕಿತ್ತೆಸೆದ ಬೆಂಬಲಿಗರು
ಒಮಾನ್ ದೇಶದ ಪ್ರತಿನಿಧಿಗಳು ಇರಾನ್ ರಾಜಧಾನಿ ಟೆಹ್ರಾನ್‌ಗೆ ಭೇಟಿ ನೀಡಿ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮರುಪರಿಶೀಲಿಸುವ ಮತ್ತು ಉದ್ವಿಗ್ನತೆ ಶಮನಗೊಳಿಸುವ ಕುರಿತು ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನ ಒಡೆಸಾ ಬಂದರಿನಲ್ಲಿ ಹಡಗಿನ ಮೇಲೆ ಮತ್ತೊಂದು ದಾಳಿ – ಇಬ್ಬರು ಭಾರತೀಯರು ನಾಪತ್ತೆ
ರಾಜತಾಂತ್ರಿಕ ಮಾತುಕತೆಗಳು ವಿಫಲವಾದರೆ ಅಥವಾ ಇರಾನ್ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಮತ್ತೆ ದಾಳಿ ನಡೆಸಿದರೆ, ಯಾವುದೇ ಕ್ಷಣದಲ್ಲಾದರೂ ವಾಯುದಾಳಿಯನ್ನು ಪುನರಾರಂಭಿಸಲು ಅಮೆರಿಕ ಸಿದ್ಧವಾಗಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.
