ಹರೀಶ್ ರಾಜ್(Harish Raj) ಅವರನ್ನು ಹಿರಿ ತೆರೆ ಕಿರುತೆರೆಯಲ್ಲಿ ನೋಡಿ ಮೆಚ್ಚಿಕೊಂಡ ಅಭಿಮಾನಿಗಳಿದ್ದಾರೆ. ಇಷ್ಟು ದಿನ ನಾವೂ ನೀವೂ ನೋಡಿದ ಹರೀಶ್ ರಾಜ್ ಬೇರೆ. ಈಗ ಪ್ಲೇ ಬಾಯ್ ಎಲ್ಲರನ್ನ ಕಾಡೋದಕ್ಕೆ ಬಂದಿದ್ದಾರೆ. ಲವ್ ಕಾಕ್ಟೇಲ್‌ನಲ್ಲಿ (Love Cocktail) ಕೈನಲ್ಲಿ ಹಿಡಿದು ಎಲ್ಲರನ್ನು ಸೆಳೆಯುತ್ತಿದ್ದಾರೆ. ಲವ್ ಕಾಕ್ಟೇಲ್ ಸಿನಿಮಾದ ಮೇಕಿಂಗ್, ಸಾಂಗ್ಸ್ ಗಳನ್ನ ಬಿಟ್ಟು ಹರೀಶ್ ರಾಜ್ ತಮ್ಮ ಮತ್ತೊಂದ ಮಗಲನ್ನ ವೀಕ್ಷಕರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.
ಅದರಲ್ಲೂ ಲವ್ ಫೇಲ್ಯೂರ್ ಆದ್ರೆ ಏನಂತೆ, ಲೈಫ್ ಹೇಗೆ ಜಾಲಿಯಾಗಿ ಕಳೆಯಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ. ಅವರದ್ದೇ ಬತ್ತಳಿಕೆಯಲ್ಲಿ ಬಂದ ಕಥೆ ಇದಾಗಿದ್ದು, ನಿರ್ದೇಶನವನ್ನು ಅವರೇ ಮಾಡಿದ್ದಾರೆ. ಈ ಬಗ್ಗೆ ಹರೀಶ್ ರಾಜ್ ಹೇಳಿದ್ದು ಹೀಗೆ, ಇಂಡಸ್ಟ್ರಿಯ ಜರ್ನುಗೆ 30 ವರ್ಷ, ನನಗೀಗ 50 ವರ್ಷ. ಈ ಸಂತಸವನ್ನ ಎಲ್ಲರ ಜೊತೆಗೆ ಹಂಚಿಕೊಳ್ಳುವುದಕ್ಕೆ ಇಷ್ಟಪಡ್ತಾ ಇದ್ದೀನಿ. ಉಮೇಶ್ ಅಣ್ಣ ಒಳ್ಳೆ ಪಾತ್ರ ಮಾಡಿದ್ದರು. ಆದರೆ ಇಂದು ಅವರು ನಮ್ಮ ಜೊತೆಗೆ ಇಲ್ಲ. ಅಭಿನಯ ಮೇಡಂ ಜೊತೆಗೆ ಈ ಹಿಂದೆ ಒಂದು ಕಾಮಿಡಿ ಪಾತ್ರ ಮಾಡಿದ್ದೆ. ಇಮನದು ಒಟ್ಟಿಗೆ ಆಗಿದ್ದೀವಿ. ಉಮಾಶ್ರೀ ಅಮ್ಮ ಅದ್ಭುತವಾಗಿ ಕಾಡ್ತಾರೆ. ಈ ಸಿನಿಮಾದ ಟೈಟಲ್ ಅನ್ನ ಈ ಮೊದಲು ವೆಂಕಟೇಶಾಯನಮಃ ಅಂದುಕೊಂಡಿದ್ದೆವು. ಸೆನ್ಸಾರ್ ಮಂಡಳಿ ಅವರು ಹೊಗಳಿದರು. ಒಂದು ಮಾರ್ಗದರ್ಶನದ ಪ್ರಕಾರ ಟೈಟಲ್ ಅನ್ನು ಬದಲಾಯಿಸಿದೆವು ಎಂದಿದ್ದಾರೆ.

ನಿರ್ಮಾಪಕ ಜನಾರ್ದನ್ ಪಿ ಮಾತನಾಡಿ, ನಿರ್ಮಾಪಕ ಅನ್ನೋದನ್ನ ಬಿಟ್ಟರೆ ಉಳಿದ ಜವಾಬ್ದಾರಿಯನ್ನೆಲ್ಲಾ ಅವರೇ ತಲೆ ಮೇಲೆ ಹಾಕಿಕೊಂಡು ನಿಭಾಯಿಸಿದರು. ಸಮಯ ಮಾಡಿಕೊಂಡು ಬಂದು ಹೋಗಿ ಅಂತಷ್ಟೇ ಹೇಳ್ತಾ ಇದ್ದರು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ನೋಡಿ ಹಾರೈಸಿ ಎಂದರು. ಅಭಿನಯ ಮಾತನ್ನಾಡಿ, ಹರೀಶ್ ನಾನು ಹೋಗ್ಲಿ ಬಿಡಿ ಸರ್ ಎಂಬ ಕಾಮಿಡಿ ಸೀರಿಯಲ್ ನಲ್ಲಿ ಮಾಡ್ತಾ ಇದ್ದೆವು. ಅಂದೆ ನಂಗೆ ಇವರ ಎನರ್ಜಿ ನೋಡಿ ನೀವೂ ಹೀರೋ ಆಗಬಹುದು ಎಂದಿದ್ದ. ಆಮೇಲೆ ಹೀರೋ ಆಗಿ ಮಿಂಚಿದ್ರು. ನಾನು ಒಮ್ಮೆ ಕೇಳಿದ್ದೆ ಏನ್ ಹರೀಶ್ ನಮ್ಮನ್ನೆಲ್ಲಾ ಹಾಕಿಕೊಳ್ಳೋದೆ ಇಲ್ಲ ಅಂದಿದ್ದೆ. ಅದಾದ ಮೇಲೆ ಎಷ್ಟೋ ದಿನಕ್ಕೆ ಕಾಲ್ ಮಾಡಿ ಈ ಪಾತ್ರ ಕೊಟ್ಟರು ಎಂದರು. ಇದನ್ನೂ ಓದಿ: `ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಚಿತ್ರದ ಟೀಸರ್ ರಿಲೀಸ್
