ತೆಲುಗಿನ ಸ್ಟಾರ್ ನಟ ರಾಮ್ ಚರಣ್ (Ram Charan) ಶೀಘ್ರದಲ್ಲೇ ಸರ್ಜರಿಗೆ ಒಳಗಾಗಲಿದ್ದಾರೆ ಎನ್ನುವ ಸುದ್ದಿ ಸಿನಿ ವಲಯದಲ್ಲಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ನಟ ಹಾಗೂ ಡಿಸಿಎಂ ಪವನ್ ಕಲ್ಯಾಣ್ ಮುಂಬೈನ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ರಾಮ್ ಚರಣ್ ಕೂಡ ತೋಳು ಮತ್ತು ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ರಾಮ್ ಚರಣ್ ಅವರಿಗೆ ಕಳೆದ ಕೆಲ ದಿನಗಳಿಂದ ತೋಳು ಮತ್ತು ಭುಜದ ನೋವು ಕಾಡುತ್ತಿತ್ತು. ಪೆದ್ದಿ ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಬಿದ್ದ ಗಾಯದಿಂದ ಈ ತೊಂದರೆ ಉಂಟಾಗಿದೆ ಎನ್ನಲಾಗಿದೆ.
ಪೆದ್ದಿ ಚಿತ್ರದ ಪ್ರಚಾರದ ವೇಳೆ ರಾಮ್ ಚರಣ್ ಕೈಗೆ ಪ್ಲಾಸ್ಟರ್ ಹಾಕಿಕೊಂಡೇ ಕಾಣಿಸಿಕೊಂಡಿದ್ದರು. ಇದೀಗ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಲವ್ ಕಾಕ್ಟೇಲ್ ಕುಡಿಯೋಕೆ ರೆಡಿಯಾದ ಹರೀಶ್ ರಾಜ್
ಇತ್ತೀಚೆಗಷ್ಟೇ ಅವರ ಚಿಕ್ಕಪ್ಪ ಪವನ್ ಕಲ್ಯಾಣ್ ಯಶಸ್ವಿಯಾಗಿ ಸರ್ಜರಿ ಮುಗಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ಅದೇ ಕುಟುಂಬದ ಮತ್ತೊಬ್ಬ ನಟ ರಾಮ್ ಚರಣ್ ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.ಇದನ್ನೂ ಓದಿ: ಖ್ಯಾತ ನಟಿಗೆ ಹಂದಿಜ್ವರ; ಆತಂಕದಲ್ಲಿ ಕುಟುಂಬ

