ಹಾಸನ: ಹಣದ (Money) ವಿಚಾರಕ್ಕೆ ಒಂದೇ ಮನೆಯ ಅಳಿಯಂದಿರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೇಲೂರು (Belur) ತಾಲೂಕಿನ ಅರೇಹಳ್ಳಿಯಲ್ಲಿ ನಡೆದಿದೆ.
ಮಹಮದ್ ಸಿದ್ದಿಕ್ (33) ಕೊಲೆಯಾದ ದುರ್ದೈವಿ. ಸುಜೀತ್ (29) ಕೊಲೆಗೈದ ಆರೋಪಿಯಾಗಿದ್ದಾನೆ. ಒಂದು ವರ್ಷದ ಹಿಂದೆ ತಂಗಿ ದಿವ್ಯಾಳಿಗೆ ಅಕ್ಕ ರೇಷ್ಮಾ 50 ಸಾವಿರ ರೂ. ಸಾಲ ಕೊಟ್ಟಿದ್ದರು. ಹಣವನ್ನು ವಾಪಾಸ್ ಕೊಡುವಂತೆ ರೇಷ್ಮಾ, ತಂಗಿ ದಿವ್ಯಾಳನ್ನು ಕೇಳಿದ್ದರು. ಇದೇ ವಿಚಾರಕ್ಕೆ ರೇಷ್ಮಾ ಪತಿ ಮಹಮದ್ ಸಿದ್ದಿಕ್ ಹಾಗೂ ದಿವ್ಯಾ ಪತಿ ಸುಜಿತ್ ನಡುವೆ ಜಗಳ ಶುರುವಾಗಿದೆ. ಜಗಳ ತಾರಕಕ್ಕೇರಿ ಸುಜೀತ್ ತನ್ನ ಬಳಿಯಿದ್ದ ಕತ್ತರಿಯಿಂದ ಮಹಮದ್‌ಸಿದ್ದಿಕ್‌ಗೆ ಹಲವು ಬಾರಿ ಇರಿದಿದ್ದ. ಇದನ್ನೂ ಓದಿ: ವೀಡಿಯೋ ವೈರಲ್ ಬಳಿಕ ತಂದೆ, ಸಹೋದರನಿಂದ ಯುವತಿಯ `ಮರ್ಯಾದಾ ಹತ್ಯೆ’ – ಅಪಘಾತದಂತೆ ಬಿಂಬಿಸಲು ಯತ್ನ
ಗಂಭೀರವಾಗಿ ಗಾಯಗೊಂಡಿದ್ದ ಮಹಮದ್‌ಸಿದ್ದಿಕ್‌ನನ್ನು ಅರೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಪರಿಸ್ಥಿತಿ ಚಿಂತಾನಜಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಮದ್ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಅರೇಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರೀಲ್ಸ್ ವಿಚಾರಕ್ಕೆ ಗಲಾಟೆ; ಬೆಂಗಳೂರಲ್ಲಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ

