– ಮೊದಲ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ 368ಕ್ಕೆ ಆಲೌಟ್
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನ ಭಾರತೀಯ ಬ್ಯಾಟರ್ಗಳು ಪ್ರಾಬಲ್ಯ ಸಾಧಿಸಿದ್ದಾರೆ. ಆರಂಭಿಕ ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್ ರಾಹುಲ್ ಅರ್ಧಶತಕಗಳ ನೆರವಿನಿಂದ ಭಾರತ 2ನೇ ದಿನದ ಅಂತ್ಯಕ್ಕೆ 159 ರನ್ಗಳಿಗೆ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದೆ.
KL RAHUL – The man for overseas Test in Indian history. 🇮🇳😍 https://t.co/d5OJ7DGIot
— Johns. (@CricCrazyJohns) November 20, 2026
ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನ 2ನೇ ದಿನದಾಟದಲ್ಲಿ ಭಾರತೀಯ ಬ್ಯಾಟರ್ಗಳು ಸಾಮರ್ಥ್ಯ ತೋರಿದರು. ಆರಂಭಿಕರಾದ ಕೆ.ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ವಿಕೆಟ್ಗೆ 170 ಎಸೆತಗಳಲ್ಲಿ 130 ರನ್ಗಳ ಜೊತೆಯಾಟ ನೀಡಿತ್ತು. ಈ ವೇಳೆ ಏಕದಿನ ಶೈಲಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದ ಯಶಸ್ವಿ ಜೈಸ್ವಾಲ್ 85 ರನ್ಗಳಿಗೆ (89 ಎಸೆತ, 16 ಬೌಂಡರಿ) ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು.
ಸದ್ಯ ಕೆ.ಎಲ್ ರಾಹುಲ್ 52 ರನ್ (116 ಎಸೆತ, 5 ಬೌಂಡರಿ), ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕಲ್ 16 ರನ್ ಗಳಿಸಿ ಕ್ರೀಸ್ನಲ್ಲಿ ಉಳಿಸಿದ್ದಾರೆ. ಶನಿವಾರ ಈ ಜೋಡಿ 3ನೇ ದಿನದಾಟ ಆರಂಭಿಸಲಿದೆ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 368 ರನ್ಗಳಿಗೆ ಆಲೌಟ್ ಆಯಿತು. ಭಾರತದ ಬೌಲರ್ಗಳು ಮೇಲುಗೈ ಸಾಧಿಸಿದರು. ಜಸ್ಪ್ರೀತ್ ಬುಮ್ರಾ 29 ಓವರ್ಗಳಲ್ಲಿ 92 ರನ್ ನೀಡಿ 4 ವಿಕೆಟ್ ಕಿತ್ತರೆ, ಆಕಾಶ್ ದೀಪ್ 3 ವಿಕೆಟ್, ಅನ್ಶುಲ್ ಕಾಂಬೋಜ್ 2 ವಿಕೆಟ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು.


