ಸೌತ್ ಸಿನಿರಂಗದ ಸ್ಟಾರ್ ನಟಿ ಸಮಂತಾ ರುತ್ ಪ್ರಭು (Samantha Ruth Prabu) ಮತ್ತು ನಿರ್ದೇಶಕ-ನಿರ್ಮಾಪಕ ರಾಜ್ ನಿಡಿಮೋರು ದಂಪತಿ ಗಂಡು ಮಗು ಜನಿಸಿದೆ.
ಗುರುವಾರ ಸಮಂತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಇಂದು (ನವೆಂಬರ್ 20) ಸೋಶಿಯಲ್ ಮೀಡಿಯಾ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ತಮ್ಮ ಮುದ್ದಾದ ಮಗುವಿನ ಆಗಮನವನ್ನು ಸಮಂತಾ ವಿಶೇಷ ಫೋಟೋ ಮೂಲಕ ಘೋಷಿಸಿದ್ದಾರೆ. ಈ ಫೋಟೋದಲ್ಲಿ ಸಮಂತಾ ಮತ್ತು ರಾಜ್, ತಮ್ಮ ಶಿಶುವಿನ ಪುಟ್ಟ ಬೆರಳುಗಳನ್ನು ಪ್ರೀತಿಯಿಂದ ಹಿಡಿದುಕೊಂಡಿದ್ದಾರೆ. ಈ ಮೂಲಕ ತಮ್ಮ ಜೀವನದ ಹೊಸ ಅಧ್ಯಾಯವನ್ನು ಶುರು ಮಾಡಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ʻಅವರ್ ಬ್ಯೂಟಿಫುಲ್ ಬೇಬಿ ಬಾಯ್ ದೇವʼ ಎಂದು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನ ಕ್ಯಾಪ್ಶನ್ ನಲ್ಲಿ ಬರೆದಿದ್ದಾರೆ.
ಈ ಸುದ್ದಿ ಹೊರಬೀಳುತ್ತಿದ್ದಂತೆ ಸಿನಿಮಾ ರಂಗದ ಗಣ್ಯರು ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ನಟ ವರುಣ್ ಧವನ್, ತಮನ್ನಾ ಭಾಟಿಯಾ, ವರಲಕ್ಷ್ಮಿ ಶರತ್ಕುಮಾರ್ ಸೇರಿದಂತೆ ಹಲವು ತಾರೆಯರು ದಂಪತಿಗೆ ಅಭಿನಂದನೆ ಸಲ್ಲಿಸಿ, ಪುಟ್ಟ ಕಂದಮ್ಮನಿಗೆ ಪ್ರೀತಿ ಹಾರೈಸಿದ್ದಾರೆ. ಇದನ್ನೂ ಓದಿ: 15 ಶೌಚಾಲಯ ವ್ಯವಸ್ಥೆ ಮಾಡಿದ್ದೇವೆಂದ ಮಹಿಳಾ ಆಯೋಗದ ಅಧ್ಯಕ್ಷರಿಗೆ ಕ್ಲಾಸ್; ತಬ್ಬಿಬ್ಬಾದ ನಾಗಲಕ್ಷ್ಮಿ ಚೌಧರಿ
ಕಳೆದ ವರ್ಷ ಡಿಸೆಂಬರ್ 1, 2025 ರಂದು ಕೊಯಮತ್ತೂರಿನ ಇಶಾ ಫೌಂಡೇಶನ್ನಲ್ಲಿ ಆಪ್ತರ ಸಮ್ಮುಖದಲ್ಲಿ ಸಮಂತಾ ಮತ್ತು ರಾಜ್ ನಿಡಿಮೋರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ 2026ರ ಜೂನ್ನಲ್ಲಿ ನಡೆದ ‘ಮಾ ಇಂಟಿ ಬಂಗಾರಂ’ ಸಿನಿಮಾದ ಸಕ್ಸಸ್ ಮೀಟ್ನಲ್ಲಿ ಸಮಂತಾ ತಾವು ತಾಯಿಯಾಗುತ್ತಿರುವ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದರು. ಅಲ್ಲದೆ, ತಾಯ್ತನವನ್ನು ಆನಂದಿಸಲು ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಳ್ಳುವುದಾಗಿಯೂ ಹೇಳಿದ್ದರು. ಈ ವಾರದ ಆರಂಭದಲ್ಲಷ್ಟೇ ದಂಪತಿ ಮನೆಯಲ್ಲಿ ವಿಶೇಷ ಪೂಜೆ ಕೂಡ ನೆರವೇರಿಸಿದ್ದರು.ಇದನ್ನೂ ಓದಿ: ಅಂತಾರಾಷ್ಟ್ರೀಯ ಚಿತ್ರೋತ್ಸವದ ಭಾರತೀಯ ಪನೋರಮಾಗೆ ತುಳು ಚಿತ್ರ
