ಬೆಂಗಳೂರಿನಲ್ಲಿ (Bengaluru) ಮಾತಾಡಿದ ಅವರು, ಆಶಾ ಕಾರ್ಯಕರ್ತೆಯರನ್ನ ನಾನು ದೆಹಲಿಗೆ (Dehli) ಕರೆಸಿ ಶಿಕ್ಷಣ ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರನ್ನ ಭೇಟಿ ಮಾಡಿಸಿದ್ದೆ .ನನಗೆ ಇತಿ ಮಿತಿ ಇದೆ. ಮುಂದೆ ನಮ್ಮ ರಾಜ್ಯದಲ್ಲಿ ಓಆಂ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಅನ್ನೋ ವಿಶ್ವಾಸ ಇದೆ. ಆಗ ನನ್ನದೇ ಆದಂತಹ ಈ ವರ್ಗದ ಹೆಣ್ಣುಮಕ್ಕಳಿಗೆ ಸಹಕಾರ ಮಾಡ್ತೀವಿ. ಕೂಡಲೇ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸರ್ಕಾರ ತೀರ್ಮಾನ ಮಾಡಬೇಕು ಎಂದಿದ್ದಾರೆ. ಇದನ್ನೂ ಓದಿ: 15 ಶೌಚಾಲಯ ವ್ಯವಸ್ಥೆ ಮಾಡಿದ್ದೇವೆಂದ ಮಹಿಳಾ ಆಯೋಗದ ಅಧ್ಯಕ್ಷರಿಗೆ ಕ್ಲಾಸ್; ತಬ್ಬಿಬ್ಬಾದ ನಾಗಲಕ್ಷ್ಮಿ ಚೌಧರಿ
ಆಶಾ ಕಾರ್ಯಕರ್ತೆಯರಿಗೆ ಬರೋ ಗೌರವ ಧನ ನೋಡಿದ್ದೇನೆ. ಅವರ ಡಿಮ್ಯಾಂಡ್ ನ್ಯಾಯಯುತವಾದ ಡಿಮ್ಯಾಂಡ್. ಸ್ವಾರ್ಥಕ್ಕೆ ಹೇಳ್ತಿಲ್ಲ. 8 ಸಾವಿರ ರೂ.ಗೆ ಇವತ್ತು ಬದುಕೋಕೆ ಸಾಧ್ಯನಾ? ಮುಂದೆ ನನಗೆ ನಾಡಿನ ಜನತೆ ಶಕ್ತಿ ಕೊಟ್ಟರೆ ಅವರಿಗೆ ಸಹಾಯ ಮಾಡ್ತೀನಿ. ಈ ರೀತಿ ಚಳಿಯಲ್ಲಿ ಹೋರಾಟ ಮಾಡೋದು ನನ್ನ ಮನಸಿಗೆ ನೋವಾಗಿದೆ. ಸರ್ಕಾರಕ್ಕೆ ಅಲ್ಪಸ್ವಲ್ಪ ಮಾನವೀಯತೆ ಇದ್ದರೆ, ಯಾವುದ್ಯಾವುದಕ್ಕೋ ಖರ್ಚು ಮಾಡ್ತಾರೆ. ಈ ವರ್ಗದ ಜನರಿಗೆ ಗೌರವ ಸಲ್ಲಿಸೋದು ಅವರ ಕರ್ತವ್ಯ ಇದೆ. ಅದನ್ನ ಮಾಡಬೇಕು ಅಂತ ವಾಗ್ದಾಳಿ ನಡೆಸಿದ್ದಾರೆ.
ಭಾರತ್ ಜೋಡೋಕೆ ಹಣ ಕೊಡ್ತಾರೆ. ಹೀಗೆ ಸ್ವೇಚ್ಛಾಚ್ಚರವಾಗಿ ಹಣ ಖರ್ಚು ಮಾಡಿಕೊಂಡು ಹೋಗ್ತಾ ಇದ್ದಾರೆ. ಇದಕ್ಕಿಂತ ಅಲ್ಲಿ ಕೆಲಸ ಮಾಡೋರಿಗೆ ಗೌರವ ಕೊಟ್ಟು ಅವರಿಗೆ ಸೌಕರ್ಯ ಮಾಡಿಕೊಟ್ಟರೆ ಅವರೇ ನಿಮ್ಮ ಪಕ್ಷದ ಕಾರ್ಯಕರ್ತರಾಗಿ ದುಡಿಯುತ್ತಾರೆ. ನಿಮ್ಮ ಪಕ್ಷ ಬಲಪಡಿಸಿಕೊಳ್ಳಲು ನಿಮಗೊಂದು ನೈತಿಕತೆ ಇರುತ್ತದೆ. ಕಾರ್ಯಕರ್ತರಿಗೆ ದುಡ್ಡು ಕೊಟ್ಟು ಕಳೆಯೋದನ್ನ ಇಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡೋರಿಗೆ ಗೌರವ ಕೊಟ್ಟರೆ ಅವರೇ ನಿಮ್ಮ ಪರ ಕೆಲಸ ಮಾಡ್ತಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: `ಬಸವ ಮಂಟಪ’ ಕೃತಿ ಬ್ಯಾನ್ – ಬೀದರ್ನಲ್ಲಿ ಪರಸ್ಪರ ಸಿಹಿ ಹಂಚಿಕೊಂಡು ಬಸವ ಭಕ್ತರ ಸಂಭ್ರಮಾಚರಣೆ
ಕೇಂದ್ರ ಸರ್ಕಾರ ಗೌರವ ಧನ ಜಾಸ್ತಿ ಮಾಡಲಿ ಎಂಬ ಸರ್ಕಾರದ ಹೇಳಿಕೆ ವಿಚಾರಕ್ಕೆ ಕಿಡಿಕಾರಿದ ಅವರು, ಎಲ್ಲದ್ದಕ್ಕೂ ಕೇಂದ್ರ ಸರ್ಕಾರ ಅಂತ ಹೇಳೋದ್ರಲ್ಲಿ ಅರ್ಥ ಏನಿದೆ. ರಾಜ್ಯ ಸರ್ಕಾರ ಇರೋದು ಯಾಕೆ? ಕೇಂದ್ರ ಸರ್ಕಾರ ಮಾಡಿಲ್ಲ. ರಾಜ್ಯ ಸರ್ಕಾರ ಯಾಕೆ ಮಾಡಬಾರದು. ಅವರು ಕೆಲಸ ಮಾಡ್ತಾ ಇರೋದು ನಮ್ಮ ನಾಡಿನ ಜನತೆಗೆ, ನಮ್ಮ ಹಳ್ಳಿ ಜನತೆಗೆ. ಕೇಂದ್ರ ಸರ್ಕಾರ ಮಾಡಲಿ ಅಂತ ಯಾಕೆ ಹೇಳಬೇಕು? ನಮ್ಮ ರಾಜ್ಯ ಸರ್ಕಾರ ಜಾಸ್ತಿ ಮಾಡಬೇಕು. ಎಲ್ಲದ್ದಕ್ಕೂ ಕೇಂದ್ರ ಸರ್ಕಾರ ಅಂದರೆ ಏನು ಮಾಡೋಕೆ ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಕೆಲಸ ಒಂದು ಪರಿಮಿತಿಯಲ್ಲಿ ಇದೆ. ನಾನೇನು ಮಾಡಲು ಆಗಲ್ಲ. ಇಲ್ಲಿ ನಾನು ಇದ್ದಾಗ ಅನೇಕ ಬಾರಿ ಹಲವು ತೀರ್ಮಾನ ಮಾಡಿದ್ದೇನೆ. ಈ ಸರ್ಕಾರ ಆಶಾ ಕಾರ್ಯಕರ್ತೆರಿಗೆ ತಕ್ಷಣ ಏನಾದ್ರು ತೀರ್ಮಾನ ಮಾಡಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಬಾಗಲಕೋಟೆ | ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ-ಪತ್ನಿ ನೇಣಿಗೆ ಶರಣು
