– ಅಮಿತ್ ಶಾಗೆ ಕರ್ನಾಟಕದಲ್ಲಿ ನಡೆಯುತ್ತಿರುವುದೆಲ್ಲವೂ ಗೊತ್ತಿದೆ
– ಹೆಸರು ಬದಲಿಸೋದಲ್ಲ ಕೆಲಸದಲ್ಲಿ ಶ್ರದ್ದೆ ಇರಬೇಕು: ಸಿಎಂಗೆ ಕೌಂಟರ್
ಬೆಂಗಳೂರು: ಹಿರಿಯೂರು ಉಪ ಚುನಾವಣೆ ನಮಗೆ ಗೆಲುವು ಮುಖ್ಯ. ಟಿಕೆಟ್ ಬಗ್ಗೆ ಪ್ರತಿಷ್ಠೆ ಇಲ್ಲ. ಅಮಿತ್ ಶಾ ಅವರಿಗೆ ಗ್ರೌಂಡ್ ರಿಪೋರ್ಟ್ ತಿಳಿಸಿದ್ದೇನೆ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(H D Kumarawamy) ತಿಳಿಸಿದ್ದಾರೆ.
ಅಮಿತ್ ಶಾ ಭೇಟಿ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಾತುಕತೆ ಫಲಪ್ರದ ಮಾಡಿಕೊಳ್ಳಲು ನಾನು ಹೋಗಿರಲಿಲ್ಲ. ಮೊನ್ನೆ ಚರ್ಚೆ ಮಾಡಿದ್ದೆವು. ನಿನ್ನೆ ಸಮಯ ಕೊಟ್ಟಿದ್ದರು ಭೇಟಿ ಮಾಡಿದ್ದೆ. ಗ್ರೌಂಡ್ ರಿಯಾಲಿಟಿ ವಿವರವಾಗಿ ಹೇಳಿದ್ದೇನೆ. ನನಗೆ ಟಿಕೆಟ್ ವಿಚಾರದಲ್ಲಿ ಪ್ರತಿಷ್ಠೆ ಇಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ದ ಹೋರಾಟ ಮಾಡ್ತಾ ಇದ್ದೇವೆ. ಈ ಹೋರಾಟ ಅರ್ಥಪೂರ್ಣವಾಗಿ ಮುಂದುವರೆಯಬೇಕು ಎಂದರು.
ಹಿರಿಯೂರು ಚುನಾವಣೆ ಗೆಲ್ಲೋದು ಮುಖ್ಯ
ಇದರಲ್ಲಿ ಪ್ರತಿಷ್ಠೆ ಇಲ್ಲ. ಗ್ರೌಂಡ್ ರಿಯಾಲಿಟಿ ಮುಕ್ತವಾಗಿ ಅಮಿತ್ ಶಾ ಜೊತೆ ಚರ್ಚೆ ಮಾಡಿದೆ. ಅವರಿಗೂ ನಾನು ಹೇಳಿದ್ದೇನೆ ವಯಕ್ತಿಕ ಪ್ರತಿಷ್ಠೆಗಿಂತ ಚುನಾವಣೆ ಗೆಲ್ಲಬೇಕು. ಆ ನಿಟ್ಟಿನಲ್ಲಿ ತೀರ್ಮಾನ ಮಾಡಬೇಕು ಅಂತ ಅವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
ಸ್ಥಳೀಯ ಬಿಜೆಪಿ ನಾಯಕರಿಗೆ ಹೇಳ್ತೀನಿ. ಅಶೋಕ್ ನನಗೇನು ವೈರಿ ಅಲ್ಲ ಆತ್ಮೀಯ ಸ್ನೇಹಿತ. ಸಾರ್ವಜನಿಕವಾಗಿ ಚರ್ಚೆ ಮಾಡೋದು ಅನಾವಶ್ಯಕ. ನಾವು ನಾಲ್ಕು ಗೋಡೆ ಮಧ್ಯೆಯಲ್ಲಿ ಕುಳಿಕೊಂಡು ಒಮ್ಮತದಲ್ಲಿ ಹೋಗಬೇಕು ಅನ್ನೋದು ನನಗೆ ಅಭಿಪ್ರಾಯ. ಬಿಜೆಪಿ ಅಭ್ಯರ್ಥಿಯೋ? ಜೆಡಿಎಸ್ ಅಭ್ಯರ್ಥಿಯೋ ಪ್ರಶ್ನೆ ಅಲ್ಲ. NDA ಅಭ್ಯರ್ಥಿ ಪ್ರಶ್ನೆ. ಕೂತು ಚರ್ಚೆ ಮಾಡ್ತೀವಿ. ನನಗೇನು ಆತುರವಿಲ್ಲ ಎಂದರು.
2 ತಿಂಗಳಿಂದ ನಿರಂತರವಾಗಿ ಈ ಸರ್ಕಾರದ ವಿರುದ್ಧ ಹೋರಾಟ ಮಾಡ್ತಾ ಇದ್ದೇನೆ. ನೈಸ್, ಕೆಪಿಎಸ್ಸಿ ಹಗರಣ, ಸ್ಟಿಂಗ್, ಬಿಡದಿ ವಿಚಾರದಲ್ಲಿ ಹೋರಾಟ ಮಾಡ್ತಾ ಇದ್ದೇನೆ. ಈ ಎಲ್ಲ ಹಗರಣದ ಬಗ್ಗೆ ಕಟುವಾಗಿ ಟೀಕೆ ಮಾಡಿರೋನು ನಾನು. ಅವರಿಂದ ಜಾಸ್ತಿ ಬೈಸಿಕೊಂಡರುವವನು ನಾನೇ. ನನ್ನ ಹೋರಾಟ ಎನ್ಡಿಎಗೆ ಶಕ್ತಿ ತುಂಬೋಕೆ ಅಂತ ತಿಳಿಸಿದರು. ಅಮಿತ್ ಶಾ ಮುಕ್ತವಾಗಿ ಇದ್ದಾರೆ. ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋಗಬೇಕು ಅಂತ ಹೇಳಿದ್ದಾರೆ. ಹೈಕಮಾಂಡ್ ನಾಯಕರ ಮನಸಿನಲ್ಲೂ ಇದೇ ಇದೆ. ಓಪನ್ ಮೈಂಡ್ ಇಟ್ಟುಕೊಂಡಿದ್ದಾರೆ. ನಮ್ಮ ಮೈತ್ರಿ ಬಿರುಕುಗೊಳಿಸುವುದು, ಮನಸ್ತಾಪ ಮಾಡಲು ಯಾರಾದ್ರು ಪ್ರಯತ್ನ ಪಟ್ಟರೆ ಅವರು ಯಶಸ್ವಿಯಾಗಲ್ಲ ಅಂತ ವಿರೋಧಿಗಳಿಗೆ ತಿರುಗೇಟು ಕೊಟ್ರು.
ಅಮಿತ್ ಶಾ ಕೆಲವು ಸೂಚನೆ ಕೊಟ್ಟಿದ್ದಾರೆ. ಅದರ ಮೇಲೆ ಚರ್ಚೆ ಮಾಡ್ತೀವಿ. ನಮ್ಮ ಪಕ್ಷವೇ ನಿಲ್ಲಬೇಕು ಅನ್ನೋದಲ್ಲ ನಮಗೆ ಚುನಾವಣೆ ಗೆಲ್ಲಬೇಕು. ಹಿರಿಯೂರು ಚುನಾವಣೆ ಗೆಲ್ಲಬೇಕು. ಕಾಂಗ್ರೆಸ್ ಪಕ್ಷ ಹಲವಾರು ಜಾತಿ ಮಂತ್ರಿಗಳನ್ನು ಹಿರಿಯೂರಿನಲ್ಲಿ ಇಟ್ಟಿದ್ದಾರೆ. ಜಾತಿಗೊಬ್ಬ ಮಂತ್ರಿ ಇಟ್ಟಿದ್ದಾರೆ. ಅಧಿಕಾರ, ಹಣ ಬಲ ಇಟ್ಟುಕೊಂಡು ಹೊರಟಿದ್ದಾರೆ. ಇದನ್ನ ಓವರ್ ಕಮ್ ಮಾಡಬೇಕಾದ್ರೆ ನಮ್ಮಲ್ಲಿ ಒಗ್ಗಟ್ಟು ಇರಬೇಕು. ಅದು ನಮಗೆ ಇರಬೇಕಾದ ಪ್ರಾಮುಖ್ಯತೆ ಅಂತ ತಿಳಿಸಿದರು.
ಅಮಿತ್ ಶಾ ಗೆ ನಾನು ಮಾಡ್ತಾ ಇರೋ ಹೋರಾಟದ ಬಗ್ಗೆ ಗೊತ್ತು. ಅಮಿತ್ ಶಾ ಗೆ ಮಿನಿಟ್ ಟು ಮಿನಿಟ್ ಕರ್ನಾಟಕದಲ್ಲಿ ಏನ್ ನಡೆಯುತ್ತಿದೆ ಗೊತ್ತಿದೆ. ನನ್ನ ಹೋರಾಟದ ಬಗ್ಗೆ ಶಾ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿ ವಿಷಯವೂ ಅವರಿಗೆ ಗೊತ್ತಿದೆ. ಅಂತಿಮವಾಗಿ ನಮ್ಮ ಪಕ್ಷದ ಉದ್ದೇಶ ಭ್ರಷ್ಟ ಸರ್ಕಾರ ತೆಗೆಯಬೇಕು. ಜನ ವಿರೋಧಿ ನೀತಿ ಸರ್ಕಾರ ತೆಗೆಯೋದು ನಮ್ಮ ಪಕ್ಷದ ಪ್ರಾಮುಖ್ಯತೆ ಅಂತ ಸ್ಪಷ್ಟಪಡಿಸಿದರು.ಇದನ್ನೂ ಓದಿ: `ಬಸವ ಮಂಟಪ’ ಕೃತಿ ಬ್ಯಾನ್ – ಬೀದರ್ನಲ್ಲಿ ಪರಸ್ಪರ ಸಿಹಿ ಹಂಚಿಕೊಂಡು ಬಸವ ಭಕ್ತರ ಸಂಭ್ರಮಾಚರಣೆ
ಸಿಎಂಗೆ ಹೆಚ್ಡಿಕೆ ಕೌಂಟರ್
ಹೆಸರು ಬದಲಾವಣೆಯಿಂದ ಏನು ಇಲ್ಲ. ಮಾಡೋ ಕೆಲಸದಲ್ಲಿ ಶ್ರದ್ದೆ ಇರಬೇಕು ಅಂತ ಸಿಎಂ ಡಿಕೆಶಿವಕುಮಾರ್ ವಿರುದ್ದ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಕುಮಾರಕೃಪಗೆ ಗಂಗಾ ಹೆಸರು ಇಟ್ಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗಂಗಾ ಹೆಸರು ಇಡೋದು ಇನ್ನೊಂದು ಹೆಸರು ಇಡೋದ್ರೀಂದ ಏನು ಆಗೊಲ್ಲ. ನಾವು ಮಾಡೋ ಕೆಲಸದಲ್ಲಿ ಶ್ರದ್ಧೆ ಇರಬೇಕು. ಅದರಲ್ಲಿ ಪಾವಿತ್ರತೆ, ಪಾರದರ್ಶಕತೆ ಇರಬೇಕು ಅಂತ ಸಿಎಂಗೆ ಲೇವಡಿ ಮಾಡಿದ್ರು.
ನಿನ್ನೆ ನಗರಾಭಿವೃದ್ಧಿ ಇಲಾಖೆ ಸಭೆಯಲ್ಲಿ ಭ್ರಷ್ಟಾಚಾರ ಮಾಡೋರಿಗೆ ಬಡಿದು ಹಾಕ್ತೀನಿ ಅಂದಿದ್ದಾರೆ. ಅದೇನು ಬಡುತ್ತಾರೋ ಏನೋ ನೋಡೋಣ ಎಂದು ಕೈ ಮುಗಿದು ಲೇವಡಿ ಮಾಡಿದರು.ಇದನ್ನೂ ಓದಿ: ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಸಹಿಸುವುದಿಲ್ಲ: ಪರಮೇಶ್ವರ್
