ಬೆಂಗಳೂರು: ನಗರದಲ್ಲಿ ಟನಲ್ ರೋಡ್ (Tunnel Road) ನಿರ್ಮಾಣಕ್ಕೆ ಸಂಬಂಧಿಸಿದಂತೆ ಲಾಲ್‌ಬಾಗ್ (Lalbagh) ಬಳಿ ಎಕ್ಸಿಟ್ ನಿರ್ಮಿಸಲು ಯೋಜಿಸಿದ್ದ ಸರ್ಕಾರ ಇದೀಗ ಆ ಚಿಂತನೆಯನ್ನು ಕೈಬಿಟ್ಟಿದೆ.
ಲಾಲ್‌ಬಾಗ್ ಬಳಿ ಟನಲ್ ಎಕ್ಸಿಟ್ (Tunnel Exit) ನಿರ್ಮಿಸುವುದರಿಂದ ಲಾಲ್‌ಬಾಗ್‌ನ ಸಾಕಷ್ಟು ಜಾಗಕ್ಕೆ ಹಾನಿ ಆಗುತ್ತದೆ. ಹೀಗಾಗಿ ಅದರ ಬದಲು ಬೇರೆಡೆಗೆ ನಿರ್ಮಿಸಲು ಸರ್ಕಾರ ಚಿಂತಿಸಿದೆ. ಜೊತೆಗೆ ಟನಲ್ ಎಕ್ಸಿಟ್ ನಿರ್ಮಾಣಕ್ಕೆ ಸೂಕ್ತವಾದ ಜಾಗ ಗುರುತಿಸಲು ಜಿಬಿಎಗೆ ಸಿಎಂ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: 100 ದಿನದ ಸಂಭ್ರಮದಲ್ಲಿ ಡಿಕೆ ಸರ್ಕಾರ| ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪಟ್ಟಿ ಬಿಡುಗಡೆ – ಯಾವ ಜಿಲ್ಲೆಗೆ ಯಾರು?
ಟನಲ್ ನಿರ್ಮಾಣದಿಂದ ಲಾಲ್‌ಬಾಗ್‌ನ ಸಾಕಷ್ಟು ಜಾಗಕ್ಕೆ ಹಾನಿ ಆಗುತ್ತದೆ ಎಂದು ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ಹೋರಾಟ ನಡೆಸಿದ್ದರು. ಇದರ ಬೆನ್ನಲ್ಲೇ ಸರ್ಕಾರ ಎಕ್ಸಿಟ್ ನಿರ್ಮಾಣ ಜಾಗ ಬದಲಿಸಲು ನಿರ್ಧರಿಸಿದೆ.

