ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್(Gyanesh Kumar) ತಕ್ಷಣವೇ ರಾಜೀನಾಮೆ ನೀಡಬೇಕು, ಒಂದು ವೇಳೆ ಅವರು ರಾಜೀನಾಮೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ನಾವು ನೇರವಾಗಿ ನರೇಂದ್ರ ಮೋದಿ(Narendra Modi ಅವರ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ(Abhijeet Dipke) ಹೇಳಿದ್ದಾರೆ.
ಮುಂಬೈ ಶಿವಾಜಿ ಪಾರ್ಕ್ನಲ್ಲಿ(Shivaji Park) ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಸುಮಾರು 13 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಜ್ಞಾನೇಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆಗಳನ್ನು ಗೆಲ್ಲಿಸಿಕೊಡಲು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ನರೇಂದ್ರ ಮೋದಿ ಸರ್ಕಾರದ “ಒಂದು ದೇಶ, ಒಂದು ಚುನಾವಣೆ” ಎಂಬುದು ಕೇವಲ ಒಂದು ಘೋಷಣೆಯಷ್ಟೇ. ಅದರ ಆ ಮರೆಯಲ್ಲಿ ಬಿಜೆಪಿ ದೇಶದಲ್ಲಿ “ಒಂದು ದೇಶ, ಒಂದು ಪಕ್ಷ” ಎಂಬ ಸರ್ವಾಧಿಕಾರಿ ಆಡಳಿತವನ್ನು ತರಲು ಬಯಸುತ್ತಿದೆ ಎಂದು ದೀಪ್ಕೆ ಗಂಭೀರ ಆರೋಪ ಮಾಡಿದರು.
Am I dreaming or what? pic.twitter.com/NAA7ZdVPjz
— Abhijeet Dipke (@abhijeet_dipke) October 2, 2026
ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಜಂತರ್ ಮಂತರ್ನಲ್ಲಿ ಹೋರಾಟ ನಡೆಸಿದ ಕೇವಲ ಎರಡು ತಿಂಗಳಲ್ಲೇ ಮತ್ತೊಂದು ಬೃಹತ್ ಪ್ರತಿಭಟನೆ ನಡೆಸುವಂತಾಗಿದೆ. ಈ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಷ್ಟು “ಅಸಮರ್ಥ”ವಾಗಿದೆ ಎಂಬುದಕ್ಕೆ ಇದುವೇ ಸಾಕ್ಷಿ ಎಂದು ಲೇವಡಿ ಮಾಡಿದರು.
ಮುಂಬೈ ಪೊಲೀಸರು ಈ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ ಸಹ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಪೊಲೀಸರ ನಿಷೇಧ ಹಾಗೂ ಸ್ಥಳೀಯ ನಿವಾಸಿಗಳ ವಿರೋಧದ ನಡುವೆಯೂ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ, ಹೈಕೋರ್ಟ್ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್, ಅಶುತೋಷ್ ರಂಕಾ ಮತ್ತು ರತ್ನ ಸಿಂಗ್ ಅವರ ವಿರುದ್ಧ ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಭಾರತ – ಪಾಕ್ ಗಡಿಯಲ್ಲಿ ಇಬ್ಬರು ನುಸುಳುಕೋರರನ್ನು ಹೊಡೆದುರುಳಿಸಿದ ಭದ್ರತಾ ಪಡೆ
#WATCH | Maharashtra | Veteran actress Shabana Azmi joins the CJP protest at Mumbai’s Shivaji Park against the Election Commission. pic.twitter.com/Q9vVzrkS4O
— ANI (@ANI) October 2, 2026
ಬಾಲಿವುಡ್ ಗಾಯಕ ಮತ್ತು ಸಂಗೀತ ಸಂಯೋಜಕ ವಿಶಾಲ್ ದದ್ಲಾನಿ ಅವರು ಖುದ್ದಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ವೇದಿಕೆಯಲ್ಲಿ ಅಭಿಜಿತ್ ದೀಪ್ಕೆ ಅವರೊಂದಿಗೆ ನಿಂತು ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಿರಿಯ ನಟ ನಸೀರುದ್ದೀನ್ ಶಾ, ಹಿರಿಯ ನಟಿ ಶಬಾನಾ ಅಜ್ಮಿ ಪ್ರತಿಭಟನೆಗೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.
ಸಿಜೆಪಿ ಪ್ರತಿಭಟನೆಗೆ ಪರ್ಯಾಯವಾಗಿ ಮತ್ತೊಂದು ವಿರೋಧಿ ಗುಂಪು ಕೂಡ ಸ್ಥಳದಲ್ಲಿ ಜಮಾಯಿಸಿತ್ತು. ಕೈಯಲ್ಲಿ “ಅಭಿಜಿತ್ ದಿಪ್ಕೆ ಗೋ ಬ್ಯಾಕ್” ಫಲಕಗಳನ್ನು ಹಿಡಿದಿದ್ದ ಈ ಗುಂಪು, ಸಿಜೆಪಿ ನಾಯಕರು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಘೋಷಣೆಗಳನ್ನು ಕೂಗಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ದಾದರ್ ಹಾಗೂ ಶಿವಾಜಿ ಪಾರ್ಕ್ ಸುತ್ತಮುತ್ತ ಆಟೋ ರಸ್ತೆಗಳನ್ನು ಬಂದ್ ಮಾಡಿ, ಮಹಿಳಾ ಪೊಲೀಸರು ಸೇರಿದಂತೆ ಭಾರಿ ಭದ್ರತೆಯನ್ನು ನಿಯೋಜಿಸಲಾಗಿತ್ತು.

