ಚಂಡೀಗಢ: ಪಂಜಾಬ್‌ನ (Punjab) ತರನ್‌ತಾರನ್ ಜಿಲ್ಲೆಯ ಭಾರತ-ಪಾಕಿಸ್ತಾನ (India – Pakistan) ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳುವಿಕೆಗೆ ಯತ್ನಿಸಿದ ಇಬ್ಬರು ನುಸುಳುಕೋರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.
ಗಡಿ ಸಮೀಪದ ರಾಜೋಕೆ ಗ್ರಾಮದ ಬಳಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ಇಬ್ಬರು ನುಸುಳುಕೋರರು ಯತ್ನಿಸಿದ್ದರು. ಈ ವೇಳೆ ಬಿಎಸ್‌ಎಫ್ (BSF) ಸಿಬ್ಬಂದಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಟಾಪ್ ಲಷ್ಕರ್ ಉಗ್ರ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ್ಯೆ
ಶುಕ್ರವಾರ ಮುಂಜಾನೆ ರಾಜೋಕೆ ಪ್ರದೇಶದ ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಮೂವರು ಓಡಾಡುತ್ತಿದ್ದರು. ಇದನ್ನು ಗಮನಿಸಿದ BSF ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಆದರೆ ಅವರು ಹಿಂದಕ್ಕೆ ತೆರಳದೆ ಭಾರತೀಯ ಪ್ರದೇಶದತ್ತಲೇ ಬಂದಿದ್ದಾರೆ. ಈ ವೇಳೆ BSF ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಒಳನುಸುಳುಕೋರ ಪಾಕಿಸ್ತಾನ ಭಾಗಕ್ಕೆ ಹಿಂದಿರುಗಿರುವ ಸಾಧ್ಯತೆ ಇದೆ.
ಘಟನೆಯ ಬಳಿಕ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಮೃತರ ಗುರುತು ಹಾಗೂ ಅವರಿಂದ ಯಾವ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ ಎಂಬ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಇದನ್ನೂ ಓದಿ: ಭಾರತ, ಮ್ಯಾನ್ಮಾರ್ ಗಡಿಯಲ್ಲಿ ಉಗ್ರರ ದಾಳಿ – ಯೋಧ ಹುತಾತ್ಮ, ನಾಲ್ವರಿಗೆ ಗಾಯ

