ನಟ ಹಾಗೂ ತಮಿಳುನಾಡು ಸಿಎಂ ವಿಜಯ್ (CM Vijay) ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಸಿಗ್ಮಾ’ ಬಿಡುಗಡೆಯಾಗಿದ್ದು, ಇದೀಗ ಚಿತ್ರ ವೀಕ್ಷಿಸಲು ವಿಜಯ್ ಪತ್ನಿ ಸಂಗೀತಾ ಚೆನ್ನೈಗೆ ಬಂದಿದ್ದಾರೆ.
ವಿಜಯ್ ಹಾಗೂ ಸಂಗೀತಾ ಅವರ ವೈಯಕ್ತಿಕ ಜೀವನದ ಬಗ್ಗೆ ಈ ಹಿಂದೆ ಹಲವು ವರದಿಗಳು ಹರಿದಾಡಿದ್ದವು. ಸಂಗೀತಾ ಲಂಡನ್ನಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರೆ ಎನ್ನಲಾಗಿತ್ತು. ಇದೇ ವೇಳೆ ಜೇಸನ್ ಸಂಜಯ್ ಚೆನ್ನೈಗೆ ಬಂದು ತಮ್ಮ ಚೊಚ್ಚಲ ಸಿನಿಮಾ ನಿರ್ದೇಶಿಸುವ ಕನಸನ್ನು ನನಸು ಮಾಡಿಕೊಂಡಿದ್ದರು.
ಜೇಸನ್ ಸಂಜಯ್ ನಿರ್ದೇಶನದ ಮೊದಲ ಚಿತ್ರ ‘ಸಿಗ್ಮಾ’ ಇದೀಗ ಬಿಡುಗಡೆಯಾಗಿದೆ. ಆದರೆ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಂಗೀತಾ ಅಥವಾ ಕುಟುಂಬದ ಇತರ ಸದಸ್ಯರು ಕಾಣಿಸಿಕೊಂಡಿರಲಿಲ್ಲ.
ಮಗಳೊಂದಿಗೆ ಥಿಯೇಟರ್ಗೆ ಬಂದ ಸಂಗೀತಾ
ಇದೀಗ ಪುತ್ರನ ಮೊದಲ ಸಿನಿಮಾ ವೀಕ್ಷಿಸಲು ಸಂಗೀತಾ ಚೆನ್ನೈಗೆ ಆಗಮಿಸಿರುವುದು ಗಮನ ಸೆಳೆದಿದೆ. ಚೆನ್ನೈನ ಕಮಲಾ ಸಿನಿಮಾಸ್ ಮಾಲ್ನಲ್ಲಿ ‘ಸಿಗ್ಮಾ’ ಚಿತ್ರ ವೀಕ್ಷಿಸಲು ಸಂಗೀತಾ ತಮ್ಮ ಮಗಳು ದಿವ್ಯಾ ಸಶಾ ಜೊತೆ ಆಗಮಿಸಿದ್ದಾರೆ. ಇದನ್ನೂ ಓದಿ: ಬಾಲಿ ಟ್ರಿಪ್ ವೇಳೆ ಅಪಘಾತ; ಬೆನ್ನು ಮೂಳೆ ಮುರಿದುಕೊಂಡ ಬಾಲಿವುಡ್ ನಟಿ ನುಸ್ರತ್
ಕಾರಿನಲ್ಲಿ ಮಗಳೊಂದಿಗೆ ಬಂದಿಳಿದ ಸಂಗೀತಾ, ಬಳಿಕ ಥಿಯೇಟರ್ನತ್ತ ಹೆಜ್ಜೆ ಹಾಕಿದ್ದಾರೆ. ಅಮ್ಮ-ಮಗಳು ಇಬ್ಬರೂ ಸೇರಿ ಜೇಸನ್ ಸಂಜಯ್ ನಿರ್ದೇಶನದ ಮೊದಲ ಸಿನಿಮಾ ವೀಕ್ಷಿಸಿದ್ದಾರೆ.
ಪುತ್ರನ ಚೊಚ್ಚಲ ನಿರ್ದೇಶನದ ಸಿನಿಮಾವನ್ನು ವೀಕ್ಷಿಸುವ ಮೂಲಕ ಸಂಗೀತಾ ಜೇಸನ್ ಸಂಜಯ್ಗೆ ಬೆಂಬಲವಾಗಿ ನಿಂತಿರುವುದು ಇದೀಗ ಬೆಳಕಿಗೆ ಬಂದಿದೆ.ಇದನ್ನೂ ಓದಿ: ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ: ಆಸಿಯಾ ವೈಲೆಂಟ್

