ಮುಂಬೈ: ಖ್ಯಾತ ಬಾಲಿವುಡ್ ನಟಿ ನುಸ್ರತ್ ಭರುಚಾಗೆ (Nushrratt Bharuccha) ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಅವರ ಬೆನ್ನುಮೂಳೆ ಮುರಿದುಕೊಂಡಿದ್ದಾರೆ. ಸದ್ಯ ನುಸ್ರತ್ ಬಾಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಸಿನಿಮಾ ತಂಡದ ಪ್ರಚಾರಕಿ ಸಂಚಿತಾ ತ್ರಿವೇದಿ ಮಾಹಿತಿ ನೀಡಿದ್ದು, ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳ ಬಳಿಕ ನುಸ್ರತ್ ಅವರ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಬಾಲಿಯಿಂದ ಮುಂಬೈಗೆ ವಿಮಾನದ ಮೂಲಕ ಕರೆತರಲು ಸಿದ್ಧತೆ ನಡೆಯುತ್ತಿದ್ದು, ಮುಂಬೈಗೆ ಬಂದ ಬಳಿಕ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಹೇಳಿದ್ದಾರೆ.
ಟೈಗರ್ ಶ್ರಾಫ್ ಚಿತ್ರದ ಶೂಟಿಂಗ್ ವೇಳೆ ಗಾಯ
ನುಸ್ರತ್ ಭರುಚಾ ಅವರು ನಟ ಟೈಗರ್ ಶ್ರಾಫ್ ಅಭಿನಯದ ಮುಂದಿನ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲೇ ಅವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಕಥೆಗೆ ಭಾವನಾತ್ಮಕ ಆಳ ಮತ್ತು ಶಕ್ತಿ ನೀಡಬಲ್ಲ ನಟಿಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ನುಸ್ರತ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿತ್ತು. ಚಿತ್ರದಲ್ಲಿ ಪಶ್ಮಿನಾ ರೋಷನ್, ಅಭಿಷೇಕ್ ಬ್ಯಾನರ್ಜಿ ಹಾಗೂ ಎಲ್ವಿಶ್ ಯಾದವ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ: ಮೊದಲ ಹಂತದ ಶೂಟಿಂಗ್ ಮುಗಿಸಿದ ಒರಿಜಿನಲ್ ಮಾನ್ಸ್ಟರ್
ಗಾಯದ ಸ್ವರೂಪ ಮತ್ತು ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ನುಸ್ರತ್ ಅವರಿಗೆ ಸಂಪೂರ್ಣ ವಿಶ್ರಾಂತಿ ಹಾಗೂ ಚೇತರಿಕೆಗೆ ಸಮಯ ಬೇಕಾಗಬಹುದು. ಹೀಗಾಗಿ ಮುಂಬರುವ ವಾರಗಳಲ್ಲಿ ಅವರ ಸಿನಿಮಾ ಕೆಲಸ ಮತ್ತು ಇತರ ಬದ್ಧತೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.ಇದನ್ನೂ ಓದಿ: ಕೇಳುಗರು ಮೆಚ್ಚಿಕೊಂಡ ರಾಜನಿವಾಸದ `ಅಣ್ಣ ಯಾರು’ ಸಾಂಗ್

