ತಂಬೂರಿ ಫಿಲ್ಮ್ಸ್ ಅರ್ಪಿಸುವ, CANOPUS CINEMAS ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಸಿನಿಮಾ ರಾಜನಿವಾ ಸಿನಿಮಾದ ನಾಲ್ಕನೇ ಲಿರಿಕಲ್ ಹಾಡು `ಅಣ್ಣ ಯಾರು’ ಬಿಡುಗಡೆಯಾಗಿ ಬಾರಿ ಸದ್ದು ಮಾಡುತ್ತಿದೆ.
ಬಿಡುಗಡೆಯಾದ ಎರಡೇ ದಿನದಲ್ಲಿ ಈ ಹಾಡು 5 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಈ ಹಾಡಿಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ರಚಿತಾ ರಾಮ್‌ಗೆ ನಿರಾಸೆ; 2 ಗಂಟೆ ಕಾದರೂ ಹೊರಬರಲಿಲ್ಲ ದರ್ಶನ್
ಈ ಚಿತ್ರದಲ್ಲಿ ಕೃತಿಕಾ, ರಾಘವ್ ಹಾಗೂ ಶ್ರೀ ನಗರ ಕಿಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕರಾದ ದಾ.ಪಿ. ಆಂಜನಪ್ಪ ಹಾಗೂ ಸಹ ನಿರ್ಮಾಪಕರಾದ ಲೋಕೇಶ್ ಗೌಡ ಅವರ ನಿರ್ಮಾಣದಲ್ಲಿ, ಮಿಥುನ್ ಸುವರ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ವಿಜಯ್ ಯಾರ್ಡ್ಲಿ ವಹಿಸಿದ್ದಾರೆ.
ರಾಜನಿವಾಸ ಸಿನಿಮಾ ನವೆಂಬರ್ ತಿಂಗಳಲ್ಲಿ ತೆರೆಗೆ ಬರಲಿದ್ದು ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳಿಂದ ಚಿತ್ರ ಗಮನ ಸೆಳೆದಿದೆ. ಇದನ್ನೂ ಓದಿ: ʼಕುಲಶೇಖರದಲ್ಲಿ ನಮ್ಮಿಬ್ಬರು ಮಕ್ಕಳನ್ನು ಬೆಳೆಸುವʼ – ಸೌಂದರ್ಯ,ಯಶಸ್ ಮಾತುಕತೆ

