BBK 13: ಬಿಗ್‌ಬಾಸ್ ಮನೆಯಲ್ಲಿ ಸೌಂದರ್ಯ ಹಾಗೂ ಯಶಸ್ ನಡುವಿನ ಆಪ್ತತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ. ಇಬ್ಬರೂ ಹಲವು ಬಾರಿ ಸಲುಗೆಯಿಂದ ಮಾತನಾಡಿಕೊಳ್ಳುತ್ತಿರುವುದನ್ನು ಮನೆಯ ಇತರ ಸ್ಪರ್ಧಿಗಳೂ ಗಮನಿಸಿದ್ದಾರೆ. ಸದ್ಯಕ್ಕೆ ಇವರಿಬ್ಬರ ನಡುವೆ ಉತ್ತಮ ಸ್ನೇಹವಿದೆ. ಆದರೆ, ಈ ಸ್ನೇಹದ ಹಿಂದೆ ಆಟದ ಸ್ಟ್ರಾಟರ್ಜಿ ಇದೆಯಾ? ಅಥವಾ ನಿಜವಾಗಿಯೂ ಇಬ್ಬರ ನಡುವೆ ಪ್ರೀತಿ ಚಿಗುರೊಡೆಯುತ್ತಿದೆಯಾ? ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿದೆ.
ಇದೀಗ ಸೌಂದರ್ಯ ಮತ್ತು ಯಶಸ್ ನಡುವಿನ ಮತ್ತೊಂದು ಮಾತುಕತೆ ಈ ಕುತೂಹಲಕ್ಕೆ ಮತ್ತಷ್ಟು ಕಾರಣವಾಗಿದೆ. ದೊಡ್ಮನೆಯ ಫೀಲ್ಡ್ ಏರಿಯಾದ ಸಿಟ್‌ಔಟ್‌ನಲ್ಲಿ ಎದುರುಬದುರಿನ ಸೋಫಾದ ಮೇಲೆ ಇಬ್ಬರೂ ಮದುವೆ, ಮಕ್ಕಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿಕೊಂಡಿದ್ದಾರೆ.
ಮಾತಿನ ಮಧ್ಯೆ ಸೌಂದರ್ಯ, “ನಾನು ಮದುವೆಯಾಗಬಹುದಾ?” ಎಂದು ಯಶಸ್ ಬಳಿ ಕೇಳುತ್ತಾರೆ. ಇದಕ್ಕೆ ತಮ್ಮ ಕುಟುಂಬದಲ್ಲಿ ಮದುವೆ ವಿಚಾರವಾಗಿ ನಡೆಯುತ್ತಿರುವ ಮಾತುಗಳನ್ನು ಅವರು ಹೇಳಿಕೊಳ್ಳುತ್ತಾರೆ. ತಮ್ಮ ಅಕ್ಕನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಾರೆ. ತಮ್ಮ ಅಮ್ಮನಿಗೆ ಹುಡುಗ ಮಕ್ಕಳು ಎಂದರೆ ಇಷ್ಟ ಎಂದು ಸೌಂದರ್ಯ ಮಾತನಾಡುತ್ತಾರೆ.
ಈ ವೇಳೆ ಯಶಸ್ ಕೂಡ ಸೌಂದರ್ಯ ಜೊತೆ ಮಾತನಾಡುತ್ತಾ, “ಕುಲಶೇಖರದಲ್ಲಿ ನಮ್ಮಿಬ್ಬರ ಮಕ್ಕಳನ್ನು ಬೆಳೆಸುವ” ಎಂದು ಹೇಳುತ್ತಾರೆ.
ಇದಕ್ಕೆ ಸೌಂದರ್ಯ, “ಕುಲಶೇಖರದಲ್ಲಾ ಅಥವಾ ಬಾಂಬೆಯಲ್ಲಾ?” ಎಂದು ಪ್ರಶ್ನಿಸುತ್ತಾರೆ. ಆಗ ಯಶಸ್ ಮೊದಲು ಬಾಂಬೈಗೆ ಬರಬೇಕು ಎಂದು ಹೇಳುತ್ತಾರೆ. ಬಳಿಕ ಮಾತು ಮಂಡ್ಯದತ್ತ ತಿರುಗುತ್ತದೆ. ಯಶಸ್, “ಇಲ್ಲ, ಮಂಡ್ಯ” ಎಂದು ಹೇಳಿದಾಗ ಸೌಂದರ್ಯ, “ನಾನು ಮಂಡ್ಯಗೆ ಬರಬೇಕಾ ಫಸ್ಟು?” ಎಂದು ಕೇಳುತ್ತಾರೆ. ಅದಕ್ಕೆ ಯಶಸ್ ಕೂಡ ಹೌದು ಎಂದು ಪ್ರತಿಕ್ರಿಯಿಸುತ್ತಾರೆ. ಇದನ್ನೂ ಓದಿ: ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕುಸಿತ; 5.4 ಟಿಎಂಸಿಗೆ ಇಳಿದ ನೀರಿನ ಮಟ್ಟ
ಈ ಮಾತುಕತೆ ಇದೀಗ ಬಿಗ್‌ಬಾಸ್ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸೌಂದರ್ಯ ಮದುವೆ ಬಗ್ಗೆ ಮಾತನಾಡಿದ್ದು ಒಂದು ವಿಚಾರವಾದರೆ, ಅದರಲ್ಲಿ ಯಶಸ್ ಕೂಡ ಇಷ್ಟು ಆಪ್ತವಾಗಿ ಭಾಗಿಯಾಗಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ.
“ಕುಲಶೇಖರದಲ್ಲಿ ಇಬ್ಬರ ಮಕ್ಕಳನ್ನು ಬೆಳೆಸುವ” ಎಂಬ ಯಶಸ್ ಮಾತಿನ ಅರ್ಥವೇನು? ಇಬ್ಬರೂ ಭವಿಷ್ಯದ ಬಗ್ಗೆ ತಮಾಷೆಯಾಗಿ ಮಾತನಾಡಿಕೊಂಡರಾ? ಅಥವಾ ಇವರಿಬ್ಬರ ನಡುವಿನ ಸಂಬಂಧದಲ್ಲಿ ಸ್ನೇಹಕ್ಕಿಂತ ಹೆಚ್ಚಿನದೇನಾದರೂ ಇದೆಯಾ? ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲೂ ನಡೆಯುವ ಸಾಧ್ಯತೆಯಿದೆ.
ಆದರೆ ಇವರಿಬ್ಬರ ಮಾತುಕತೆಯಿಂದ ಮಾತ್ರ ಅವರ ಸಂಬಂಧದ ಬಗ್ಗೆ ಯಾವುದೇ ಖಚಿತ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಸದ್ಯಕ್ಕೆ ಇಬ್ಬರೂ ಉತ್ತಮ ಸ್ನೇಹಿತರಾಗಿರುವುದು ಮಾತ್ರ ಸ್ಪಷ್ಟ. ಈ ಮಾತಿನ ಹಿಂದಿನ ನಿಜವಾದ ಅರ್ಥವೇನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಈ ವಿಚಾರವನ್ನು ಪ್ರಸ್ತಾಪಿಸುತ್ತಾರಾ ಎಂಬ ಕುತೂಹಲವೂ ವೀಕ್ಷಕರಲ್ಲಿದೆ.ಇದನ್ನೂ ಓದಿ: ಬಾಲಕೃಷ್ಣನ ಜೊತೆ ಸೈಕಲ್ ತಳ್ಳಿಕೊಂಡೇ 40 ಸಾವಿರ ಕಿಮೀ ಪಾದಯಾತ್ರೆ ಮಾಡಿದ ಗೀತಾ ಮಾತಾಜಿ!

