ಬೆಳಗಾವಿ: ಗಾಳಿಪಟದ ಮಾಂಜಾ ದಾರ (Manja Thread) ಸಿಲುಕಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.
ಮಹಾಂತೇಶ್ ನಗರದ ನಿವಾಸಿ ದ್ರುವ ಸಂತೋಷ ಕರ್ಜಗಿ (19) ಮೃತ ದುರ್ದೈವಿ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮೃತ ದ್ರುವ ಮರಣೋತ್ತರ ಪರೀಕ್ಷೆ ನಡೆದಿದೆ. ಇದ್ದ ಒಬ್ಬ ಮಗನನ್ನೂ ಕಳೆದುಕೊಂಡ ಪೋಷಕರ ಆಕ್ರಂದನ ಶವಾಗಾರದ ಬಳಿ ಮುಗಿಲುಮುಟ್ಟಿತ್ತು. ಇದನ್ನೂ ಓದಿ: ಶ್ರೀನಿವಾಸ ಸಾಗರ ಡ್ಯಾಮ್ನಲ್ಲಿ ಮುಳುಗಿ ತಾಯಿ, ಮಗ ದುರ್ಮರಣ – ತಂದೆ, ಮಗಳು ಪಾರು

ಮಾಂಜಾ ದಾರವನ್ನು ಬ್ಯಾನ್ ಮಾಡಲಾಗಿದ್ದರೂ ಪೊಲೀಸರು, ಪಾಲಿಕೆ ಅಧಿಕಾರಿಗಳು ಯಾವ ಕ್ರಮವನ್ನು ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿಯೇ 3 ದಿನದ ಹಿಂದೆ ಮಾಂಜಾ ದಾರ ಸಿಕ್ಕಿತ್ತು. ಆದಾಗ್ಯೂ ನಾನು ಬದುಕುಳಿದಿದ್ದೇನೆ ಅಂತ ಸಚಿನ್ ಎಂಬಾತ ಹೇಳಿದ್ದಾರೆ.
ಬೆಳಗಾವಿ ಮೇಯರ್ ಪ್ರೀತಿ ಕಾಮಕರ್ ಮಾತನಾಡಿ, ಮಾಂಜಾ ದಾರ ಮಾರಾಟ ಮಾಡಿದರೆ ಕೂಡಲೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಆಯುಕ್ತರಿಗೆ ಅಂಗಡಿಗಳ ತಪಾಸಣೆ ನಡೆಸುವಂತೆ ಸೂಚನೆ ಕೊಡುತ್ತೇವೆ. ಮಹಾನಗರ ಪಾಲಿಕೆಯಿಂದಲೂ ( Belagavi City Corporation) ಬ್ಯಾನ್ ಮಾಡಲು ಸಭೆ ಮಾಡುತ್ತೇವೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಲಿಂಗ ಬದಲಾವಣೆಗೆ ಒಪ್ಪದ ತಾಯಿಯ ಬರ್ಬರ ಹತ್ಯೆ – ಅಪ್ರಾಪ್ತರಿಗೆ ಏನು ಶಿಕ್ಷೆ ಅಂತ ಚಾಟ್ ಜಿಪಿಟಿಯಲ್ಲಿ ಸರ್ಚ್ ಮಾಡಿದ್ದ ಬಾಲಕ!

