ರಾಂಚಿ: ಡೆಮಾಲಿಷನ್ ಕೆಲಸದ ವೇಳೆ ನೀರಿನ ಟ್ಯಾಂಕ್‌ನ ಸ್ಲ್ಯಾಬ್ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ರಾಂಚಿಯ (Ranchi) ಮರ್ವರಿ ಕಾಲೇಜು (Marwari College) ಬಳಿ ನಡೆದಿದೆ.
ಬುಧವಾರ (ಸೆ.9) ಸಂಜೆ ಡೆಮಾಲಿಷನ್ ಕೆಲಸ ನಡೆಯುತ್ತಿದ್ದಾಗ ನೀರಿನ ಟ್ಯಾಂಕ್‌ನ ಸ್ಲಾಬ್ ಕುಸಿದುಬಿದ್ದಿದೆ. ಪರಿಣಾಮ ಐವರು ಕಾರ್ಮಿಕರ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಮೂವರನ್ನು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಲಾಲ್‌ಬಾಗ್ ಬಳಿ ಟನಲ್ ಎಗ್ಸಿಟ್ ನಿರ್ಮಾಣ ಕೈಬಿಟ್ಟ ಸರ್ಕಾರ
ಕುಸಿತದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಎನ್‌ಡಿಆರ್‌ಎಫ್ (NDRF) ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಐವರ ಪೈಕಿ ಮೂವರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಆದರೆ ಸ್ವಲ್ಪ ಹೊತ್ತಿನ ಬಳಿಕ ಇಬ್ಬರ ಮೃತದೇಹವನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ ಎಂದು ರಕ್ಷಣಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಕೊತ್ವಾಲಿ ಪೊಲೀಸ್ ಠಾಣೆಯ ಸ್ಟೇಷನ್ ಇನ್‌ಚಾರ್ಜ್ ಮನೋಜ್ ಚೌಧರಿ ಅವರು, ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ಇಬ್ಬರೂ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ದೃಪಡಿಸಿದ್ದಾರೆ. ಸದ್ಯ ಕುಸಿತಕ್ಕೆ ನಿಖರ ಕಾರಣ ಏನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: 100 ದಿನದ ಸಂಭ್ರಮದಲ್ಲಿ ಡಿಕೆ ಸರ್ಕಾರ| ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪಟ್ಟಿ ಬಿಡುಗಡೆ – ಯಾವ ಜಿಲ್ಲೆಗೆ ಯಾರು?

