ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೋಡಿಯ `ರಣಬಾಲಿ’ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. 2 ನಿಮಿಷ 32 ಸೆಕೆಂಡುಗಳ ಅವಧಿಯ ಈ ಟೀಸರ್‌ನಲ್ಲಿ, ಬ್ರಿಟಿಷ್ ಪಡೆಗಳ ವಿರುದ್ಧ ಸೆಣಸಾಡುವ ಉಗ್ರ ಹಾಗೂ ಭಯಾನಕ ವ್ಯಕ್ತಿಯಾಗಿ `ರಣಬಾಲಿ’ಯನ್ನು ಪರಿಚಯಿಸಲಾಗಿದೆ.
ರಾಯಲಸೀಮೆಯ ಹುಲಿ ಎಂದು ಕರೆಸಿಕೊಳ್ಳುವ `ಸಿಂಗನಮಲ ಬೊಬ್ಬಿಲಿ ರಣಬಾಲಿ’ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಪತ್ನಿ ಜಯಮ್ಮ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು ರಶ್ಮಿಕಾ ಲುಕ್‌ನಲ್ಲಿ ಹೆಚ್ಚಿನ ರಹಸ್ಯ ಕಾಪಾಡಿಕೊಳ್ಳಲಾಗಿದೆ.

`ಡಿಯರ್ ಕಾಮ್ರೇಡ್’ ಚಿತ್ರದ ಬಳಿಕ ಸತತ ಸೋಲನ್ನೇ ಅನುಭವಿಸುತ್ತ ಬಂದಿರುವ ವಿಜಯ್ ದೇವರಕೊಂಡಗೆ `ರಣಬಾಲಿ’ ಚಿತ್ರ ಮೇಲೆ ಬಹಳ ನಿರೀಕ್ಷೆ ಇದೆ. ಜೊತೆಗೆ ಇದು ರಶ್ಮಿಕಾ ಜೊತೆ ಮದುವೆಯಾದ ಬಳಿಕ ತೆರೆಗೆ ಬರುತ್ತಿರುವ ಮೊದಲ ಚಿತ್ರ. ಹಾಗೂ ರಶ್ಮಿಕಾ ಜೊತೆ ಅಭಿನಯಿಸಿರುವ ಚಿತ್ರ. ಸಹಜವಾಗೇ ಕಾಂಬಿನೇಷನ್ ಹಾಗೂ ಪಾತ್ರ ನಿರೀಕ್ಷೆ ಮೂಡಿಸಿದ್ದು, ಶೀಘ್ರದಲ್ಲೇ ರಿಲೀಸ್ ಆಗಲಿದೆ.
1800ರ ದಶಕದ ಅಂತ್ಯದ ಹಿನ್ನೆಲೆಯನ್ನು ಹೊಂದಿರುವ ಈ ಕಥೆಯಲ್ಲಿ, ವಿಜಯ್ ದೇವರಕೊಂಡ ಬ್ರಿಟೀಷರು ವಿರುದ್ಧ ಹೋರಾಡುವ ಯೋಧನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಸಹಜವಾಗೇ ಇದು ಐತಿಹಾಸಿಕ ಕಥೆಯುಳ್ಳ ಚಿತ್ರವಾಗಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ. ಸದ್ಯಕ್ಕೆ ರಣಬಾಲಿ ಟೀಸರ್ ಅಬ್ಬರಿಸುತ್ತಿದೆ.
