ಯಶ್ (Yash), ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ (Ramayana) ಸಿನಿಮಾ ರಿಲೀಸ್ ಆಗಿ ಮೂರು ವಾರಗಳನ್ನು ಪೂರೈಸುವ ಸಮೀಪದಲ್ಲಿದೆ. ಬಾಕ್ಸಾಫೀಸ್ ಕಲೆಕ್ಷನ್ನಲ್ಲಿ ಸದ್ದು ಮಾಡುತ್ತಿರುವ ಚಿತ್ರ, ವಿಶ್ವಾದ್ಯಂತ ಇದುವರೆಗೆ ಒಟ್ಟು 1,704 ಕೋಟಿ ರೂ. ಕ್ಲಬ್ ಸೇರಿದೆ.
ರಾಮಾಯಣ ಸಿನಿಮಾವು ದೇಶೀಯ ಕಲೆಕ್ಷನ್ನಲ್ಲಿ ಒಟ್ಟು 1,141 ರೂ. ಗಳಿಸಿದೆ. ಹಿಂದಿಯಲ್ಲೇ 700 ಕೋಟಿ ಕಮಾಲ್ ಮಾಡಿದೆ. ಚಿತ್ರವು ಒಟ್ಟಾರೆ ಕಲೆಕ್ಷನ್ನಲ್ಲಿ ಧುರಂಧರ್ 2 ಗಿಂತ 70 ಕೋಟಿ ರೂ. ಅಂತರದಲ್ಲಿ ಮುಂದಿದೆ. ಅನಿಮಲ್ ಚಿತ್ರದ ಭಾರತದ ನಿವ್ವಳ ಕಲೆಕ್ಷನ್ ಅನ್ನು ಹಿಂದಿಕ್ಕಿ, ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಇದನ್ನೂ ಓದಿ: ‘ರಾಮಾಯಣ’ಕ್ಕಾಗಿ 10 ರಿಂದ 12 ಸಿನಿಮಾಗಳ ಆಫರ್ ತಿರಸ್ಕರಿಸಿದೆ: ಎ.ಆರ್.ರೆಹಮಾನ್
ಸ್ಯಾಕ್ನಿಲ್ಕ್ ಪ್ರಕಾರ, 19 ನೇ ದಿನದಂದು ರಾಮಾಯಣ 15,696 ಪ್ರದರ್ಶನಗಳಲ್ಲಿ 12.70 ಕೋಟಿ ರೂ. ಸಂಗ್ರಹಿಸಿದೆ. ಈ ಚಿತ್ರವು ವಿದೇಶಗಳಲ್ಲಿ ಇಲ್ಲಿಯವರೆಗೆ 567 ಕೋಟಿ ರೂ. ಗಳಿಸಿದೆ. ಇದು ವಿಶ್ವಾದ್ಯಂತ ಒಟ್ಟು ಗಳಿಕೆಯನ್ನು 1,704 ಕೋಟಿ ರೂ.ಗೆ ಏರಿಸಿದೆ.
19ನೇ ದಿನದಂದು, ಹಿಂದಿ ಭಾಷೆಯ ಕೊಡುಗೆ ಒಟ್ಟು 13,442 ಪ್ರದರ್ಶನಗಳಿಂದ 9.25 ಕೋಟಿ ರೂ. ಆಗಿದೆ. ಕನ್ನಡದಲ್ಲಿ 85 ಲಕ್ಷ ರೂ., ತಮಿಳಿನಲ್ಲಿ 80 ಲಕ್ಷ ರೂ., ತೆಲುಗಿನಲ್ಲಿ 30 ಲಕ್ಷ ರೂ. ಮತ್ತು ಮಲಯಾಳಂನಲ್ಲಿ 1.50 ಕೋಟಿ ರೂ. ಗಳಿಸಿದೆ. ಇದನ್ನೂ ಓದಿ: 3ನೇ ಭಾನುವಾರವೂ ರಾಮಾಯಣ ದಾಖಲೆ ಕಲೆಕ್ಷನ್; ಧುರಂಧರ್-2 ಹಿಂದಿಕ್ಕಿದ ಯಶ್ ಸಿನಿಮಾ
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್, ಸನ್ನಿ ಡಿಯೋಲ್, ರವಿ ದುಬೆ, ಲಾರಾ ದತ್ತ ಸೇರಿದಂತೆ ದೊಡ್ಡ ತಾರಾಗಣವಿದೆ.
