ಬೆಂಗಳೂರು: ಲಾಡ್ಜ್ಗೆ ತೆರಳಿದಾಗ ಗಲಾಟೆಯಾಗಿ ಪ್ರೇಯಸಿಯನ್ನು ಮೇಲಿಂದ ತಳ್ಳಿ ಪ್ರಿಯಕರ ಕೊಲೆ ಮಾಡಿರುವ ಘಟನೆ ನಗರದ ಅಬ್ಬಿಗೆರೆ (Abbigere) ವೈಮ್ಯಾಕ್ಸ್ ಸರ್ಕಲ್ನಲ್ಲಿರುವ ಲಾಡ್ಜ್ನಲ್ಲಿ ನಡೆದಿದೆ.
ಮೃತ ಯುವತಿಯನ್ನು ಹಾಸನ (Hassan) ಜಿಲ್ಲೆಯ ಐಶ್ವರ್ಯ ಎನ್ನಲಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: 1 ಲಕ್ಷ ರೂ. ಗಡಿಗಿಂತ ಕೆಳಗಿಳಿಯುತ್ತಾ ಚಿನ್ನ? ಬೆಲೆ ಕುಸಿತದ ಹಿಂದಿನ ಅಸಲಿ ಕಾರಣ ಏನು? ಮುಂದೇನಾಗಲಿದೆ?
ಮೃತ ಐಶ್ವರ್ಯ ಹಾಗೂ ಸಂತೋಷ್ ಪರಸ್ಪರ ಪ್ರೀತಿಸುತ್ತಿದ್ದರು. ನ.19ರಂದು ಪ್ರಿಯಕರ ಸಂತೋಷ್ ಜೊತೆ ಐಶ್ವರ್ಯ ಲಾಡ್ಜ್ಗೆ ಹೋಗಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಜಗಳ ತಾರಕಕ್ಕೇರಿದೆ. ಆಗ ಪ್ರಿಯಕರ ಸಂತೋಷ್ ಲಾಡ್ಜ್ ಮೇಲಿಂದ ತಳ್ಳಿ ಐಶ್ವರ್ಯಳನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಆರಂಭದಲ್ಲಿ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡು ಗಂಗಮ್ಮನ ಗುಡಿ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ತನಿಖೆಯ ವೇಳೆ ಸಂತೋಷ್ ಐಶ್ವರ್ಯರನ್ನ ತಳ್ಳಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ.
ಸದ್ಯ ಸಂತೋಷ್ನನ್ನ ಪೊಲೀಸರು ಅರೆಸ್ಟ್ ಮಾಡಿದ್ದು, ಮರ್ಡರ್ ಕೇಸ್ ದಾಖಲಾಗಿದೆ.ಇದನ್ನೂ ಓದಿ: ʻಜೇನʼಬಲೆಗೆ ಬಿದ್ದ ಜೆನ್ಸನ್ಗೆ ಮತ್ತೆ ಎನ್ವಿಡಿಯಾ ಸಿಇಒ ಹುದ್ದೆ – ಕಚೇರಿಗೆ ಮರಳಿದ ಹುವಾಂಗ್ಗೆ ಭರ್ಜರಿ ಸ್ವಾಗತ!
